ಕೃಷಿ ಹೊಂಡದಲ್ಲಿದ್ದ ಮೊಸಳೆಯನ್ನು ಬಲೆ ಹಾಕಿ ಹಿಡಿದ ಭೂಪ! ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 12, 2023 | 7:44 PM

ಸಿರಗುಪ್ಪ(Siruguppa) ತಾಲೂಕಿನ 64 ಹಳೆಕೋಟೆ ಗ್ರಾಮದ ವ್ಯಕ್ತಿಯೋರ್ವನ ಕೃಷಿ ಹೊಂಡದಲ್ಲಿ ಮೊಸಳೆ(Crocodile) ಪ್ರತ್ಯಕ್ಷವಾಗಿದ್ದು, ಅದನ್ನು ಬಲೆ ಹಾಕಿ ಹಿಡಿದಿದ್ದಾನೆ. ಮೂರು ದಿನಗಳಿಂದ ಮೊಸಳೆಯೊಂದು ಎರಕಲ್ಲು ದಾರಿ ಪಕ್ಕದಲ್ಲಿನ ಕೃಷಿ ಹೊಂಡದಲ್ಲಿತ್ತು. ಇಂದು ಅರಣ್ಯಾಧಿಕಾರಿಗಳ ಸಹಾಯದೊಂದೊದಿಗೆ ಸೆರೆಹಿಡಿಯಲಾಗಿದೆ.

ಬಳ್ಳಾರಿ, ಡಿ.12: ಜಿಲ್ಲೆಯ ಸಿರಗುಪ್ಪ(Siruguppa) ತಾಲೂಕಿನ 64 ಹಳೆಕೋಟೆ ಗ್ರಾಮದ ವ್ಯಕ್ತಿಯೋರ್ವನ ಕೃಷಿ ಹೊಂಡದಲ್ಲಿ ಮೊಸಳೆ(Crocodile) ಪ್ರತ್ಯಕ್ಷವಾಗಿದ್ದು, ಅದನ್ನು ಬಲೆ ಹಾಕಿ ಹಿಡಿದಿದ್ದಾನೆ. ಮೂರು ದಿನಗಳಿಂದ ಮೊಸಳೆಯೊಂದು  ಎರಕಲ್ಲು ದಾರಿ ಪಕ್ಕದಲ್ಲಿನ ಕೃಷಿ ಹೊಂಡದಲ್ಲಿತ್ತು. ಮೊಸಳೆ ಕಂಡು ಆತಂಕಗೊಂಡಿದ್ದ ಜನರು, ಅರಣ್ಯಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳ ಸಹಕಾರದೊಂದಿಗೆ ವೇಶಗಾರ ಮಲ್ಲ ಎಂಬಾತ ಬಲೆಯ ಮೂಲಕ ಮೊಸಳೆ ಹಿಡಿದು ರಕ್ಷಣೆ ಮಾಡಿದ್ದಾರೆ.

ತುಂಗಭದ್ರಾ ನದಿಯಲ್ಲಿ ಮೊಸಳೆ ಬಿಟ್ಟ ಅರಣ್ಯಾಧಿಕಾರಿಗಳು

ಇನ್ನು ರಕ್ಷಣೆ ಮಾಡಿದ ಮೊಸಳೆಯನ್ನು ಅರಣ್ಯಾಧಿಕಾರಿಗಳ ಜೊತೆಗೆ ವೇಶಗಾರ ಮಲ್ಲ ಸೇರಿ ದಡೇಸೂಗುರಿನ ತುಂಗಭದ್ರಾ ನದಿಯಲ್ಲಿ ಬಿಟ್ಟಿದ್ದಾರೆ. ಈ ವೇಶಗಾರ ಮಲ್ಲ, ಮೊಸಳೆ ಹಿಡಿಯುವುದು ಇದೇ ಮೊದಲಲ್ಲ, ಈವರೆಗೂ 80 ಕ್ಕೂ ಹೆಚ್ಚು ಮೊಸಳೆಗಳನ್ನ ವೇಶಗಾರ ಮಲ್ಲ ಅವರು ಹಿಡಿದು ರಕ್ಷಣೆ ಮಾಡಿದ್ದಾರೆ. ಇದೀಗ ಆತನ ಸಾಹಸಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಮೊಸಳೆ ರಕ್ಷಣೆಯ ರೋಚಕ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಸರಿಯಾದ ಸಮಯಕ್ಕೆ ಕರೆಂಟ್​​ ನೀಡದ್ದಕ್ಕೆ ಆಕ್ರೋಶ: ವಿದ್ಯುತ್ ವಿತರಣಾ ಘಟಕಕ್ಕೆ ಮೊಸಳೆ ಬಿಟ್ಟ ರೈತರು

ಕೆರೆಯಲ್ಲಿ ಬೃಹತ್ ಆಕಾರದ ಮೊಸಳೆ ಪತ್ತೆ; ಸೆರೆ ಹಿಡಿಯುವಂತೆ ಗ್ರಾಮಸ್ಥರ ಮನವಿ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ತಾಮ್ರಗುಂಡಿ ಕೆರೆಯಲ್ಲಿ ಬೃಹತ್ ಆಕಾರದ ಮೊಸಳೆ ಪತ್ತೆಯಾಗಿದೆ. ಇನ್ನು ಮೊಸಳೆ ಕಂಡು ಗ್ರಾಮಸ್ಥರು ಭಯಭೀತರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಕೆರೆಯ ಬಳಿ ಜಾನುವಾರು ಮೇಯಿಸಲು ಹೋಗುವುದರಿಂದ ಅಲ್ಲಿ ಯಾರು ಹೋಗದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Tue, 12 December 23