ಶ್ರೀರಾಮುಲು ಬಳಿ ಕೋಟ್ಯಾಂತರ ರೂ. ಆಸ್ತಿ, ಸಾಲ ಇಲ್ಲ: ಕಾರು ಜತೆ ಬಸ್ಸು​ ಸಹ ಇದೆ

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು ಅವರು ಇಂದು(ಏ.12) ನಾಮಪತ್ರ ಸಲ್ಲಿಸಿದರು. ಈ ವೇಳೆ ಒಟ್ಟು ಆಸ್ತಿ ವಿವರ ಸಲ್ಲಿಸಿದ ಶ್ರೀರಾಮುಲು, ಎಷ್ಷು ಕೋಟಿ ರೂ. ಒಡೆಯ ಗೊತ್ತಾ?, ಜೊತೆಗೆ ಅವರ ಬಳಿಯಿರುವ ಕಾರುಗಳು ಸಂಖ್ಯೆ ಎಷ್ಟಿದೆ. ಈ ಎಲ್ಲದರ ವಿವರ ಇಲ್ಲಿದೆ.

ಶ್ರೀರಾಮುಲು ಬಳಿ ಕೋಟ್ಯಾಂತರ ರೂ. ಆಸ್ತಿ, ಸಾಲ ಇಲ್ಲ: ಕಾರು ಜತೆ ಬಸ್ಸು​ ಸಹ ಇದೆ
ಶ್ರೀರಾಮಲು ಆಸ್ತಿ ವಿವರ ಇಲ್ಲಿದೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 9:12 PM

ಬಳ್ಳಾರಿ, ಏ.12: ಬಳ್ಳಾರಿ ಲೋಕಸಭಾ ಕ್ಷೇತ್ರದ(Bellary Lok Sabha Constituency) ಬಿಜೆಪಿ ಅಭ್ಯರ್ಥಿಯಾಗಿರುವ ಬಿ. ಶ್ರೀರಾಮುಲು(B. Sriramulu) ಅವರು ಇಂದು(ಏ.12) ಬಳ್ಳಾರಿ ನಗರದ ಎಸ್​ಪಿ ಸರ್ಕಲ್​ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್​ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಶ್ರೀರಾಮುಲುಗೆ ಆನಂದ ಸಿಂಗ್, ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದರು. ಇದೇ ವೇಳೆ ಅವರ ಆಸ್ತಿ ವಿವರ ಸಲ್ಲಿಸಿದ್ದು, ಒಟ್ಟು 45 ಕೋಟಿ 88 ಲಕ್ಷದ 2 ಸಾವಿರದ 320 ರೂ. ಆಸ್ತಿ ಹೊಂದಿದ್ದಾರೆ.

ಶ್ರೀರಾಮುಲು ಆಸ್ತಿ ವಿವರ ಇಲ್ಲಿದೆ

ಒಟ್ಟು ಆಸ್ತಿಯ ಮೌಲ್ಯ; 45.88 ಕೋಟಿ ರೂ.

ನಗದು: 5.50 ಲಕ್ಷ ರೂ.

ಒಟ್ಟು ಚರಾಸ್ತಿ: 6.22 ಕೋಟಿ ರೂ.

ಸ್ಥಿರಾಸ್ತಿ: 39.65 ಕೋಟಿ ರೂ.

ವಾಹನ: ಬಿಎಂಡಬ್ಲ್ಯು, ಇನೋವಾ ಕಾರು, ಅಶೋಕ್‌ ಲೇಲ್ಯಾಂಡ್ ಬಸ್‌

ಚಿನ್ನ: 4.27 ಕೆ.ಜಿ.

ಬೆಳ್ಳಿ: 9.50 ಕೆ.ಜಿ.

ಸಾಲ: 6.69 ಕೋಟಿ ರೂ.

ಅಪರಾಧ ಪ್ರಕರಣ: 4

ಇದನ್ನೂ ಓದಿ:ನೂರಾರು ವರ್ಷಗಳಿಂದ ಇದ್ದರೂ ಸಿಗದ ಹಕ್ಕು ಪತ್ರಗಳು; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಶ್ರೀರಾಮುಲು ಪತ್ನಿ ಆಸ್ತಿ ವಿವರ ಇಲ್ಲಿದೆ

ಒಟ್ಟು ಆಸ್ತಿಯ ಮೌಲ್ಯ: 22.57 ಕೋಟಿ ರೂ.

ನಗದು: 2.50 ಲಕ್ಷ ರೂ.

ಒಟ್ಟು ಚರಾಸ್ತಿ: 2.28 ಕೋಟಿ ರೂ.

ಸ್ಥಿರಾಸ್ತಿ: 20.29 ಕೋಟಿ ರೂ.

ವಾಹನ: ಇಲ್ಲ

ಚಿನ್ನ: 2.33 ಕೆ.ಜಿ

ಬೆಳ್ಳಿ: ಇಲ್ಲ

ಸಾಲ: ಇಲ್ಲ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ