AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಷ್ಟದ ಭೀತಿ ತಪ್ಪಿಸಲು ಕೆಎಂಎಫ್​ನಿಂದ ಹೊಸ ಪ್ಲಾನ್; ರಾಬಕೋ ಒಕ್ಕೂಟದಿಂದ ಸಿಬ್ಬಂದಿಗಳಿಗೆ ತುಪ್ಪದ ಟಾರ್ಗೆಟ್

ರಾಬಕೋ ಸಂಸ್ಥೆಯ ಒಕ್ಕೂಟದಲ್ಲಿ ಖಾಯಂ ನೌಕರರಾಗಿರುವ ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುವ ಟಾರ್ಗೆಟ್ ನೀಡಲಾಗಿದೆ. ಇಲ್ಲಿಯವರೆಗೂ ಸಿಬ್ಬಂದಿಯೂ ಕಡ್ಡಾಯವಾಗಿ ಒಂದು ಕೆಜಿ ತುಪ್ಪ ಖರೀದಿಸಬೇಕು ಎನ್ನುವ ಆದೇಶವಿತ್ತು. ಆದರೆ ಇದೀಗ ರಾಬಕೋ ಒಕ್ಕೂಟದ ಎಲ್ಲ ಸಿಬ್ಬಂದಿಗಳು ಪ್ರತಿ ತಿಂಗಳು ಮೂರು ಕೆಜಿ ತುಪ್ಪವನ್ನು ಕಡ್ಡಾಯವಾಗಿ ಮಾರಾಟ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಿದೆ.

ನಷ್ಟದ ಭೀತಿ ತಪ್ಪಿಸಲು ಕೆಎಂಎಫ್​ನಿಂದ ಹೊಸ ಪ್ಲಾನ್; ರಾಬಕೋ ಒಕ್ಕೂಟದಿಂದ ಸಿಬ್ಬಂದಿಗಳಿಗೆ ತುಪ್ಪದ ಟಾರ್ಗೆಟ್
ರಾಬಕೋ ಒಕ್ಕೂಟ
TV9 Web
| Updated By: preethi shettigar|

Updated on: Feb 20, 2022 | 11:11 AM

Share

ಬಳ್ಳಾರಿ:  ಪ್ರಮುಖ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳದ ಹಾಲು ಒಕ್ಕೂಟ ನಷ್ಟದತ್ತ ಸಾಗಿದೆ. ಸದ್ಯ ನಾಲ್ಕೂವರೆ ಕೋಟಿ ರೂಪಾಯಿ ನಷ್ಟದಲ್ಲಿರುವ ರಾಬಕೋ ಸಂಸ್ಥೆ ನಷ್ಟದಿಂದ ಹೊರಬರಲು ಹೊಸ ಯೋಜನೆಯೊಂದನ್ನು ಮಾಡಿದೆ. ತುಪ್ಪ ಮಾರಾಟ ಹೆಚ್ಚಳ ಮಾಡಲು ಸಿಬ್ಬಂದಿಗಳಿಗೆ ಹೊಸ ಟಾರ್ಗೆಟ್ ನೀಡಲಾಗಿದೆ. ಆದರೆ ಹೆಚ್ಚು ಹೆಚ್ಚು ತುಪ್ಪ(Ghee) ಮಾರಿ ಸಂಸ್ಥೆಗೆ ಲಾಭ ತರಬೇಕಾದ ಸಿಬ್ಬಂದಿಗಳಿಗೆ ಇದೀಗ ಕಡಿಮೆ ದರಕ್ಕೆ ಹೆಚ್ಚು ತುಪ್ಪ ಸಿಗುತ್ತಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಕೆಎಂಎಫ್​ನ(KMF) ನಂದಿನಿ ತುಪ್ಪ ಅಂದರೆ ತಾಜಾ, ಪರಿಶುದ್ಧ ಸ್ವಾದಿಷ್ಠ ತುಪ್ಪ ಎನ್ನುವ ಮಾತಿದೆ. ನಂದಿನಿ ಎನ್ನುವ ಹೆಸರನ್ನೇ ಬಳಸಿ ಹಲವರು ನಕಲಿ ತುಪ್ಪ ಮಾರಾಟ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೀಗಿರುವಾಗಲೇ ಮತ್ತಷ್ಟು ತುಪ್ಪ ಮಾರಾಟವನ್ನು ಹೆಚ್ಚಳ ಮಾಡುವುದಕ್ಕೆ ಇದೀಗ ಕೆಎಂಎಫ್ ಸಂಸ್ಥೆ ಹೊಸ ಯೋಜನೆ ಮಾಡಿದೆ. ನಷ್ಟದ ಭೀತಿಯಲ್ಲಿರುವ ರಾಬಕೋ( Robako) ಒಕ್ಕೂಟವನ್ನು ಲಾಭದತ್ತ ತರಲು ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುವ ಟಾರ್ಗೆಟ್ ನೀಡಿದೆ.

ಇದು ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟ. ರಾಬಕೋ ಎಂದೇ ಹೆಸರುವಾಸಿಯಾಗಿರುವ ಈ ಒಕ್ಕೂಟ ಇದೀಗ ನಷ್ಟದಲ್ಲಿದೆ.  ಸದ್ಯ ನಾಲ್ಕುವರೆ ಕೋಟಿ ರೂಪಾಯಿ ನಷ್ಟದಲ್ಲಿರುವ ಒಕ್ಕೂಟ ಇತ್ತೀಚಿಗಷ್ಠೆ ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಿ, ಒಕ್ಕೂಟವನ್ನು ಲಾಭಕ್ಕೆ ತರುವ ಪ್ರಯತ್ನ ಮಾಡಿತ್ತು. ಇದರ ಜೊತೆಗೆ ಇದೀಗ ನಂದಿನಿ ತುಪ್ಪ ಮಾರಾಟ ಮಾಡುವುದಕ್ಕೆ ಮತ್ತೊಂದು ಯೋಜನೆ ಮಾಡಿದೆ.

ರಾಬಕೋ ಸಂಸ್ಥೆಯ ಒಕ್ಕೂಟದಲ್ಲಿ ಖಾಯಂ ನೌಕರರಾಗಿರುವ ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುವ ಟಾರ್ಗೆಟ್ ನೀಡಲಾಗಿದೆ. ಇಲ್ಲಿಯವರೆಗೂ ಸಿಬ್ಬಂದಿಯೂ ಕಡ್ಡಾಯವಾಗಿ ಒಂದು ಕೆಜಿ ತುಪ್ಪ ಖರೀದಿಸಬೇಕು ಎನ್ನುವ ಆದೇಶವಿತ್ತು. ಆದರೆ ಇದೀಗ ರಾಬಕೋ ಒಕ್ಕೂಟದ ಎಲ್ಲ ಸಿಬ್ಬಂದಿಗಳು ಪ್ರತಿ ತಿಂಗಳು ಮೂರು ಕೆಜಿ ತುಪ್ಪವನ್ನು ಕಡ್ಡಾಯವಾಗಿ ಮಾರಾಟ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಿದೆ.

ರಾಬಕೋ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಒಟ್ಟು 170 ಕ್ಕೂ ಹೆಚ್ಚು ಜನ ಕಾಯಂ ನೌಕಕರಿದ್ದಾರೆ. ಗುತ್ತಿಗೆ ಆಧಾರದಲ್ಲೂ ನೂರಾರು ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ಖಾಯಂ ನೌಕರರಿಗೆ ಇದೂವರೆಗೂ ಮಾರುಕಟ್ಟೆಗಿಂತಲೂ ಕಡಿಮೆ ದರದಲ್ಲಿ ಪ್ರತಿ ತಿಂಗಳು ಒಂದು ಕೆಜಿ ತುಪ್ಪ ಕಡ್ಡಾಯವಾಗಿ ಸಿಗುತ್ತಿತ್ತು. ಯುಟಿಪಿ ದರದಲ್ಲಿ 368 ರೂಪಾಯಿಗೆ ಎಲ್ಲ ಸಿಬ್ಬಂದಿಗಳಿಗೂ ಒಂದು ಕೆಜಿ ತುಪ್ಪವನ್ನ ಕಡ್ಡಾಯವಾಗಿ ಮಾರಾಟ ಮಾಡಿ ಹಣವನ್ನ ವೇತನದಲ್ಲೆ ಕಡಿತಗೊಳಿಸಲಾಗುತ್ತಿತ್ತು. ಆದರೆ ರಾಬಕೋ ಒಕ್ಕೂಟ ಇದೀಗ ನಷ್ಟದಲ್ಲಿ ಇರುವುದರಿಂದ ಪ್ರತಿಯೊಬ್ಬ ಸಿಬ್ಬಂದಿಯೂ ಯೂನಿಯನ್ ಟ್ರಾನ್ಸಪರ್ ಪ್ರೈಜ್​ನಲ್ಲಿ (ಯುಟಿಪಿ ) ಮೂರು ಕೆಜಿ ತುಪ್ಪವನ್ನು ಕಡ್ಡಾಯವಾಗಿ ಖರೀದಿಸಬೇಕಾಗಿದೆ. ಹೀಗೆ ಖರೀದಿಸಿದ ತುಪ್ಪವನ್ನು ಸಿಬ್ಬಂದಿಗಳು ಸಂಬಧಿಕರು, ಸ್ನೇಹಿತರು ಸೇರಿದಂತೆ ಯಾರಿಗಾದರೂ ಮಾರಾಟ ಮಾಡಬಹುದಾಗಿದೆ. ಆದರೆ ಹೊರಗಡೆ ಮಾರುಕಟ್ಟೆಯಲ್ಲಿ 470 ರೂಪಾಯಿಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟವಾಗುವ ಕೆಜಿ ತುಪ್ಪವನ್ನ ಇಲ್ಲಿ ಸಿಬ್ಬಂದಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕೆಎಂಎಫ್ ಸಿಬ್ಬಂದಿಗಳಿಗೆ ತುಪ್ಪ ಮಾರಾಟದ ಟಾರ್ಗೆಟ್ ನೀಡಿ ತುಪ್ಪ ಮಾರಾಟವನ್ನ ಹೆಚ್ಚಳ ಮಾಡುವುದು. ಮಾರುಕಟ್ಟೆಯನ್ನ ವಿಸ್ತರಣೆ ಹಾಗೂ ಉತ್ತೇಜನ ಮಾಡುವುದು ರಾಬಕೋ ಉದ್ದೇಶವಾಗಿದ್ದರೂ. ಹೆಚ್ಚು ಹೆಚ್ಚು ತುಪ್ಪ ಮಾರಾಟ ಮಾಡಿ ಸಂಸ್ಥೆಗೆ ಲಾಭ ತರಬೇಕಾದ ಸಿಬ್ಬಂದಿಗಳಿಗೆ ಕಡಿಮೆ ದರದಲ್ಲಿ ತುಪ್ಪ ಮಾರಾಟ ಮಾಡುತ್ತಿರುವುದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಅಲ್ಲದೇ ಸಂಬಧಿಕರು. ಸ್ನೇಹಿತರಿಗೆ ನಂದಿನಿ ತುಪ್ಪವನ್ನ ಪರಿಚಯ ಮಾಡುವ ಉದ್ದೇಶವೇನೂ ಒಳ್ಳೆಯದಾಗಿದ್ದರೂ ಕಡಿಮೆ ದರಕ್ಕೆ ತುಪ್ಪವನ್ನ ಯಾಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆ ಎದುರಾಗಿದೆ. ಜೊತೆಗೆ ತುಪ್ಪ ಮಾರಾಟದ ಟಾರ್ಗೆಟ್ ಅನ್ನು ಎಲ್ಲ ಸಿಬ್ಬಂದಿಗಳು ಒಪ್ಪಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ದಶಕಗಳಿಂದ ಲಾಭದಲ್ಲಿದ್ದ ರಾಬಕೋ ಒಕ್ಕೂಟ ಇದೀಗ ನಷ್ಟದತ್ತ ಸಾಗಿದೆ. ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದತ್ತ ತರಲು ಒಕ್ಕೂಟದ ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ನಿರ್ಣಯಗಳು ಸಹ ಮತ್ತಷ್ಟು ಪ್ರಶ್ನೆಗೆ ಗುರಿಯಾಗಿವೆ. ಜೊತೆಗೆ ಕಡಿಮೆ ದರಕ್ಕೆ ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡಿ ಅದನ್ನ ಮಾರುಕಟ್ಟೆ ಉತ್ತೇಜನದ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗಿರುವುದು ನಿಜಕ್ಕೂ ಮೂರ್ಖತನದ ನಿರ್ಣಯವಾಗಿದೆ. ನಂದಿನಿ ಉತ್ಪನ್ನಗಳನ್ನ ಹೆಚ್ಚು ಹೆಚ್ಚು ಮಾರಾಟ ಮಾಡಿ, ನಷ್ಟವನ್ನ ತಗ್ಗಿಸಲು ಸಂಸ್ಥೆಯ ಖರ್ಚುಗಳನ್ನ ಕಡಿಮೆ ಮಾಡಬೇಕಾದ ಒಕ್ಕೂಟ ಇದೀಗ ಕಡಿಮೆ ದರಕ್ಕೆ ತುಪ್ಪವನ್ನ ಮಾರಾಟ ಮಾಡುತ್ತಿರುವುದು ನಿಜಕ್ಕೂ ಅನುಮಾನಕ್ಕೆ ಕಾರಣವಾಗಿದೆ. ಇನಾದರೂ ರಾಬಕೋ ಒಕ್ಕೂಟದ ಆಡಳಿತ ಮಂಡಳಿ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರಕ್ಕೆ ಸಿಬ್ಬಂದಿಗಳಿಗೆ ತುಪ್ಪ ಮಾರಾಟ ಮಾಡುತ್ತಿರುವ ನಿರ್ಣಯವನ್ನ ಮರುಪರೀಕ್ಷೆ ಮಾಡಬೇಕಾಗಿದೆ.  ಇಲ್ಲದಿದ್ದರೆ ಎಲ್ಲ ಸಿಬ್ಬಂದಿಗಳು ಯುಟಿಪಿ ದರದಲ್ಲಿ ಇನ್ನಷ್ಟು ತುಪ್ಪ ಖರೀದಿಸಿ ಒಕ್ಕೂಟವನ್ನು ಮತ್ತಷ್ಟು ನಷ್ಟದತ್ತ ಕೊಂಡೊಯ್ದರೂ ಅನುಮಾನವಿಲ್ಲ.

ವರದಿ: ವಿರಪ್ಪ ದಾನಿ

ಇದನ್ನೂ ಓದಿ: ನೀವು ಬಳಸುತ್ತಿರುವ ನಂದಿನಿ ತುಪ್ಪ ನಕಲಿ ಅಗಿರಬಹುದು, ಖರೀದಿಸುವ ಮುನ್ನ ಒಮ್ಮೆ ಖಚಿತಪಡಿಸಿಕೊಳ್ಳಿ

ನೆಲಮಂಗಲದಲ್ಲಿ ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳ ದಾಳಿ, ರಾಜಸ್ಥಾನ ಮೂಲದ ವ್ಯಕ್ತಿ ಅರೆಸ್ಟ್