ಮಳೆ ಕೊರತೆಯ ಮಧ್ಯೆ ದಿಢೀರ್ ಕುಸಿದ ಮೆಣಸಿನಕಾಯಿ ದರ, ರೈತ ಹೈರಾಣ

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಬರಗಾಲ ತಾಂಡವಾಡುತ್ತಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆದು ಸೂಕ್ತ ಬೆಂಬಲ ಬೆಲೆಯೊಂದಿಗೆ ಬೆಳೆ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮಳೆ ಕೊರತೆಯ ಮಧ್ಯೆ ದಿಢೀರ್ ಕುಸಿದ ಮೆಣಸಿನಕಾಯಿ ದರ, ರೈತ ಹೈರಾಣ
ಮಳೆ ಕೊರತೆಯ ಮಧ್ಯೆ ದಿಢೀರ್ ಕುಸಿದ ಮೆಣಸಿನಕಾಯಿ ದರ, ರೈತ ಹೈರಾಣ
Follow us
| Updated By: ಸಾಧು ಶ್ರೀನಾಥ್​

Updated on: Jan 18, 2024 | 2:36 PM

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲ ತಾಂಡವಾಡುತ್ತಿದೆ.. ತೀವ್ರ ಬರಗಾಲದ ನಡುವೆಯು ರೈತ ಅಳಿದುಳಿದ ಬೆಳೆಯನ್ನ ಉಳಿಸಿ-ಬೆಳೆಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅದಕ್ಕೂ ಬೆಲೆ‌ ಇಲ್ಲದಂತಾಗಿದೆ. ಒಂದು ಕ್ವಿಂಟಲ್‌ಗೆ 50,000 ರೂ ಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ ಬೆಳೆ‌ ದಿಢೀರ್ ಕುಸಿತ ಕಂಡು ಕೇವಲ 10,000 ರೂಗೆ ಮಾರಾಟ ವಾಗುತ್ತಿದೆ. ಹೀಗಾಗಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯೊಂದಿಗೆ ಬೆಳೆ ಖರೀದಿಸಿ ಎಂದು ರೈತರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಈ ವರ್ಷ ಮಳೆ ಕೊರತೆಯಿಂದ ಬೆಳೆ ಬರದೆ ರೈತ ಕಂಗಾಲಾಗಿದ್ದಾನೆ.. ತೀವ್ರ ಬರದ ನಡುವೆ ಕಾಲುವೆ ನೀರು, ಬೋರಬೆಲ್ ನೀರು ಹೀಗೆ ಹಲವು ಮಾರ್ಗಗಳಲ್ಲಿ ಹೊಲಗಳಿಗೆ ನೀರು ಹರಿಸಿ ಅಳಿದುಳಿದ ಬೆಳೆಯನ್ನ ಉಳಿಸಿಕೊಂಡು ಬಂದಿದ್ದ ರೈತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾರುಕಟ್ಟೆಯಲ್ಲಿ 50,000 ರೂ ಗೆ ಒಂದು ಕ್ವಿಂಟಲ್ ಮಾರುತ್ತಿದ್ದ ಮೆಣಸಿನಕಾಯಿ ಬೆಲೆ ಈಗ ದಿಢೀರ್ ಕುಸಿತವಾಗಿದೆ. ಒಂದು ಕ್ವಿಂಟಲ್‌ಗೆ ಕೇವಲ 10,000 ರೂ ಮಾರಾಟವಾಗುತ್ತಿದೆ. ಒಂದು ಕಡೆ ತೀವ್ರ ಬರಗಾಲ ಮತ್ತೊಂದು ಕಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಳಿದುಳಿದ ಬೆಳೆಯನ್ನ ಉಳಿಸಿ ಕೊಂಡಿದ್ದ ರೈತನಿಗೆ ದರ ಕುಸಿತದ ಬಿಸಿ ತಟ್ಟಿದೆ. ಹೀಗಾಗಿ ಕಂಗಾಲಾಗಿರುವ ರೈತ ಸರ್ಕಾರ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯೊಂದಿಗೆ ಬೆಳೆ ಖರೀದಿ ಮಾಡಬೇಕು ಅಂತಾ ಒತ್ತಾಯ ಮಾಡಿದ್ದಾನೆ.

ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ರೈತರು ಅತೀ ಹೆಚ್ಚು ಮೆಣಸಿನಕಾಯಿ ಬೆಳೆಯನ್ನ ಬೆಳೆಯುತ್ತಾರೆ. ಈ ವರ್ಷ ಅಂದಾಜು 37,000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದಾರೆ. ಕಳೆದ ವರ್ಷ 70,000 ರೂ ಕ್ವಿಂಟಲ್ ಮಾರಾಟವಾಗಿದ್ದ ಬೆಳೆ ಈ ವರ್ಷ ದಿಢೀರನೆ ಕುಸಿತ ಕಂಡಿದೆ. ಒಂದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಬೇಕು ಅಂದ್ರೆ 50 ರಿಂದ ಒಂದು ಲಕ್ಷದ ವರಗೆ ಖರ್ಚು ಇರುತ್ತೆ.

Also Read: ರಾಜ್ಯದಲ್ಲಿ 85% ಲಾರಿಗಳು ನಿಂತು ಹೋಗಿವೆ, ಬೇಡಿಕೆ ಇಡೇರುವವರೆಗೂ ಪ್ರತಿಭಟನೆ ಮಾಡ್ತೀವಿ -ನವೀನ್ ರೆಡ್ಡಿ

ಸಾಲ ಶೂಲ ಮಾಡಿ ಬೆಳೆದಿದ್ದ ಬೆಳೆಗೆ ಈಗ ಬೆಲೆ ಇಲ್ಲದಂತಾಗಿದೆ.. ಹೀಗಾಗಿ ಅನ್ನದಾತ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.. ಇನ್ನು ಮೆಣಸಿನ ಬೆಳೆ ಪರಿಸ್ಥಿತಿ ಹೀಗಾದರೆ ಭತ್ತದ ಬೆಳೆಯು ಕಳೆದ ಎರಡು ವಾರದಿಂದ ಕುಸಿದಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆಗೆದು ಬೆಂಬಲ ಬೆಲೆಯೊಂದಿಗೆ ಬೆಳೆ ಖರೀದಿ ಮಾಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ

ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಬರಗಾಲ ತಾಂಡವಾಡುತ್ತಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆದು ಸೂಕ್ತ ಬೆಂಬಲ ಬೆಲೆಯೊಂದಿಗೆ ಬೆಳೆ ಖರೀದಿ ಮಾಡಬೇಕು ಎನ್ನುವುದು ರೈತರ ಒತ್ತಾಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು