ಸರ್ಕಾರಿ ವೆಬ್ ಸೈಟ್ ನಿಂದಲೇ ದಾಖಲೆ ಪಡೆದು ವಂಚನೆ; AEPS ಮೂಲಕ ವಂಚನೆ ಮಾಡ್ತಿದ್ದವರು ಅರೆಸ್ಟ್
AEPS ಅಂದ್ರೆ ಆಧಾರ್ ಎನೆಬಲ್ ಪೇಮೆಂಟ್ ಸಿಸ್ಟಮ್. ಕೇಂದ್ರ ಸರ್ಕಾರ ವ್ಯವಹಾರ ನಡೆಸಲು ಅನುಕೂಲ ಆಗಲಿ ಅಂತ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಆದ್ರೆ ಸೈಬರ್ ವಂಚಕರು ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ಸದ್ಯ ಇಂತಹ ಒಂದು ಗ್ಯಾಂಗ್ ಈಗ ಅರೆಸ್ಟ್ ಆಗಿದೆ. ಕರ್ನಾಟಕ, ಆಂಧ್ರಪ್ರದೇಶದ ತೆಲಂಗಾಣ ಸೇರಿ ಹಲವಾರು ರಾಜ್ಯದಲ್ಲಿ ವಂಚನೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು, ಜ.18: AEPS ಅನ್ನೊ ಈ ಯೋಜನೆಯನ್ನು ಕೇಂದ್ರ ಸರ್ಕಾರ (Central Government) ಜಾರಿಗೆ ತಂದಿತ್ತು, ಆಧಾರ್ ನಂಬರ್ ಮತ್ತು ಫಿಂಗರ್ ಪ್ರಿಂಟ್ ಮೂಲಕ ಗ್ರಾಹಕರು ಹಣ ವರ್ಗಾವಣೆ, ನಗದು ವಿತ್ ಡ್ರಾ ಮಾಡುವುದು, ಬ್ಯಾಂಕ್ ನಿಂದ ಬೇರೆ ಬ್ಯಾಂಕ್ ಗಳಿಗೆ ಹಣ ವರ್ಗಾವಣೆ ಸೇರಿ ಹಲವಾರು ಲಾಭಗಳು ಇದ್ರಿಂದ ಆಗ್ತಿತ್ತು. ಫಿಂಗರ್ ಪ್ರಿಂಟ್ ಇರುವ ಕಾರಣ ಇದು ಮತ್ತಷ್ಟು ಸೇಫ್ಟಿ ಅನ್ನೊ ಲೆಕ್ಕಾಚಾರ ಇತ್ತು. ಇದು ಸೇಫ್ಟಿ ಸರಿಯೇ ಆದರೆ ಆಧಾರ್ ಕಾರ್ಡ್ ನಂಬರ್ ಮತ್ತು ಫಿಂಗರ್ ಪ್ರಿಂಟ್ ನಕಲಿ ಮಾಡಿ ಕಳ್ಳ ಮಾರ್ಗದಲ್ಲಿ ಸಂಗ್ರಹಿಸಿ ವಂಚನೆ ಮಾಡಲು ಕೆಲ ಖದೀಮರು ಶುರುಮಾಡಿದ್ದಾರೆ. ಹೀಗೆ ಕರ್ನಾಟಕ, ಆಂಧ್ರಪ್ರದೇಶದ ತೆಲಂಗಾಣ ಸೇರಿ ಹಲವಾರು ರಾಜ್ಯದಲ್ಲಿ ವಂಚನೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ರುಹಮಾನ್ , ಅಬುಜರ್,ಆರೀಫ್, ನಾಶಿರ್ ಅಹಮದ್ ಬಂಧಿತ ಅರೋಪಿಗಳು.
ಕಂದಾಯ ಇಲಾಖೆಯ ಸೇಲ್ ಡೀಡ್ ಹಾಗು ಇತರ ದಾಖಲಾತಿಗಳಲ್ಲಿ ಖರೀದಿ ಮಾಡಿದವರ ಮತ್ತು ಮಾರಾಟ ಮಾಡುವವರ ಆಧಾರ್ ಕಾರ್ಡ್ ನಂಬರ್ ಮತ್ತು ಫ್ರಿಂಗರ್ ಪ್ರಿಂಟ್ ಅನ್ನು ನಮೂದು ಮಾಡಲಾಗಿರುತ್ತೆ.ಈ ವೆಬ್ ಸೈಟ್ ಗಳ ಮೂಲಕ ಸೈಬರ್ ವಂಚಕರು ಡೇಟಾವನ್ನು ಪಡೆದು ನಂತರ ಆಧಾರ್ ಎನೆಬಲ್ ಪೇಮೆಂಟ್ ಸಿಸ್ಟಮ್ ಮೂಲಕ ಹಣವನ್ನು ವರ್ಗಾವಣೆ ಮಾಡುವುದು ಮತ್ತು ಹಣವನ್ನು ವಿತ್ ಡ್ರಾ ಮಾಡುವ ಕೆಲಸ ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿ ಬಯಲಾಗಿದೆ.
ಇದನ್ನೂ ಓದಿ: ನೈಋತ್ಯ ರೈಲ್ವೆಗೆ ಭರ್ಜರಿ ಆದಾಯ: ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ವಸೂಲಿ
ತನಿಖೆ ಹಂತದಲ್ಲಿ ಈ ಗ್ಯಾಂಗ್ ಬಿಹಾರದ ಹಳ್ಳಿಗಳಲ್ಲಿ ಇದ್ದುಕೊಂಡು ಆಪರೇಟ್ ಮಾಡ್ತಿದ್ದೆ ಎನ್ನುವುದು ಪತ್ತೆ ಮಾಡಿ ಅರೆಸ್ಟ್ ಮಾಡಲಾಗಿದೆ. ನಗರದಲ್ಲಿ ಈ ಮಾದರಿಯಲ್ಲಿ 120ಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಜೊತೆಗೆ ಪೊಲೀಸ್ ಇಲಾಖೆ ಮನವಿ ಮೇರೆಗೆ ಕಂದಾಯ ಇಲಾಖೆ ವೆಬ್ ಸೈಟ್ ನಲ್ಲಿ ಈ ಹಿಂದೆ ಕಾಣಸಿಗುತ್ತಿದ್ದ ಆಧಾರ್ ನಂಬರ್ ಮತ್ತು ಫ್ರಿಂಗರ್ ಪ್ರಿಂಟ್ ಅನ್ನು ಎಲ್ಲರಿಗೂ ಕಾಣದಂತೆ ಮಾಡಲಾಗಿದೆ. ಇಲ್ಲಿ ಮತ್ತೊಂದು ಸಣ್ಣ ಟ್ರಿಕ್ ಇದೆ ಆಧಾರ್ ವೆಬ್ ಸೈಟ್ ಗೆ ಹೋಗಿ ಪ್ರತಿಯೊಬ್ಬರು ತಮ್ಮ ಆಧಾರ್ ಎನೆಬಲ್ ಪೇಮೆಂಟ್ ಅನ್ನೊದು ಎನೆಬಲ್ ಆಗಿದ್ರೆ ಅದನ್ನು ಈ ಕೂಡಲೇ ಡಿಸೆಬಲ್ ಮಾಡಬೇಕು. ಇಲ್ಲವಾದ್ರೆ ಒಂದು ವೇಳೆ ನಿಮ್ಮ ಆಧಾರ್ ಮಾಹಿತಿ ಮತ್ತು ಫ್ರಿಂಗರ್ ಪ್ರಿಂಟ್ ಡೇಟಾ ಸೋರಿಕೆ ಆಗಿದ್ರೆ ಸಂಪೂರ್ಣ ಹಣವನ್ನು ಸೈಬರ್ ವಂಚಕರು ಖನ್ನಾ ಹಾಕುತ್ತಾರೆ. ಜೊತೆಗೆ ತನಿಖೆ ವೇಳೆ ಆಧಾರ್ ನಂಬರ್ ಮತ್ತು ಫಿಂಗರ್ ಪ್ರಿಂಟ್ ಅನ್ನು ಕಾಳಸಂತೆಯಲ್ಲಿ ಐದು ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಇದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ