ರಾಜ್ಯದಲ್ಲಿ 85% ಲಾರಿಗಳು ನಿಂತು ಹೋಗಿವೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡ್ತೀವಿ -ನವೀನ್ ರೆಡ್ಡಿ

Lorry Strike: ದಕ್ಷಿಣ ಭಾರತದ ಎಲ್ಲಾ ವಾಹನಗಳನ್ನು ನಿಲ್ಲಿಸಬೇಕು ಅಂತ ನಾವು ತೀರ್ಮಾನ ಮಾಡಿದ್ದೀವಿ. ಸದ್ಯ ನಾವು ಯಾವುದೇ ಪ್ರತಿಭಟನೆಗೆ ತೀರ್ಮಾನ ಮಾಡಿಲ್ಲ. ಶಾಂತಿಯುತವಾಗಿ ಮುಷ್ಕರ ಮಾಡ್ತಿವಿ. ಎರಡ್ಮೂರು ದಿನದ ನಂತರ ರ್ಯಾಲಿ, ಪ್ರತಿಭಟನೆ ಮಾಡ್ತೀವಿ. ಸಣ್ಣ, ಮಧ್ಯಮ, ಬಾರಿ ಗೂಡ್ಸ್ ಎಲ್ಲಾ ರೀತಿಯ ವಾಹನಗಳು ಈಗಾಗಲೇ ನಿಂತಿವೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ 85% ಲಾರಿಗಳು ನಿಂತು ಹೋಗಿವೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡ್ತೀವಿ -ನವೀನ್ ರೆಡ್ಡಿ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Jan 18, 2024 | 2:38 PM

ಬೆಂಗಳೂರು, ಜ.18: ಹಿಟ್ ಆ್ಯಂಡ್ ರನ್ ಕಾನೂನು(Hit and Run Case), ನಯಾ ರೂಲ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರದ (Central Government) ವಿರುದ್ಧ ಸಿಡಿದೆದ್ದಿರೋ ಲಾರಿ ಓನರ್ಸ್ ಅಸೋಸಿಯೇಷನ್(Lorry owners association) ಕಾನೂನು ರದ್ದತಿಗೆ ಆಗ್ರಹಿಸಿ ಬುಧವಾರ ಮಧ್ಯರಾತ್ರಿ 12ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಿದೆ (Lorry Strike). ಕರ್ನಾಟಕ ರಾಜ್ಯದಲ್ಲಿ ನಿನ್ನೆಯಿಂದಲೇ 85% ವಾಹನಗಳು ನಿಂತು ಹೋಗಿದೆ. 10 ರಿಂದ 15% ರಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿದೆ ಎಂದು ಟಿವಿ9ಗೆ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಿನ್ನೆಯಿಂದಲೇ 85% ವಾಹನಗಳು ನಿಂತು ಹೋಗಿದೆ. 10 ರಿಂದ 15% ರಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿದೆ. ನಿನ್ನೆ ನಮ್ಮ ‌ಜೊತೆಗೆ ಅಡಿಷನಲ್ ಕಮಿಷನರ್ ಸಭೆ ಮಾಡಿ. ನಿಮ್ಮ ಮುಷ್ಕರವನ್ನು ಶಾಂತಿಯುವಾಗಿ ಮಾಡಬೇಕೆಂದು ಸೂಚನೆ ನೀಡಿದ್ದರು. ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಮಾತುಕತೆಗೆ ಕರೆ ಬಂದಿಲ್ಲ. ನಮ್ಮ ಸಂಘಟನೆಯಲ್ಲಿ 9 ರಿಂದ 10 ಲಕ್ಷ ವಾಹನಗಳಿವೆ. ಅದರಲ್ಲಿ 8 ಲಕ್ಷ ವಾಹನಗಳು ಮುಷ್ಕರದಲ್ಲಿ ಭಾಗಿಯಾಗಿವೆ. ನಿನ್ನೆ ಲೋಡ್ ತಂದಿರುವ ಲಾರಿಗಳಲ್ಲಿ ಮಾಲ್ ಅನ್ಲೋಡ್ ಆಗದ ವಾಹನಗಳು ನಗರದಲ್ಲಿ ಸಂಚಾರ ಮಾಡ್ತಿವೆ. ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸಾರಿಗೆ ಇಲಾಖೆ ಮಂತ್ರಿಗಳಿಗೂ ಈಗಾಗಲೇ ಮನವಿ ಪತ್ರ ನೀಡಿದ್ದೀವಿ. ಸರ್ಕಾರ ನಮ್ಮನ್ನು ಕರೆದು ಮಾತಾಡುವವರೆಗೂ ಮುಷ್ಕರ ಮಾಡ್ತಿವಿ ಎಂದು ನವೀನ್ ರೆಡ್ಡಿ ಹೇಳಿದರು.

ಇದನ್ನೂ ಓದಿ: ನೈಋತ್ಯ ರೈಲ್ವೆಗೆ ಭರ್ಜರಿ ಆದಾಯ: ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ವಸೂಲಿ

ಈ ಮುಷ್ಕರ ಮಾಡಿಲ್ಲ ಅಂದರೆ ಚಾಲಕರು ಸಂಕಷಕ್ಕೆ ಸಿಲುಕಿಕೊಳ್ಳುತ್ತಾರೆ. ಈಗಾಗಲೇ ಕೇರಳ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ತಮಿಳುನಾಡಿನಲ್ಲೂ ವಾಹನಗಳನ್ನು ನಿಲ್ಲಿಸಲಾಗಿದೆ. ದಕ್ಷಿಣ ಭಾರತದ ಎಲ್ಲಾ ವಾಹನಗಳನ್ನು ನಿಲ್ಲಿಸಬೇಕು ಅಂತ ನಾವು ತೀರ್ಮಾನ ಮಾಡಿದ್ದೀವಿ. ಸದ್ಯ ನಾವು ಯಾವುದೇ ಪ್ರತಿಭಟನೆಗೆ ತೀರ್ಮಾನ ಮಾಡಿಲ್ಲ. ಶಾಂತಿಯುತವಾಗಿ ಮುಷ್ಕರ ಮಾಡ್ತಿವಿ. ಎರಡ್ಮೂರು ದಿನದ ನಂತರ ರ್ಯಾಲಿ, ಪ್ರತಿಭಟನೆ ಮಾಡ್ತೀವಿ. ಸಣ್ಣ, ಮಧ್ಯಮ, ಬಾರಿ ಗೂಡ್ಸ್ ಎಲ್ಲಾ ರೀತಿಯ ವಾಹನಗಳು ಈಗಾಗಲೇ ನಿಂತಿವೆ. ಈಗಾಗಲೇ ಅಗತ್ಯ ವಸ್ತುಗಳ ವಾಹನಗಳು ಗ್ರಾಮಾಂತರ ಭಾಗದಲ್ಲಿ ನಿಲ್ಲುತ್ತಿವೆ. ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಚಾಲಕರಿಗೂ ಈ ಕಾನೂನಿನಿಂದ ತೊಂದರೆ ಆಗುತ್ತದೆ. ಹಾಗಾಗಿ ಆ ಚಾಲಕರು ನಮ್ಮನ್ನು ನಿಮ್ಮ ಜೊತೆ ಸೇರಿಕೊಳ್ಳಿ ಎಂದು ಗಲಾಟೆ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಪೊರೈಕೆ ಮಾಡುವ ಚಾಲಕರು ರೋಡಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಮನೆಗಳಿಗೆ ಹತ್ತು ಲಕ್ಷ ರೂಪಾಯಿ ತಂದು ಕೊಡಿ ಆನಂತರ ನಾವು ಕೆಲಸಕ್ಕೆ ಬರ್ತೀವಿ ಎಂದು ಚಾಲಕರು ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸದ್ಯ ಇಲ್ಲಿಯವರೆಗೆ ನಮ್ಮನ್ನು ಮಾತುಕತೆಗೆ ಕರೆದಿಲ್ಲ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:07 pm, Thu, 18 January 24

ತಾಜಾ ಸುದ್ದಿ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ