ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ

ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅದರಿಂದ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡೋದೇ ಇವನ ಕೆಲಸವಾಗಿತ್ತು. ಈವರೆಗೂ ಒಟ್ಟು 10 ನಕಲಿ ಖಾತೆ ಹಾಗೂ 90ಕ್ಕೂ ಹೆಚ್ಚು ಇ-ಮೇಲ್ ಐಡಿ ಮಾಡಿಕೊಂಡಿದ್ದ. ಈ ಕುರಿತು ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದ ಎರಡು ವರ್ಷಗಳ ನಂತರ ಮೋಸ್ಟ್ ವಾಂಟೆಡ್​ ಕಾಮುಕ ಸಿಕ್ಕಿಬಿದ್ದಿದ್ದಾನೆ. ಆರೋಪಿ ಮೊಬೈಲ್​​ ನಲ್ಲಿ 13,000 ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ.

ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ
Shubham
Updated By: ರಮೇಶ್ ಬಿ. ಜವಳಗೇರಾ

Updated on: Jun 18, 2025 | 3:01 PM

ಬಳ್ಳಾರಿ, (ಜೂನ್ 18): ನಕಲಿ‌ ಖಾತೆ ಸೃಷ್ಟಿಸಿ (Fake Accounts) ಮಹಿಳೆ ಹಾಗೂ ಯುವತಿಯರ ನಗ್ನ ಪೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಮೋಸ್ಟ್ ವಾಂಟೆಡ್​ ಕಾಮುಕ ಕೊನೆಗೂ ಬಳ್ಳಾರಿಯ (Bellary) ಸಂಡೂರಿನಲ್ಲಿ (Sandur) ಸಿಕ್ಕಿಬಿದ್ದಿದ್ದಾನೆ. ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25) ಎನ್ನುವಾತ ನಕಲಿ ಖಾತೆಯಲ್ಲಿ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ. ಈ ಸಂಬಂಧ ವಿದ್ಯಾರ್ಥಿನಿಯೋರ್ವಳು ನೀಡಿದ್ದ ದೂರಿನ ಮೇರೆಗೆ ಹಲವು ದಿನಗಳಿಂದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು(Mumbai Police) ಗೂಗಲ್​ ಸಹಾಯದಿಂದ ಸಂಡೂರಿನಲ್ಲಿ ಕಾಮುಕ ಶುಭಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಮೊಬೈಲ್​​ ನಲ್ಲಿ ಬರೋಬ್ಬರಿ 13,000ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಪತ್ತೆಯಾಗಿದ್ದು, ಇವುಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

ದೆಹಲಿಯಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್‌ನಲ್ಲಿ ಡಿಪ್ಲೊಮಾ ಪಡೆದಿದ್ದ ಶುಭಂ, ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು, ಯುವತಿಯರನ್ನು ಪರಿಚಯ ಮಾಡಿಕೊಂಡು ಬಳಿಕ ಅವರಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಅವರ ಹೆಸರಿನಲ್ಲೇ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ.

ಇದನ್ನೂ ಓದಿ: ಬಟ್ಟೆ ವ್ಯಾಪರಿಯನ್ನ ಬುಟ್ಟಿಗೆ ಹಾಕಿಕೊಂಡು ಮನೆಗೆ ಕರೆಸಿಕೊಂಡ ಯುವತಿ: ಲಾಕ್ ಆಗಿದ್ದು ಪೊಲೀಸಪ್ಪ

ತನ್ನ ಹೆಸರಿನಲ್ಲಿ ನಕಲಿ ಖಾತೆ ರಚಿಸಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಸಂಬಂಧ ವಿದ್ಯಾರ್ಥಿನಿಯೊಬ್ಬಳು ನೀಡಿದ್ದ ದೂರು ದಾಖಲಿಸಿಕೊಂಡ ಬಳಿಕ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಪ್ರಕರಣ ಸಂಬಂಧ ಗೂಗಲ್‌ನಿಂದ ತಾಂತ್ರಿಕ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಭಂ 10 ನಕಲಿ ಖಾತೆಗಳನ್ನು ಮತ್ತು 90ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಸೃಷ್ಟಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ
ಮಹಿಳೆಯ ಬೆತ್ತಲೆ ವಿಡಿಯೋ ಬ್ಲ್ಯಾಕ್​ಮೇಲ್, ಅತ್ಯಾಚಾರ ಯತ್ನ: ಅರ್ಚಕ ಬಂಧನ
ಪ್ರೀತಿ ಕೊಂದ ಕೊಲೆಗಾರ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ!
ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕಲಬುರಗಿ ಕೊಲೆ ರಹಸ್ಯ ಬಯಲು
ಕಂಡ ಕಂಡ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್​

ಆರೋಪಿಯು ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್ ಮಾಡುವಂತೆ ಕಿರುಕುಳ ನೀಡುತ್ತಿದ್ದ. ಅವರು ಒಪ್ಪದಿದ್ದಾಗ, ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ರಚಿಸಿ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡಿ ಮಾನಹಾನಿ ಮಾಡುತ್ತಿದ್ದ. ಹೀಗೆ ವಿದ್ಯಾರ್ಥಿನಿಯೊಬ್ಬಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋ, ವಿಡಿಯೋಗಳನ್ನು ಹಾಕಿ ಮಾನಹಾನಿ ಮಾಡುತ್ತಿದ್ದ. ಈ ಸಂಬಂಧ ವಿದ್ಯಾರ್ಥಿನಿ ಕೊಟ್ಟ ದೂರಿನ ಮೇರೆಗೆ ಮುಂಬೈ ಪೊಲೀಸರು ಗೂಗಲ್‌ನಿಂದ ತಾಂತ್ರಿಕ ಮಾಹಿತಿ ಪಡೆದುಕೊಂಡು ಕಾಮುಕ ಶುಭಂನನ್ನು ಸಂಡೂರಿನಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ