ಬಳ್ಳಾರಿ: ನನ್ನ ವಿರುದ್ಧ ಸೋಲಾರ್ ಹಗರಣದ (Solar Scam) ಆರೋಪ ಮಾಡಿದ್ದಾರೆ. ಈಗ ಬಿಜೆಪಿ ಸರ್ಕಾರ ಇದೆ, ಸಿಎಂ ಯಾಕೆ ಸುಮ್ಮನಿದ್ದಾರೆ? ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿ ಎಂದು ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನನ್ನ ಅವಧಿಯ ಸೋಲಾರ್ ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಹಿರಂಗ ಚರ್ಚೆಗೆ ಬರಲಿ ಎಂದು ಬಳ್ಳಾರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ 85% ಕಮೀಷನ್ ಸರ್ಕಾರ ಅಂತಾ ಸಿಎಂ ಆರೋಪ ಮಾಡುತ್ತಿದ್ದಾರೆ. ಸಿಎಂ ಈಗ ಯಾಕೆ ರೈಲು ಟಿಕೇಟ್ ತಗೊಂಡ್ರು. ಮೂರುವರೆ ವರ್ಷದಲ್ಲಿ ಅಧಿಕಾರದಲ್ಲಿ ಇದ್ದರು.ಆಗಲೂ ಅವರು ಎನೂ ಮಾಡಲಿಲ್ಲ. ನಾನು ಚಾಮರಾಜನಗರ ಘಟನೆಯ ಬಗ್ಗೆ ಕಣ್ಣೀರು ಹಾಕಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ರೋಗಿಗಳು ಮೃತಪಟ್ಟರು. ಕೊವಿಡ್ ಮುಗಿದರೂ ಮೃತರ ಮರಣ ಪ್ರಮಾಣ ಪತ್ರ ನೀಡಿಲ್ಲ. ನನಗೆ ಅವರ ನೋವು ಗೊತ್ತು. ಈ ಸರ್ಕಾರಕ್ಕೆ ಕಣ್ಣು ಕಿವಿ, ಹೃದಯ ಯಾವುದೂ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದಲ್ಲಿ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ನಡೆಯುತ್ತಿದೆ. ಬಳ್ಳಾರಿಯಲ್ಲಿ ಯಾಕೆ ಸಮಾವೇಶ ಮಾಡುತ್ತಾ ಇದ್ದೀರಿ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ದಸರಾ ಇತ್ತು. ಅದಕ್ಕೆ ಜನರಿಗೆ ತೊಂದರೆ ಕೊಡಲಿಲ್ಲ. ರಾಹುಲ್ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಮಹಾನಗರ ಯಾವುದು ಇರಲಿಲ್ಲ. ಹೀಗಾಗಿ ಬಳ್ಳಾರಿಯಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ.ಕನ್ಯಾಕುಮಾರಿಯಿಂದ ಬಳ್ಳಾರಿವರೆಗೆ 1000 ಕಿಮೀ ಪಾದಯಾತ್ರೆ ಆಗಿದೆ.ಹೀಗಾಗಿ ನಮ್ಮ ಪಕ್ಷದ ನಾಯಕರು ರಾಹುಲ್ ಗಾಂಧಿಗೆ ಶುಭ ಕೋರಲು, ಜನರ ಜೊತೆ ಮಾತನಾಡಲು ಬರುತ್ತಿದ್ದಾರೆ. ಈ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಡುತ್ತಿಲ್ಲ. ಭಾರತವನ್ನ ಒಡೆಯಲು ಯತ್ನಿಸುತ್ತಿರುವುದರಿಂದ ಒಗ್ಗೂಡಿಸಲು ಯಾತ್ರೆ ನಡೆಯುತ್ತಿದೆ.
ರಾಜ್ಯದ ಬಲಿಷ್ಠ ಸರ್ಕಾರದಿಂದ ಎನಾದರೂ ಬದಲಾವಣೆ ಆಗಿದೆಯೇ ಎಂಬುದರ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ರಾಹುಲ್ ಯಾತ್ರೆಯ ವೇಳೆ ಎಲ್ಲ ವರ್ಗದ ಜನರ ಜೊತೆ ಸಮಾಲೋಚನೆ ಮಾಡುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ರಾಹುಲ್ ಯಾತ್ರೆಯ ವೇಳೆ ಬಿಜೆಪಿ ನಾಯಕರು ಅವರ ಸಾಧನೆ ಹೇಳೋದು ಬಿಟ್ಟು ನಮ್ಮ ವಿರುದ್ದ ಜಾಹಿರಾತು ನೀಡುತ್ತಿದ್ದಾರೆ. ಬಿಜೆಪಿ ಅವರು ಅವರ ಸಾಧನೆ ಬಗ್ಗೆ ಹೇಳುತ್ತಿಲ್ಲ. ಅವರಿಗೆ ರಾಹುಲ್ ಗಾಂಧಿ ಯಾತ್ರೆ ಆತಂಕ ಸೃಷ್ಟಿ ಮಾಡಿದೆ.
ವಿಪಕ್ಷಗಳ ಹೇಳಿಕೆ ಟೀಕೆಗೆ ನಾವೂ ಉತ್ತರ ಕೊಡಬೇಕಾಗಿಲ್ಲ. ಬಿಜೆಪಿಗೆ ಜನರೇ ಉತ್ತರ ಕೊಡಲಿದ್ದಾರೆ. ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರ ಅಲ್ಲ . ಕಲುಷಿತ ಸರ್ಕಾರ ೧೭ ರಂದು ಎಐಸಿಸಿ ಚುನಾವಣೆ ನಡೆಯಲಿದೆ. ರಾಹುಲ್ ಗಾಂಧಿ ಯಾತ್ರೆಯ ವೇಳೆ ಮತ ಚಲಾವಣೆ ಮಾಡಲಿದ್ದಾರೆ.
ಉಳಿದ ನಾಯಕರು ಬೆಂಗಳೂರಿನಲ್ಲಿ ಮತ ಚಲಾವಣೆ ಮಾಡಲಿದ್ದಾರೆ.ನಮ್ಮ ಪಕ್ಷದ ಸಿದ್ದಾಂತ ಚುನಾವಣೆ ಗೆಲ್ಲಲು ಮಾತ್ರ ಅಲ್ಲ. ನಮ್ಮ ಕಾರ್ಯಕ್ರಮಗಳನ್ನು ನಾವೂ ಬದಲಾವಣೆ ಮಾಡಲ್ಲ. ಹೊಸದಾಗಿ ಯುವ ಸಮುದಾಯಕ್ಕೆ ಪ್ರತಿ ೫ ವರ್ಷಕ್ಕೊಮ್ಮೆ ಕಾಂಗ್ರೆಸ್ ಯುವಕರಿಗೆ ಹೊಸ ಕಾರ್ಯಕ್ರಮಗಳನ್ನ ನೀಡುತ್ತೆ.
#BharathAikyataYatre ಅಂಗವಾಗಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಗ್ರೌಂಡ್ಸ್ನಲ್ಲಿ ಅಕ್ಟೋಬರ್ 15 ರಂದು ಬೃಹತ್ ಸಮಾವೇಶ ನಡೆಯಲಿದೆ. ಈ ಸಭೆಯಲ್ಲಿ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.ನಿಮ್ಮ ಉಪಸ್ಥಿತಿಯೇ ನಮ್ಮ ಶಕ್ತಿ. ಬನ್ನಿ ಬಳ್ಳಾರಿಯಲ್ಲಿ ಭೇಟಿಯಾಗೋಣ.#BharatJodoYatra pic.twitter.com/HPzPJHZfJ1
— DK Shivakumar (@DKShivakumar) October 13, 2022
ನಾಳೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ
ನಾಳೆ ಮಧ್ಯಾಹ್ನ 1 ಗಂಟೆಗೆ ರಾಹುಲ್ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ಬಳ್ಳಾರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಮಾವೇಶದಲ್ಲಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್ ಸೇರಿ ಪ್ರಮುಖರು ಭಾಗಿಯಾಗಲಿದ್ದಾರೆ. ಕೇಂದ್ರದ ವಿರುದ್ಧ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನ ಖಂಡಿಸಿ ಯಾತ್ರೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬಳ್ಳಾರಿಯ ಕಾಂಗ್ರೆಸ್ ನಾಯಕರಿಂದ ಜಂಟಿ ಸುದ್ದಿಗೋಷ್ಠಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ಎ, ಲ್ ಹನುಮಂತಯ್ಯ, ಉಗ್ರಪ್ಪ, ಶಾಸಕ ನಾಗೇಂದ್ರ, ಅನಿಲ್ ಲಾಡ್, ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.
ಸಮಾವೇಶದಲ್ಲಿ ರಾಹುಲ್ ಗಾಂಧಿ ಈ ದೇಶದಲ್ಲಿನ ಧರ್ಮಾಧಾರಿತ ರಾಜಕಾರಣ, ಒಡೆದಿರುವ ಮನಸ್ಸುಗಳನ್ನ ಒಂದೂಗೂಡಿಸುವುದು, ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಮಾತನಾಡಲಿದ್ದಾರೆ. ಇಂದು ಸಂಜೆ ೬ ಗಂಟೆಗೆ ಪಾದಯಾತ್ರೆ ಬಳ್ಳಾರಿ ಜಿಲ್ಲೆಯ ಗಡಿ ಆಗಮಿಸಲಿದೆ. ನಾಳೆ ಬೆಳಗ್ಗೆ ಆರುವರೆ ಗಂಟೆಗೆ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ನಾಳೆ ರಾಜಸ್ತಾನ, ಛತ್ತಿಸಗಡ ಮುಖ್ಯಮಂತ್ರಿ, ಮಲ್ಲಿಕಾರ್ಜುನ ಖರ್ಗೆ. ಸಿದ್ದರಾಮಯ್ಯ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ. ಇದು ಐತಿಹಾಸಿಕ ಸಮಾವೇಶ ಆಗಲಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ ಗದಗ ರಾಯಚೂರು ಜಿಲ್ಲೆಯ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ರಾಹುಲ್ ಗಾಂಧಿ ಬೆಳಗ್ಗೆ ಪಾದಯಾತ್ರೆ ಮೂಲಕ ನಗರ ಪ್ರವೇಶ ಮಾಡಲಿದ್ದಾರೆ. ಮಧ್ಯಾಹ್ನ ಕಲ್ಯಾಣ ಮಂಟಪದಲ್ಲಿ ವಿಶ್ರಾಂತಿ ನಂತರ ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಲಿದ್ದಾರೆ. ರಾಹುಲ್ ಯಾತ್ರೆಯಲ್ಲಿ ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಿದ್ದಾರೆ. ಸಮಾವೇಶದಲ್ಲಿ ೫ ಲಕ್ಷ ಜನರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
Published On - 1:52 pm, Fri, 14 October 22