ಕಾನ್ಪುರ್ ಹಿಂಸಾಚಾರ: ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ನಾಲ್ವರು ಆರೋಪಿಗಳಾದ ಹಯಾತ್ ಜಾಫರ್ ಹಾಶ್ಮಿ, ಜಾವೇದ್ ಅಹ್ಮದ್ ಖಾನ್, ಮೊಹಮ್ಮದ್ ರಾಹಿಲ್ ಮತ್ತು ಮೊಹಮ್ಮದ್ ಸುಫಿಯಾನ್ ಅವರನ್ನು ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಕಾರ್ಪೊರೇಷನ್) ಗೆ ಹಾಜರುಪಡಿಸಲಾಯಿತು
ಕಾನ್ಪುರ್: ಕಾನ್ಪುರ್ನಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ಘರ್ಷಣೆ (Kanpur violence) ಪ್ರಕರಣದ ನಾಲ್ವರು ಆರೋಪಿಗಳನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಲಾಗಿದೆ. ನಾಲ್ವರು ಆರೋಪಿಗಳಾದ ಹಯಾತ್ ಜಾಫರ್ ಹಾಶ್ಮಿ, ಜಾವೇದ್ ಅಹ್ಮದ್ ಖಾನ್, ಮೊಹಮ್ಮದ್ ರಾಹಿಲ್ ಮತ್ತು ಮೊಹಮ್ಮದ್ ಸುಫಿಯಾನ್ ಅವರನ್ನು ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಕಾರ್ಪೊರೇಷನ್) ಗೆ ಹಾಜರುಪಡಿಸಲಾಯಿತು.ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿದ್ದು ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾನ್ಪುರ್ನಲ್ಲಿದ್ದಾಗಲೇ ಈ ಘಟನೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಹಾಶ್ಮಿ ಮತ್ತು ಇತರ ಹಿಂಸಾಚಾರದಲ್ಲಿನ ಮಾಸ್ಟರ್‌ಮೈಂಡ್‌ಗಳನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಪೊಲೀಸರು ಸೆಷನ್ಸ್ ನ್ಯಾಯಾಲಯದಲ್ಲಿ ಪೊಲೀಸ್ ಕಸ್ಟಡಿಗೆ ಅರ್ಜಿ ಸಲ್ಲಿಸಲಿದ್ದಾರೆ. ಪಿತೂರಿಯಲ್ಲಿ ಭಾಗಿಯಾಗಿರುವ ನಾಲ್ವರನ್ನು ಗುರುತಿಸಿ, ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅವರು ಪಿಎಫ್ಐಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆಯೇ ಎಂದು ನಾವು ತನಿಖೆ ನಡೆಸುತ್ತೇವೆ. ಎನ್ಎಸ್ಎ ಮತ್ತು ಗ್ಯಾಂಗ್ ಸ್ಟರ್ ಕಾಯಿದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು” ಎಂದು ಕಾನ್ಪುರ್ ಸಿಪಿ ಹೇಳಿದ್ದಾರೆ.
ಆರೋಪಿಗಳು ಮೌಲಾನಾ ಅಲಿ ಜೌಹರ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಕಾನ್ಪುರ್ ಸಿಪಿ ವಿಜಯ್ ಸಿಂಗ್ ಮೀನಾ ಹೇಳಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಯತೀಂ ಖಾನಾ ಮತ್ತು ಪರೇಡ್ ಕ್ರಾಸ್‌ರೋಡ್ ನಡುವೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಿಜೆಪಿಯ ನೂಪುರ್ ಶರ್ಮಾ ನೀಡಿದ ಹೇಳಿಕೆಯನ್ನು ವಿರೋಧಿಸಿ ಮಾರುಕಟ್ಟೆಗಳನ್ನು ಮುಚ್ಚುವಂತೆ ಎರಡು ಗುಂಪುಗಳ ಸದಸ್ಯರು ಪರಸ್ಪರ ಕಲ್ಲುತೂರಾಟ ನಡೆಸಿದ ನಂತರ ಶುಕ್ರವಾರದ ಘರ್ಷಣೆಗಳು ಭುಗಿಲೆದ್ದವು. ಶರ್ಮಾ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಭಾನುವಾರ ಅಮಾನತುಗೊಳಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 5 June 22