ವಿಜಯನಗರ: ಅಧರ್ಮ ಹೆಚ್ಚಾದಾಗ ವಿಜಯನಗರದಲ್ಲಿ ಧರ್ಮ ತಲೆ ಎತ್ತಿದೆ. ಇಲ್ಲಿಂದಲೇ ನಮ್ಮ 150+ ಮಿಷನ್ ಸಂಕಲ್ಪ ಆರಂಭಗೊಂಡಿದೆ ಎಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ನಮ್ಮ ಮೊದಲ ಆದ್ಯತೆ. ಬೂತ್ನಲ್ಲಿ ಉತ್ತಮವಾಗಿರುವ ಪಕ್ಷಕ್ಕೆ ಗೆಲುವು ಖಚಿತ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಉತ್ತಮವಾಗಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ 46.31 ಲಕ್ಷ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಮೋದಿ, ಬೊಮ್ಮಾಯಿ ನೇತೃತ್ವದ ಸರ್ಕಾರಗಳಿಂದ ಈ ಸಾಧನೆ ಆಗಿದೆ. 2 ಕೋಟಿ ಜನರಿಗೆ ವಿದ್ಯುತ್ ದೀಪ ವಿತರಣೆ, ಉಜ್ವಲಾ ಯೋಜನೆ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ಗಳ ವಿತರಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ 70 ವರ್ಷದಿಂದ ಈ ಕೆಲಸ ಮಾಡಿರಲಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಭೆಯ ಅಜೆಂಡಾ ತೃಪ್ತಿ ತಂದಿದೆ. ಕಾರ್ಯಕರ್ತರಿಗೆ ಕಾರ್ಯಕಾರಿಣಿ ಹುಮ್ಮಸ್ಸು ತುಂಬಿದೆ. ನಮ್ಮ ಮುಂದಿನ ಹಾದಿ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ಹಾದಿ ಬಗ್ಗೆ ಈಗಲೇ ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ. ಸರ್ಕಾರದ ಸಾಧನೆ ಜನತೆಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಭಾರತ ಆರ್ಥಿಕತೆಯಲ್ಲಿ ವೇಗ ಸಾಧಿಸಿದ್ದು, ಜಿಎಸ್ಟಿ ಸಂಗ್ರಹ ಹೆಚ್ಚಾಗಿದೆ ಉದ್ಯೋಗ ನೀಡುವಲ್ಲೂ ಭಾರತ ವೇಗ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಅವಧಿಯಲ್ಲಿ ಪಿಎಫ್ಐ ಮೇಲಿನ ಕೇಸ್ ಹಿಂಪಡೆದಿತ್ತು. ಆದರೆ ಬಿಜೆಪಿ ಧರ್ಮ, ಪರಿವಾರ, ಜಾತಿ ಆಧಾರದಲ್ಲಿ ನಡೆಯಲ್ಲ. ಬಿಜೆಪಿ ವಿಕಾಸವಾದದ ಮೇಲೆ ನಡೆಯುತ್ತಿದೆ. ಉಗ್ರರ ಬಗ್ಗೆ ಮಾತಾಡುವ ಕಾಂಗ್ರೆಸ್ ಒಳಗೊಳಗೆ ಬೆಂಬಲ ನೀಡುತ್ತೆ. ಕಾಂಗ್ರೆಸ್, ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್ ಇರುವಲ್ಲಿ ಕಮಿಷನ್, ಬಿಜೆಪಿ ಇರುವಲ್ಲಿ ಮಿಷನ್ ಇರುತ್ತೆ. ಕಾಂಗ್ರೆಸ್ನವರು ಧರ್ಮ, ಜಾತಿಗಳ ನಡುವೆ ಜಗಳ ತಂದಿಡುತ್ತಾರೆ. ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಇದನ್ನೇ ಮಾಡಿಕೊಂಡು ಬರ್ತಿದೆ. ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಲ್ಲ, ಪ್ರಾದೇಶಿಕ ಪಕ್ಷವಾಗಿ ಉಳಿದಿದೆ. ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಕುಟುಂಬ ನಿಯಂತ್ರಣದಲ್ಲಿವೆ. ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ನಿಯಂತ್ರಣದಲ್ಲಿದೆ. ಬಿಜೆಪಿ ಕಾರ್ಯಕರ್ತರ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯಕ್ಕೆ ಮತ್ತೆ ಮತ್ತೆ ಬರುತ್ತೇನೆ. ಸಾಧ್ಯವಾದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ದೇಶದಲ್ಲಿರುವ ಏಕೈಕ ರಾಷ್ಟ್ರೀಯ ಪಕ್ಷ. ಉಳಿದಂತೆ ಎಲ್ಲಾ ಪಕ್ಷಗಳು ಕುಟುಂಬ, ಪರಿವಾರದ ಪಕ್ಷಗಳಾಗಿವೆ. ವಿವಿಧ ರಾಜ್ಯಗಳಲ್ಲಿರುವ ಕುಟುಂಬ ಆಧಾರಿತ ಪಕ್ಷಗಳ ಬಗ್ಗೆ ಪ್ರಸ್ತಾಪ ಮಾಡಿದರು. ಕರ್ನಾಟಕದ ಜೆಡಿಎಸ್ ಪಕ್ಷದ ಬಗ್ಗೆಯೂ ಪ್ರಸ್ತಾಪಿಸಿದ್ದು, ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ಸಮಾಜವಾದಿ ಪಕ್ಷ, ಟಿಎಂಸಿ, ಆರ್ಜೆಡಿ, ಬಿಜು ಜನತಾ ದಳ, ವೈಎಸ್ಆರ್ಸಿಪಿ, ಟಿಆರ್ಎಸ್, ಜೆಡಿಎಸ್, ಶಿವಸೇನೆ, ಎನ್ಸಿಪಿ ಕುಟುಂಬ, ಪರಿವಾರದ ಪಕ್ಷಗಳಾಗಿವೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವೂ ಅಲ್ಲ, ಭಾರತೀಯ ಪಕ್ಷವೂ ಅಲ್ಲ. ಕಾಂಗ್ರೆಸ್ ಪಕ್ಷ ಭಾಯಿ-ಬೆಹೆನ್ಕಾ ಪಕ್ಷವೆಂದು ನಡ್ಡಾ ವ್ಯಂಗ್ಯವಾಡಿದ್ದಾರೆ. ವಿಚಾರದ ಆಧಾರದಲ್ಲಿ ಬಿಜೆಪಿ ವೇಗವಾಗಿ ಬೆಳೆಯುತ್ತಿರುವ ಪಕ್ಷ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
NEP ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಜಲಜೀವನ್ ಮಿಷನ್ ಜಾರಿಯಲ್ಲೂ ಸಾಧನೆ ಮಾಡಿದೆ. ರಾಜ್ಯಕ್ಕೆ 10 ರೈಲ್ವೆ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಅನುದಾನವನ್ನೂ ಕೊಡಲಾಗಿದೆ. ದೇಶ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರಗಳಿಂದ ಬದಲಾವಣೆಯಾಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
Jahangirpuri violence: ಜಹಾಂಗೀರ್‌ಪುರಿ ಹಿಂಸಾಚಾರ ಆರೋಪಿಗಳಾದ ಅನ್ಸಾರ್ ಮತ್ತು ಅಸ್ಲಾಂ 1 ದಿನದ ಪೊಲೀಸ್ ಕಸ್ಟಡಿಗೆ
Published On - 10:59 pm, Sun, 17 April 22