ಬಳ್ಳಾರಿ: ಎಸ್ಎಸ್ಎಲ್ಸಿ ಪರೀಕ್ಷಾ ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕ ಹೃದಯಘಾತದಿಂದ ಸೋಮವಾರ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಬಸವೇಶ್ವರ ನಗರದ ಸಿ.ಎಸ್.ಮುಧೋಳ್ (59) ಮೃತ ಶಿಕ್ಷಕರಾಗಿದ್ದಾರೆ.
ಬಳ್ಳಾರಿಯ ರಾಜ್ಯೋತ್ಸವ ನಗರದ ಎಸ್.ಎಂ.ವಿ.ವಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಬೆಳಗ್ಗೆ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದು, ಎಕ್ಸಾಂ ಬಳಿಕ ಮಧ್ಯಾಹ್ನ 1.50 ಸುಮಾರಿಗೆ ಶಾಲೆಯ ಆವರಣದಲ್ಲಿಯೇ ಹೃಯಘಾತವಾಗಿದೆ. ಮೃತರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಮಂಗಳವಾರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬೈಕ್ ಸ್ಕಿಡ್ ಆಗಿ ನಿವೃತ್ತ ಎಎಸ್‌ಐ ಸ್ಥಳದಲ್ಲೇ ಸಾವು
ಯಾದಗಿರಿ: ಲಿಂಗೇರಿ ತಾಂಡಾ ಬಳಿ ರಸ್ತೆ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ನಿವೃತ್ತ ಎಎಸ್ಐ ಸಾಯಿಬಣ್ಣ(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಯಾದಗಿರಿಗೆ ಬರ್ತಾಯಿದ್ದಾಗ ಘಟನೆ ಸಂಭವಿಸಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಿಡಿಲು ಬಡಿದು ಕುರಿಗಾಹಿ ಸಾವು
ಧಾರವಾಡ: ಕುಂದಗೊಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ದೇವೇಂದ್ರ ಮುದುಕಪ್ಪ ಮಚಿನಹಳ್ಳಿ(19) ಮೃತಪಟ್ಟಿದ್ದಾರೆ. ಕುರಿ ಕಾಯಲು ಹೋದಾಗ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೆ ಪ್ರಾಣಬಿಟ್ಟಿದ್ದಾರೆ. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಜಿಯೋದಿಂದ 259 ರೂಪಾಯಿಗೆ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ ಬಾಬತ್ತಿನಲ್ಲಿ ಪ್ರಿ ಪೇಯ್ಡ್ ಹೊಸ ಪ್ಲಾನ್ ಬಿಡುಗಡೆಯಾಗಿದೆ!
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ: ಮುಂದೇನು?
Published On - 9:33 pm, Mon, 28 March 22