ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ 500 ರೂಪಾಯಿ ದಂಡ
ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಓಮಿನಿ ಕಾರ್ ಹಿಂಭಾಗ ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡುತ್ತಿದ್ದ ಕಾರ್ ಚಾಲಕನಿಗೆ ದಂಡ ಹಾಕಿದ್ದಾರೆ. ವಾಹನ ಸೀಜ್ ಮಾಡುವಾಗ ಕೀ ಕೊಡಲು ಸತಾಯಿಸಿದ ಚಾಲಕನಿಗೆ ದಂಡ ವಿಧಿಸಲಾಗಿದೆ.
ವಿಜಯಪುರ: ಕೊರೊನಾ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ನಿಯೋಜನೆ ಮಾಡಲಾಗಿದೆ ಮತ್ತು ಸುಖಾಸುಮ್ಮನೆ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೀಗಿರುವಾಗಲೇ ಇಂದು ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ.
ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಓಮಿನಿ ಕಾರ್ ಹಿಂಭಾಗ ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡುತ್ತಿದ್ದ ಕಾರ್ ಚಾಲಕನಿಗೆ ದಂಡ ಹಾಕಿದ್ದಾರೆ. ವಾಹನ ಸೀಜ್ ಮಾಡುವಾಗ ಕೀ ಕೊಡಲು ಸತಾಯಿಸಿದ ಚಾಲಕನಿಗೆ ದಂಡ ವಿಧಿಸಲಾಗಿದೆ.
ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್ ಲಾಕ್ಡೌನ್ ಮೊದಲ ದಿನ ಪೊಲೀಸ್ರು, ತಾರಾಮಾರಾ ಲಾಠಿ ಬೀಸಿ ಜನರನ್ನು ಹೆದರಿಸಿದ್ರು. ಮನೆಬಿಟ್ಟು ಹೊರಬರಬೇಡಿ ಮನೆಯಲ್ಲೇ ಇರಿ ಅಂತಾ ಎರಾಽಬಿರಿಽ ಲಾಠಿ ಏಟು ಕೊಟ್ಟಿದ್ರು. ಆದ್ರೆ, ಪೊಲೀಸರ ಌಕ್ಷನ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಇದ್ರಿಂದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಲಾಠಿ ಬೀಸದಂತೆ ಆದೇಶ ನೀಡಿದ್ದಾರೆ. ಹೀಗಾಗಿ, ಪೊಲೀಸರು ಕೂಡ ಇಂದಿನಿಂದ ಲಾಠಿ ಪ್ರಯೋಗಕ್ಕೆ ಬ್ರೇಕ್ ಹಾಕಲಿದ್ದಾರೆ. ಆದ್ರೆ, ಲಾಕ್ಡೌನ್ನ ಎರಡನೇ ದಿನವಾದ ಇಂದು ಕೂಡ ಅನಗತ್ಯವಾಗಿ ಹೊರಬಂದ್ರೆ ವಾಹನಗಳನ್ನೇ ಸೀಜ್ ಮಾಡ್ತಾರೆ. ಜತೆಗೆ ಕೇಸ್ ಹಾಕಿ ಮಾರಿಹಬ್ಬ ಮಾಡೋಕೂ ಸಜ್ಜಾಗಿದ್ದಾರೆ.
‘ವಾಹನ ಬಳಸಿ, ಆದ್ರೆ ಅನಗತ್ಯ ಸಂಚಾರ ನಿರ್ಬಂಧ’ ಹತ್ತಿರದಲ್ಲಿ ತರಕಾರಿ, ಹೋಟೆಲ್ನಲ್ಲಿ ಪಾರ್ಸೆಲ್ ತರೋಕೆ ವಾಹನದಲ್ಲಿ ಹೋಗುವಂತಿಲ್ಲ. ಕಾಲ್ನಡಿಗೆಯಲ್ಲೇ ಹೋಗ್ಬೇಕು ಅಂತಾ ಖಡಕ್ ರೂಲ್ ಜಾರಿ ಮಾಡ್ಲಾಗಿತ್ತು. ಆದ್ರೀಗ ಆ ನಿಮಯದಲ್ಲೂ ಸ್ವಲ್ಪ ಬದಲಾವಣೆ ಆಗಿದ್ದು, ಖುದ್ದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಿಮ್ಮ ಹತ್ತಿರದ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನ ಖರೀದಿಸಲು ವಾಹನ ಬಳಕೆಗೆ ನಿರ್ಬಂಧವಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನ ಬಳಸಿಕೊಳ್ಳಬಹುದು. ಆದ್ರೆ, ಅದನ್ನ ದುರುಪಯೋಗಪಡಿಸಿಕೊಳ್ಳದಂತೆ ಮನವಿ ಮಾಡಿದ್ರು.
ಇದನ್ನೂ ಓದಿ:
ಇನ್ಮುಂದೆ ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್.. ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು