ವಿಜಯನಗರ: ಯಾರೇ ಕೈ ಬಿಟ್ಟರೂ ಹೊಸಪೇಟೆ ಜನ ನಮ್ಮನ್ನೆಂದೂ ಬಿಡಲ್ಲ’ ಎಂದು ಅಭಿಮಾನಿಗಳ ಪ್ರೀತಿಯನ್ನು ನೆನೆಯುತ್ತಿದ್ದ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಅನಾವರಣಗೊಂಡಿದೆ. ಪುನೀತ ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ರಾಜ್ ಕುಟುಂಬವೇ ಸಾಕ್ಷಿಯಾಗಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್, ಅವರ ಪತ್ನಿ ಮಂಗಳಾ, ನಿರ್ದೇಶಕ ಸಂತೋಷ ಆನಂದರಾಮ, ಗುರುಕಿರಣ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ಹೊಸಪೇಟೆಯ ಬಗ್ಗೆ ವಿಶೇಷ ಪ್ರೀತಿ ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಅಪ್ಪುವಿನ ಕಂಚಿನ ಪುತ್ಥಳಿಯನ್ನು ನಗರದ ತಾಲೂಕು ಕಚೇರಿ ಸಮೀಪದಲ್ಲಿ ಅವರದೇ ಹೆಸರಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಸ್ಥಾಪಿಸಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಮಾಡೋಕೆ ಕೆಲಸ ಇಲ್ಲ ಅವರಿಗೆ, ನಮ್ಮ ಹಳೇ ಚಡ್ಡಿಗಳನ್ನು ಕೊಡುತ್ತೇವೆ ಸುಟ್ಕುಂಡು ಇರಲಿ: ಸಿಟಿ ರವಿ
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣಕ್ಕೂ ಮುನ್ನ ನಿರ್ದೇಶಕ ಸಂತೋಷ ಆನಂದ್ ರಾಮ್ ಜ್ಯೋತಿಗೆ ಚಾಲನೆ ಕೊಟ್ಟರು. ಹೊಸಪೇಟೆಯ ವಡಕರಾಯ ದೇವಾಲಯದಿಂದ ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ಜ್ಯೋತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಪ್ಪು ಭಾವಚಿತ್ರಗಳು ರಾರಾಜಿಸಿದವು. ಸಂತೋಷ್ ಆನಂದ್ ರಾಮ್ ಜೊತೆ ಸೆಲ್ಪಿ ತೆಗೆಸಿಕೊಳ್ಳಲು ಯುವಕರು ಮುಗಿಬಿದ್ದಿದ್ದರು. ಪುನೀತ ರಾಜಕುಮಾರ್ ಭಾವಚಿತ್ರ ಹಿಡಿದು ಸ್ಕೇಟಿಂಗ್ ಮಾಡೋ ಮೂಲಕ ಮಕ್ಕಳು ಅಪ್ಪುಗೆ ಗೌರವ ಸಲ್ಲಿಸಿದ್ರು.
ಕನ್ನಡ ಚಿತ್ರರಂಗದ ಖ್ಯಾತ ನಟ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಹೊಸಪೇಟೆಯಲ್ಲಿ ವಿಶೇಷ ಅಭಿಮಾನಿಗಳ ಬಳಗವಿದೆ. ಅಕಾಲಿಕ ಅಗಲಿಕೆಯಿಂದ ದಿಗ್ಗಾಂತರಾಗಿದ್ದ ಅಭಿಮಾನಿಗಳು ಇದೀಗ ಅಪ್ಪು ನೆನಪಿಗಾಗಿ ನಗರದ ಹೃದಯಭಾಗದ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಲು ಯೋಚಿಸಿ ಅಂದುಕೊಂಡಂತೆ ಪುತ್ಥಳಿ ಪ್ರತಿಮೆ ಸ್ಪಾಪನೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಹೆಸರನ್ನು ಜಿಲ್ಲಾಕ್ರೀಡಾಂಗಣ ವೃತ್ತಕ್ಕೆ ನಾಮಕರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇದೇ ವೃತ್ತದಲ್ಲಿ ಪುನೀತ್ ಕಂಚಿನ ಮತ್ಥಳಿ ಅನಾವರಣ ಇವುಗಳಿಗೆ ಕಳಶಪ್ರಾಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
7.4 ಅಡಿ ಪುತ್ಥಳಿ
7.4 ಅಡಿ ಎತ್ತರದ ಅಪ್ಪು ಪುತ್ಥಳಿಯನ್ನು ಆಂಧ್ರಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ರೂಪಿಸಿ, 5 ತಿಂಗಳ ಹಿಂದೆಯೇ ನಗರಕ್ಕೆ ತರಲಾಗಿದೆ ಒಟ್ಟು 6.4 ಲಕ್ಷ ರೂಪಾಯಿ ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗಿದೆ. ಪ್ರತಿಮೆ ಅನಾವರಣಗೊಳಿಸಲು ಡಾ.ರಾಜ್ ಕುಮಾರ್ ಕುಟುಂಬ ಹೊಸಪೇಟೆಗೆ ಬಂದಿದೆ. ಈ ಹಿಂದೆಯೂ ಪವರ್ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಸಿನಿಮಾ ಶೂಟಿಂಗ್‌ಗೆ ಬಂದಿರುವ ಕುಟುಂಬ ಬಹಳ ದಿನಗಳ ನಂತರ ಮತ್ತೆ ಹೊಸಪೇಟೆಗೆ ಬಂದಿದೆ. ಇದನ್ನೂ ಓದಿ: ಕಾನ್ಪುರ್ ಹಿಂಸಾಚಾರ: ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
Published On - 7:58 pm, Sun, 5 June 22