ವಿಜಯನಗರ, ಸೆ.16: ವಿಜಯನಗರ ಜಿಲ್ಲೆಯಲ್ಲಿ ಕತ್ತೆ (Donkey) ಖರೀದಿ ಭರಾಟೆ ಜೋರಾಗಿದೆ. ಲಕ್ಷ, ಲಕ್ಷ ಹಣ ಕೊಟ್ಟು ಜನ ಕತ್ತೆ ಖರೀದಿ ಮಾಡುತ್ತಿದ್ದಾರೆ. ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ ಎಂದು ಹೇಳಲಾಗುತ್ತೆ. ಹೀಗಾಗಿ ಕತ್ತೆ ಹಾಲಿನ ಲಾಭ ನೋಡಿ ರೈತರು ಕತ್ತೆಗಳ ಖರೀದಿಗೆ ಮುಗಿಬಿದ್ದಿದ್ದಾರೆ. ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದು ಎಂದು ರೈತರು ಕತ್ತೆ ಖರೀದಿಗೆ ಮುಂದಾಗಿದ್ದಾರೆ.
ಜನ್ನಿ ಮಿಲ್ಕ್ ಎಂಬ ಕಂಪನಿ 3 ಲಕ್ಷ ಕೊಟ್ಟರೆ ಮೂರು ಕತ್ತೆಗಳು ಮತ್ತು ಮೂರು ಕತ್ತೆ ಮರಿ ಕೊಡ್ತಿದೆ. ಜನ್ನಿ ಮಿಲ್ಕ್ ಕಂಪನಿಯ ರಾಜ್ಯದ ಏಕೈಕ ಕಚೇರಿ ಹೊಸಪೇಟೆಯಲ್ಲಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೂಲ ಕಚೇರಿ ಹೊಂದಿದೆ. ಈ ಕಂಪನಿ 500 ರೂ. ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಸಿಕೊಂಡು 3 ಲಕ್ಷಕ್ಕೆ ಮೂರು ಕತ್ತೆಗಳು 3 ಮರಿ ಕತ್ತೆಗಳು ಕೊಡ್ತಿದೆ.
ಕತ್ತೆಗಳ ಹಾಲಿಗೆ ಭಾರಿ ಡಿಮ್ಯಾಂಡ್ ಇದೆ. ಒಂದು ಕತ್ತೆ ಒಂದು ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತಿದೆ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2736 ರೂ. ಒಂದು ಕತ್ತೆ ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತದೆ. ತಿಂಗಳಿಗೆ 60-70 ಸಾವಿರ ರೂಪಾಯಿ ಲಾಭ ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಮೂರು ಕತ್ತೆಗಳು, ಮೂರು ಕತ್ತೆ ಮರಿಗಳು ಸೇರಿ ಒಂದು ಯೂನಿಟ್ ಅಂತ ಹೇಳ್ತಾರೆ. ಇದ್ರಂತೆ 20 ಯುನಿಟ್ ಈಗಾಗಲೇ ಮಾರಾಟ ಮಾಡಲಾಗಿದೆ. ಸದ್ಯ ಕತ್ತೆ ಹಾಲಿನ ಲಾಭ ನೋಡಿ, ರೈತರು ಕತ್ತೆಗಳ ಖರೀದಿ ಭರಾಟೆಯಲ್ಲಿ ಜೋರಾಗಿಯೇ ತೋಡಗಿದ್ದಾರೆ. ರಾಜಸ್ಥಾನ ಮತ್ತು ಹೊರ ರಾಜ್ಯಗಳಿಂದ ಕತ್ತೆಗಳನ್ನು ಇಂಪೋರ್ಟ್ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್: ಮೈಸೂರಿನ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸಿಕ್ತಿದೆ ಹೊಟ್ಟೆ ತುಂಬಾ ಊಟ
ಇನ್ನು ಮತ್ತೊಂದೆಡೆ ಈ ಬಗ್ಗೆ ಕೆಲ ರೈತರು ಇದರ ಬಗ್ಗೆ ನಮಗೆ ಅನುಮಾನ ಇದೆ ಅಂತ ಹೇಳಿದ್ದಾರೆ. ಹಾಗೂ ಇನ್ನೂ ಕೆಲವರು ಇದು ನಮಗೆ ಲಾಭವಿದೆ ಎಂದಿದ್ದಾರೆ. ಇನ್ನೂಕತ್ತೆಗಳ ಖರೀದಿಗೆ ರೈತರು ಮುಗಿ ಬೀಳುತ್ತಿದ್ದಂತೆ ನಾವು ಶೀಘ್ರದಲ್ಲೇ ಸೋಪಿನ ಫ್ಯಾಕ್ಟರಿ ಲಾಂಚ್ ಮಾಡುತ್ತೇವೆ ಎಂದು ಜಿನ್ನಿ ಮಿಲ್ಕ್ ಮ್ಯಾನೇಜರ್ ಹೇಳಿದ್ದಾರೆ.
ಜನ್ನಿ ಮಿಲ್ಕ್ ಕಂಪನಿ ಯಾವುದೇ ಪರವಾನಿಗೆ ಪಡೆದಿಲ್ಲ. ಟ್ರೇಡ್ ಲೈಸನ್ಸ್ ಪಡೆದಿಲ್ಲಾ, ನಾವು ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ತಿಳಿಸಿದ್ದೇವೆ. ಎಲ್ಲಾ ಮಾಹಿತಿ ಕೇಳಿದ್ದೇವೆ. ನಾವು ಮಾಹಿತಿ ಕೊಡ್ತಿವಿ ಅಂತ ಹೇಳಿದ್ದಾರೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿಜಯನಗರ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:10 pm, Mon, 16 September 24