ವಿಜಯನಗರ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 11, 2023 | 12:41 PM

ಜಿಲ್ಲೆಯ ರಾಣಿಪೇಟೆಯ ಚಲುವಾದಿಕೇರಿ ಸೇರಿ ಹಲವೆಡೆ ಪೈಪ್​ಲೈನ್​ ಕಾಮಗಾರಿ ನಡೆಯುತ್ತಿದ್ದು,ಈ ವೇಳೆ ಅಲ್ಲಿನ ನಿವಾಸಿ ಲಕ್ಷ್ಮೀ(55) ಕಲುಷಿತ ನೀರು ಸೇವನೆ ಮಾಡಿ ಸಾವನ್ನಪ್ಪಿದ್ದಾಳೆ.

ವಿಜಯನಗರ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ
ಕಲುಷಿತ ನೀರು ಸೇವಿಸಿ ಮಹಿಳೆ ಸಾವು
Follow us on

ವಿಜಯನಗರ: ಜಿಲ್ಲೆಯ ರಾಣಿಪೇಟೆಯ ಚಲುವಾದಿಕೇರಿ ಸೇರಿ ಹಲವೆಡೆ ಕುಡಿಯುವ ನೀರಿನ ಪೈಪ್​​ಲೈನ್ ಕಾಮಗಾರಿ ನಡೆಯುತ್ತಿದ್ದು ಕಲುಷಿತ ನೀರು ಸೇವಿಸಿ ನಿವಾಸಿ ಲಕ್ಷ್ಮೀ(55) ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಪೈಪ್​​ಲೈನ್ ಕಾಮಗಾರಿ ವೇಳೆ ನೀರು ಕಲುಷಿತಗೊಂಡಿರುವ ಅನುಮಾನ ವ್ಯಕ್ತವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಇದೀಗ ಹಲವರು ಮನೆಗೆ ತೆರಳಿದ್ದಾರೆ.

ಪೇಸ್ಬಕ್ ಸುಂದರಿ ಹಿಂದೆ ಬಿದ್ದ ಗಂಡ, ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ,

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಗಂಡ ಶಶಿಕುಮಾರ್ ಕಳೆದ‌ ನಾಲ್ಕೈದು ತಿಂಗಳಿಂದ ಪೇಸ್ಬುಕ್​ನಲ್ಲಿ ಪರಿಚಯವಾದ ಹುಡಗಿಯ ಹಿಂದೆ ಬಿದ್ದಿದ್ದು ಹುಡುಗಿಯ ಜೊತೆಗಿದ್ದ ಪೋಟೋ ಹಾಕಿ ಚಿತ್ರಹಿಂಸೆ ನೀಡುತ್ತಿದ್ದನು. ಮನನೊಂದ ಪತ್ನಿ ಆಶಾರಾಣಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಹಿಳೆಯನ್ನ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Thunivu Movie: ‘ತುನಿವು’ ರಿಲೀಸ್ ವೇಳೆ ಅವಘಡ; ಅಜಿತ್ ಕುಮಾರ್ ಅಭಿಮಾನಿ ಸಾವು

ಮರಿಯಾನೆಯನ್ನು ಬಿಟ್ಟು ಹೋದ ಕಾಡಾನೆ ಗುಂಪು; ಮರಿಯನ್ನ ಒಂದುಗೂಡಿಸಿದ ಅರಣ್ಯ ಇಲಾಖೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಎರಡು, ಮೂರು ದಿನಗಳ ಹಿಂದಷ್ಟೇ ಮರಿ ಹಾಕಿದ್ದ ಕಾಡಾನೆ ವೇಗವಾಗಿ ಸಾಗುವಾಗ ಆಕಸ್ಮಿಕವಾಗಿ ಗುಂಪಿನಿಂದ ಬೇರಾಗಿದ್ದ ಮರಿಯಾನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ನಲವತ್ತೈದು ನಿಮಿಷ ಸಲಹಿ ಮತ್ತೆ ತಾಯಿ ಆನೆ ಬಳಿ ಸೇರಿಸಿದ್ದಾರೆ. ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದ ಅಣತಿ ದೂರಕ್ಕೆ ಮರಿಯನ್ನು ‌ಕರೆದೊಯ್ದು ಬಿಟ್ಟ ಕೂಡಲೇ ಮರಿಯನ್ನು ಕರೆದೊಯ್ದು ಕಾಡಾನೆ ಇನ್ನು ಹೆಣ್ಣಾನೆಗೆ ಸಾಥ್ ನೀಡಿದ ಭೀಮ ಹೆಸರಿನ ಒಂಟಿಸಲಗ. ಕಾಡಾನೆ ತನ್ನ ಪುಟ್ಟ ಮರಿಯನ್ನು ಬಿಟ್ಟು ಹೋಗುವ ಹಾಗೂ ಮತ್ತೆ ಕರೆದೊಯ್ಯುವ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ