Property dispute: ಆಸ್ತಿಗಾಗಿ ಅಣ್ಣನ ಕೊಲೆ – ತಮ್ಮನಿಗೆ ಜೀವಾವಧಿ ಶಿಕ್ಷೆ

| Updated By: ಸಾಧು ಶ್ರೀನಾಥ್​

Updated on: Apr 06, 2022 | 7:39 PM

vijayanagara: ಹೂವಿನಹಡಗಲಿಯ ಆಗಿನ ಪೊಲೀಸ್​ ಸರ್ಕಲ್ ಇನ್ಸ್​ಪೆಕ್ಟರ್​ ಜಿ.ಎಸ್. ಹೆಬ್ಬಾಳ ಅವರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶುಭವೀರ ಜೈನ್ ಅವರು ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Property dispute: ಆಸ್ತಿಗಾಗಿ ಅಣ್ಣನ ಕೊಲೆ - ತಮ್ಮನಿಗೆ ಜೀವಾವಧಿ ಶಿಕ್ಷೆ
ಸಾಂಕೇತಿಕ ಚಿತ್ರ
Follow us on

ವಿಜಯನಗರ: ಆಸ್ತಿಗಾಗಿ ನಡೆದ ಜಗಳದಲ್ಲಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ್ದ ತಮ್ಮನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪ ಪ್ರಕಟಿಸಿದರು. ವಿಜಯನಗರ ಜಿಲ್ಲೆಯ ಕೋಗಳಿ ಗ್ರಾಮದಲ್ಲಿ ಅಣ್ಣ ತಮ್ಮಂದಿರಾದ ಸಿದ್ದನಗೌಡ ಮತ್ತು ಬಸವನಗೌಡ ನಡುವೆ ಆಸ್ತಿಗಾಗಿ ಪದೇ ಪದೆ ಜಗಳ ನಡೆದಿದ್ದು, 2016 ರ ಏಪ್ರಿಲ್ 28 ರಂದು ಬಸವನಗೌಡರನ್ನು ಆರೋಪಿ ಸಿದ್ದನಗೌಡ ಜಾಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ.

ಈ ಕುರಿತು ಹೂವಿನಹಡಗಲಿಯ ಆಗಿನ ಪೊಲೀಸ್​ ಸರ್ಕಲ್ ಇನ್ಸ್​ಪೆಕ್ಟರ್​ ಜಿ.ಎಸ್. ಹೆಬ್ಬಾಳ ಅವರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶುಭವೀರ ಜೈನ್ ಅವರು ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಫಲವಾದಲ್ಲಿ ಮೂರು ವರ್ಷ ಸಾದಾ ಶಿಕ್ಷೆಯನ್ನೂ ಅನಭವಿಸಬೇಕು. ಮೃತನ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಟಿ ಅಂಬಣ್ಣ ವಾದ ಮಂಡಿಸಿದ್ದರು.

ಬಳ್ಳಾರಿ: ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ 4 ಜನರ ಬಂಧನ
ಬಳ್ಳಾರಿಯ ಕೌಲ್ ಬಜಾರ್‌ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ 4 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 1,01,070 ನಗದು ಹಾಗೂ 4 ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸುತ್ತಿದ್ದ ICICI ಬ್ಯಾಂಕ್ ನಲ್ಲಿ ಚಾಲ್ತಿಯಲ್ಲಿದ್ದ ಖಾತೆಯನ್ನು ಸೀಜ್ ಮಾಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಳಸಿದ 13 ಲಕ್ಷ ರೂಪಾಯಿ ಜಮೆ ಮಾಡಲಾಗಿತ್ತು.

ನಾಲ್ವರ ಬಂಧನ, ಓರ್ವ ಪರಾರಿ: ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ವೇಳೆ ದಾಳಿ ನಡೆಸಲಾಗಿದೆ. ಮಹ್ಮದ್ ಜುಬೇರ್, ಪ್ರಕಾಶ, ಕೃಷ್ಣಮೂರ್ತಿ, ವಿಜಯಕುಮಾರ್, ರವಿಕಿರಣ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿಗಳು. ನಾಲ್ವರನ್ನು ಬಂಧಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ. ಬಳ್ಳಾರಿಯ ಕೌಲ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read:
Hampi: ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಜಿಯೋ! ಹಂಪಿಯಲ್ಲಿನ್ನು ನೈಜ 4G ಡಿಜಿಟಲ್ ಲೈಫ್‌!

Also Read: 
Kannada Language in Colleges: ಕಾಲೇಜು ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Published On - 7:33 pm, Wed, 6 April 22