Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಖೈದಿಗಳ ಕೈಯಲ್ಲಿ ಮೊಬೈಲ್​, ಜೈಲಿನಿಂದಲೇ ಕಾಲಿಂಗ್; ಏನಿದು ಕಥೆ?

ಈ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಸಿಗುತ್ತೆ ಎನ್ನುವ ಮಾತಿದೆ. ಜೈಲಿನಲ್ಲಿ ಇರುವ ಖೈದಿಗಳಿಗೆ ಗುಂಡು, ತುಂಡು, ಗಾಂಜಾ ಸರಳವಾಗಿ ಸಿಗುತ್ತಂತೆ. ಹೌದು ಬಳ್ಳಾರಿ ಜೈಲಿನ ಖೈದಿಗಳ ಕೈಗೆ ಮೊಬೈಲ್ ಪೋನ್ ಸಿಗುತ್ತಿದೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡುತ್ತಿದ್ದವರು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ.

ಬಳ್ಳಾರಿ: ಖೈದಿಗಳ ಕೈಯಲ್ಲಿ ಮೊಬೈಲ್​, ಜೈಲಿನಿಂದಲೇ ಕಾಲಿಂಗ್; ಏನಿದು ಕಥೆ?
ಬಳ್ಳಾರಿ ಕೇಂದ್ರ ಕಾರಾಗೃಹ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 02, 2023 | 7:05 AM

ಬಳ್ಳಾರಿ: ಜಿಲ್ಲಾ ಕೇಂದ್ರ ಕಾರಾಗೃಹ ಅಂದರೆ ಸಾಕಷ್ಟು ಪ್ರಖ್ಯಾತಿ. ಸ್ವಾತಂತ್ರ್ಯ ಹೋರಾಟಗಾರರಿದ್ದ ಈ ಜೈಲು ಸಾಕಷ್ಟು ವಿಸ್ತಾರವಾಗಿದೆ. ಸಾವಿರದ ಸಮೀಪ ಖೈದಿಗಳನ್ನ ಇಲ್ಲಿ ಬಂಧಿಸಿಡಲಾಗಿದೆ. ಆದರೆ ಜೈಲಿನೊಳಗೆ ಇರುವ ಖೈದಿಗಳಿಗೆ ನಿತ್ಯ ಗುಂಡು, ತುಂಡು, ಗಾಂಜಾ, ಸಿಗರೇಟು ಸಿಗುತ್ತೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಆದರೀಗ ಚುನಾವಣೆ ವೇಳೆ ಖೈದಿಗಳ ಕೈಗೆ ಮೊಬೈಲ್ ಪೋನ್​ಗಳು ಸಿಕ್ಕವೆ. ಹೌದು ಜೈಲಿನಲ್ಲಿರುವ ಖೈದಿಗಳು ಮೊಬೈಲ್ ಬಳಕೆ‌ ಮಾಡುತ್ತಾ ಹೊರಗಿನವರ ಜೊತೆ ಮಾತನಾಡುತ್ತಿದ್ದು, ಜೈಲಿನಿಂದಲೇ ಹೊರಗಿನ ಜಗತ್ತನ್ನ ಖೈದಿಗಳು ಆಳುತ್ತಾ ಇರುವುದು ಬಯಲಾಗಿದೆ.

ಜೈಲಿನೊಳಗಿರುವ ಖೈದಿಗಳಿಗೆ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಮೊದಲಿನಿಂದಲೂ ಇದ್ದವು. ಆದರೆ ಚುನಾವಣೆಯ ವೇಳೆ ಖೈದಿಗಳು ಜೈಲಿನಿಂದಲೇ ಹೊರಗಿನವರಿಗೆ ಬೆದರಿಕೆ ಕರೆ ಹಾಗೂ ಒಳಗಿನಿಂದಲೇ ರಾಜಕೀಯ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕ ಬೆನ್ನಲ್ಲೆ ಪೊಲೀಸರು ದಾಳಿ ನಡೆಸಿ ಖೈದಿಗಳು ಬಳಸುತ್ತಿದ್ದ ಮೊಬೈಲ್ ಹಾಗೂ ಸಿಮ್ ಕಾರ್ಡ್​ಗಳನ್ನ ಜಪ್ತಿ‌ ಮಾಡಿದ್ದಾರೆ. ಮೊಬೈಲ್ ಬಳಕೆ ಮಾಡಲು ಖೈದಿಗಳ ಜೊತೆ ಸಂಪರ್ಕ ಸಾಧಿಸಿದ್ದು ಹೇಗೆ?, ಜೈಲಿನ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಎನ್ನುವ ಬಗ್ಗೆಯೂ ಪೊಲೀಸರು ಇದೀಗ ತನಿಖೆ ತೀವ್ರಗೊಳಿಸಿದ್ದಾರೆ. ಬಳ್ಳಾರಿಯ ಗಾಂಧಿನಗರ ಪೊಲೀಸ ಠಾಣೆಯಲ್ಲಿ ದಾಖಲಾಗಿರುವ ದೂರಿನ ಮೇರೆಗೆ ಜೈಲಿನ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಮಗು ಕಳ್ಳಿಯ ಸುಳಿವು ಕೊಟ್ಟ ಉಪ್ಪಿಟ್ಟು: ಮಗು ಕಳ್ಳತನ ಮಾಡಿದ ಆರೋಪಿ ಹಿಸ್ಟರಿಯೇ ಭಯಾನಕ

ಬಳ್ಳಾರಿ ಜೈಲಿನ ಪಕ್ಕದಲ್ಲಿರುವ ಗುಡ್ಡದ ಕಡೆಯಿಂದ ಹಾಗೂ ಜೈಲು ಪಕ್ಕದಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಹಾಯ್ದು ಹೋಗುವವರು ಜೈಲಿನೊಳಗೆ ಏನೂ ಬೇಕಾದರೂ ಎಸೆದು ಖೈದಿಗಳಿಗೆ ತಲುಪಿಸುತ್ತಿದ್ದರು. ಎನ್ನುವುದು ಖಾತರಿಯಾಗಿದೆ. ಹೀಗಾಗಿ ಸಧ್ಯ ಬಳ್ಳಾರಿ ಕೇಂದ್ರ ಕಾರಾಗೃಹದ ಸುತ್ತಲೂ ಭದ್ರತೆಗಾಗಿ 27 ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ. ಜೊತೆಗೆ ಹೋಮ್ ಗಾರ್ಡ್​ ಸಿಬ್ಬಂದಿಗಳನ್ನ ಸಹ ಭದ್ರತೆ ತಪಾಸಣೆಗಾಗಿ ನಿಯೋಜನೆ ಮಾಡಲಾಗಿದೆ. ಆದರೂ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಗಾಂಜಾ, ಗುಂಡು, ತುಂಡು ಮೊಬೈಲ್​ಗಳು ಸರಳವಾಗಿ ಸರಬರಾಜು ಆಗುತ್ತಿದೆ ಎನ್ನುವ ಆರೋಪ ಈಗಲೂ ಇದೆ. ಹೀಗಾಗಿ ಇನ್ನಷ್ಟು ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಿದ್ರೆ ಮಾತ್ರ ಜೈಲಿನೊಳಗಿನ ಅಕ್ರಮವನ್ನ ತಡೆಗಟ್ಟಬಹುದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್