ಅಯೋಧ್ಯೆ ರಾಮನ ದರ್ಶನ‌ಕ್ಕೆ 2000 ಕಿಮೀ ಸೈಕಲ್ ಯಾತ್ರೆ ಹೊರಟ ಬಳ್ಳಾರಿಯ ಯುವ ಜೋಡಿ

| Updated By: ಸಾಧು ಶ್ರೀನಾಥ್​

Updated on: Jan 13, 2024 | 12:38 PM

ನೂರಾರು ವರ್ಷಗಳ ಸತತ ಹೋರಾಟಗಳ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ರಾಮ, ಸೀತೆ, ಲಕ್ಷಣ, ಹನುಮಂತನ ದರ್ಶನ ಪಡೆಯಲು ಜಗತ್ತಿನಾದ್ಯಂತ ಭಕ್ತರ ದಂಡು ಅಯೋಧ್ಯೆ ಕಡೆ ಹರಿದು ಬರುತ್ತಿದೆ. ಅದರಂತೆ ಹೊಸದುರ್ಗ ಮೂಲದ ಯುವಕರು 20 ದಿನ ನಿರಂತರ ಸೈಕಲ್ ಯಾತ್ರೆ ಮಾಡುವ ಮೂಲಕ ಅಯೋಧ್ಯೆ ತಲುಪುವ ಸಂಕಲ್ಪ ಮಾಡಿದ್ದಾರೆ.

ಅಯೋಧ್ಯೆ ರಾಮನ ದರ್ಶನ‌ಕ್ಕೆ 2000 ಕಿಮೀ ಸೈಕಲ್ ಯಾತ್ರೆ ಹೊರಟ ಬಳ್ಳಾರಿಯ ಯುವ ಜೋಡಿ
ಅಯೋಧ್ಯೆ ರಾಮನ ದರ್ಶನ‌ಕ್ಕೆ 2000 ಕಿಮೀ ಸೈಕಲ್ ಯಾತ್ರೆ ಹೊರಟ ಯುವ ಜೋಡಿ
Follow us on

ವಿಶ್ವದೆಲ್ಲೆಡೆ ಶ್ರೀರಾಮ‌ನ ಜಪ ಶುರುವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆ ವಿವಿಧ ಭಾಗಗಳಿಂದ ಭಕ್ತರು ಅಯೋಧ್ಯೆ ರಾಮ ಮಂದಿರವನ್ನ ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಅದರಂತೆ ಯುವಕರಿಬ್ಬರು ಸೈಕಲ್ ಮೂಲಕ ಸುಮಾರು 2,000 ಕಿಮೀ ಯಾತ್ರೆ ನಡೆಸಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು, ಹೀಗೆ ಸೈಕಲ್ ಏರಿ ಯಾತ್ರೆಗೆ ತೆರಳುತ್ತಿರುವ ಯುವಕರು.. ಮತ್ತೊಂದು ಕಡೆ ಜೈ ಶ್ರೀರಾಮ ಘೋಷಣೆ ಕೂಗಿ ಯಾತ್ರೆಗೆ ಶುಭ ಹಾರೈಸುತ್ತಿರುವ ಜನ… ಈ ದೃಶ್ಯ ಕಂಡು ಬಂದಿದ್ದು ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ.

ಎಸ್ ಸೈಕಲ್‌ಗೆ ಭಗವಾಧ್ವಜ ಕಟ್ಟಿ ಸುಮಾರು 2000 ಕಿಮೀ ಯಾತ್ರೆ ಮಾಡಲು ಸಂಕಲ್ಪ ಕೈಗೊಂಡಿರುವ ಈ ಯುವಕರ ಹೆಸರು ದಯಾನಿಧಿ ಮತ್ತು ಶರಣಪ್ಪ ಅಂತಾ. ಇವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಮೂಲದವರು. ಇದೇ ಜನವರಿ 10 ನೇ ತಾರೀಕು ಹೊಸದುರ್ಗದಿಂದ ಈ ಯುವಕರು ಸೈಕಲ್ ಯಾತ್ರೆಯನ್ನ ಪ್ರಾರಂಭ ಮಾಡಿದ್ದಾರೆ.

ಈಗಾಗಲೇ 150 ಕಿಮೀ ದೂರ ಕ್ರಮಿಸಿರುವ ಇವರು ಪ್ರತಿನಿತ್ಯ 100 ರಿಂದ 150 ಕಿಮೀ ಸಾಗಿ 20 ದಿನಗಳ ಕಾಲದಲ್ಲಿ ಅಯೋಧ್ಯೆ ತಲುಪಲಿದ್ದಾರಂತೆ. ಈಗಾಗಲೇ ಅಯೋಧ್ಯೆ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಮಂದಿರ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ನಾನಾ ಮಾರ್ಗವಾಗಿ ಭಕ್ತರು ಬರುತ್ತಿದ್ದಾರೆ. ಅದರಂತೆ ಈ ಯುವಕರು ಸೈಕಲ್ ಯಾತ್ರೆಯ ಸಂಕಲ್ಪ ಮಾಡಿಕೊಂಡಿದ್ದಾರೆ.

ಇನ್ನು 500 ವರ್ಷಗಳ ಕಾಲ ಸತತ ಹೋರಾಟಗಳ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ರಾಮ, ಸೀತೆ, ಲಕ್ಷಣ, ಹನುಮಂತನ ದರ್ಶನ ಪಡೆಯಲು ಜಗತ್ತಿನಾದ್ಯಂತ ಭಕ್ತರ ದಂಡು ಅಯೋಧ್ಯೆ ಕಡೆ ಹರಿದು ಬರುತ್ತಿದೆ.

Also Read: ರೈಲು ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯಬೇಕು – ಏನಿದು ಕರಾವಳಿ ಜನರ ಭಾವನಾತ್ಮಕ ಬೇಡಿಕೆ?

ಕೆಲವರು ರೈಲು ಮಾರ್ಗ, ಬಸ್, ವಿಮಾನ, ಕಾಲ್ನಡಿ ಹೀಗೆ ಹಲವು ರೀತಿಯಲ್ಲಿ ಬಂದು ಶ್ರೀರಾಮನ ದರ್ಶನ ಪಡೆಯಲು ಮುಂದಾಗುತ್ತಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಯುವಕರು ಸುಮಾರು 20 ದಿನಗಳ ಕಾಲ ನಿರಂತರ ಸೈಕಲ್ ಯಾತ್ರೆ ಮಾಡುವ ಮೂಲಕ ಅಯೋಧ್ಯೆ ತಲುಪಲು ಸಂಕಲ್ಪ ಮಾಡಿದ್ದಾರೆ.

ನಿನ್ನೆ ಶುಕ್ರವಾರ ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಇಲ್ಲಿಂದ ಕರ್ನೂಲ್, ಹೈದ್ರಾಬಾದ್, ನಾಗ್ಪುರ, ಜಬಲ್‌ಪೂರ ಮಾರ್ಗವಾಗಿ ಅಯೋಧ್ಯೆ ತಲುಪುತ್ತಾರೆ. ನಿತ್ಯ ನೂರು ಕಿಮೀ ಸಂಚಾರ ಮಾಡಿ ದೇವಸ್ಥಾನ ಅಥವಾ ಮಠಗಳಲ್ಲಿ ವಾಸ್ತವ್ಯ ಹೂಡುತ್ತ ಅಯೋಧ್ಯೆ ತಲುಪಲು ನಿರ್ಧಾರ ಮಾಡಿದ್ದಾರೆ.. ಸೈಕಲ್‌ಗಳಿಗೆ ಕೇಸರಿ ಧ್ವಜ, ಹನುಮಾನ್ ಧ್ವಜ, ಶ್ರೀರಾಮನ ಧ್ವಜ ಕಟ್ಟಿ ಯುವಕರು ತೆರಳುತ್ತಿರುವುದು ಅವರ ಭಕ್ತಿಯನ್ನ ಎತ್ತಿ ಹಿಡಿಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ