ಬಳ್ಳಾರಿ: ರವಿ ಚೆನ್ನಣ್ಣನವರ್ ಚುನಾವಣೆಗೆ ಬರುವುದು ನನಗೆ ಗೊತ್ತಿಲ್ಲ. ಆದರೆ ರವಿ ಚೆನ್ನಣ್ಣನವರ್(Ravi Channannavar) ಪ್ರಾಮಾಣಿಕ ವ್ಯಕ್ತಿ. ಅವರ ತಂದೆ- ತಾಯಿಯನ್ನು ನಾನು ನೋಡಿದ್ದೇನೆ. ಅವರು ಬೆಳೆದ ಬಂದ ರೀತಿ, ಅವರ ಶಿಕ್ಷಣ(Education) ಎಲ್ಲವನ್ನೂ ನೋಡಿದ್ದೇನೆ. ಅವರನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ಅವರು ಪ್ರಾಮಾಣಿಕ ಅಧಿಕಾರಿ. ಆರೋಪಗಳು ಬರುವುದು ಸಹಜ. ಆರೋಪ ಯಾರ ಮೇಲೆ ಇಲ್ಲ ಹೇಳಿ. ಆರೋಪ ಯಾರನ್ನೂ ಬಿಡಲ್ಲ. ಆರೋಪಗಳು ಬಂದ ತಕ್ಷಣ ತಪ್ಪಿತಸ್ಥ ಅಲ್ಲ. ಆರೋಪ ಬಂದರು ಅವರು ಪ್ರಾಮಣಿಕ ಅಧಿಕಾರಿ ಎಂದು ನಾನು ಹೇಳುತ್ತೀನಿ ಎಂದು ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಪರ ಸಾರಿಗೆ ಸಚಿವ ಶ್ರೀರಾಮುಲು (Sriramulu) ಮಾತನಾಡಿದ್ದಾರೆ.
ಕೊವಿಡ್ ಸಮಯದಲ್ಲಿ ಕೇಂದ್ರದಿಂದ ಒಳ್ಳೆಯ ಬಜೆಟ್ ಸಿಕ್ಕಿದೆ: ಶ್ರೀರಾಮುಲು
ಬಳಿಕ ಮಾತನಾಡಿದ ಅವರು, ಕೊವಿಡ್ ಸಮಯದಲ್ಲಿ ಕೇಂದ್ರದಿಂದ ಒಳ್ಳೆಯ ಬಜೆಟ್ ಸಿಕ್ಕಿದೆ. ಮೋದಿ ಹಾಗೂ ನಿರ್ಮಲಾ ಸಿತಾರಾಮನ್‌ರವರಿಗೆ ಅಭಿನಂದನೆ ಸಲ್ಲಿಸುವೆ. ಜನಪರ ಬಜೆಟ್, ದೇಶ ವೇಗವಾಗಿ ಬೆಳೆಯಲು ಬಜೆಟ್ ಪೂರಕವಾಗಿದೆ. 100 ಕೋಟಿ ವ್ಯಾಕ್ಸೀನ್ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ. 5ಜಿ ತರಲು ಮುಂದಾಗಿದ್ದು ಕೂಡ ಬಹುದಿನದ ಕನಸು ನನಸಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ರೈತರಿಗೆ ಅನೇಕ ಯೋಜನೆ ಕೊಟ್ಟು ರೈತ ಹಿತ ಕಾದಿದ್ದಾರೆ. ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ ಮೋದಿ. ರಕ್ಷಣಾ ಕ್ಷೆತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನೂ ದೇಶದಲ್ಲಿ ಎಲ್ಲೇ ಇದ್ರೂ ಭೂಮಿ ಖರಿದಿಸಲು, ರಿಜಿಸ್ಟರ್ ಮಾಡಿಸಲು ಅನುವು ಮಾಡಿರುವುದು ಒಳ್ಳೆಯದು. ಮಹಿಳೆಯ ಸಭಲಿಕರಣಕ್ಕಾರಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಉಚಿತ ಕೊಡಲು ಮುಂದಾಗಿದ್ದಾರೆ. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸಚಿವ ಆನಂದ್‌ಸಿಂಗ್‌ರಿಂದ ಡಿ.ಕೆ.ಶಿವಕುಮಾರ್ ಭೇಟಿ ವಿಚಾರ
ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಸಚಿವ ಅನಂದ್ ಸಿಂಗ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಡಿ.ಕೆ. ಶಿವಕುಮಾರನ್ನು ಬೇರೆ ಬೇರೆ ಕಾರಣಕ್ಕೆ ಭೇಟಿ ಆಗಿದ್ದಾರೆ. ಡಿಕೆಶಿಯನ್ನು ರಾಜಕೀಯವಾಗಿ ಆನಂದ್ ಸಿಂಗ್ ಭೇಟಿಯಾಗಿಲ್ಲ. ಆನಂದ್‌ಸಿಂಗ್ ಪಕ್ಷಕ್ಕೆ ಮೋಸ ಮಾಡುವ ವ್ಯಕ್ತಿ ಅಲ್ಲ. ಬಳ್ಳಾರಿಯ ಸಮಗ್ರ ಅಭಿವೃದ್ಧಿಗಾಗಿ ಅವರು ಶ್ರಮವಹಿಸುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಆನಂದ್ ಸಿಂಗ್ ಪರ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ 500 ರೂಪಾಯಿ ದಂಡ
Published On - 2:00 pm, Tue, 1 February 22