ಸೌಕರ್ಯವಿಲ್ಲದೆ ವೈದ್ಯರ ನರಳಾಟ, ಕೊವಿಡ್ ವಾರಿಯರ್ಸ್ ಪ್ರೊಟೆಸ್ಟ್

|

Updated on: May 18, 2020 | 8:31 PM

ಬಳ್ಳಾರಿ: ಕೊರೊನಾ ವಿರುದ್ಧದ ಹೋರಾಟಕ್ಕೆ ವೈದ್ಯರ ಸೇವೆ ಅತ್ಯಮುಲ್ಯ. ಆದರೆ ಸರ್ಕಾರ ರಕ್ಷಕರಿಗೆಯೇ ರಕ್ಷಣೆ ನೀಡ್ತಿಲ್ಲ. ಹೀಗಾಗಿ ಬೇಸತ್ತ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಕೊವಿಡ್ ವಾರಿಯರ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬಳ್ಳಾರಿ ವಿಮ್ಸ್ ಆಸ್ಪತ್ರೆ ಪಿಜಿ ವಿದ್ಯಾರ್ಥಿ ಮತ್ತು ವೈದ್ಯರು ವಿಮ್ಸ್ ನಿರ್ದೇಶಕರ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದ್ರು. ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ರೋಗಿಗಳ ಜೊತೆಗೆ ಕೆಲಸ ಮಾಡೋದೇ ನಮಗೆ ಕಷ್ಟವಾಗಿದೆ ಎಂದು ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡ್ರು. ನಿನ್ನೆ ಪಾಸಿಟಿವ್ ಬಂದಿರೋ ರೋಗಿ […]

ಸೌಕರ್ಯವಿಲ್ಲದೆ ವೈದ್ಯರ ನರಳಾಟ, ಕೊವಿಡ್ ವಾರಿಯರ್ಸ್ ಪ್ರೊಟೆಸ್ಟ್
Follow us on

ಬಳ್ಳಾರಿ: ಕೊರೊನಾ ವಿರುದ್ಧದ ಹೋರಾಟಕ್ಕೆ ವೈದ್ಯರ ಸೇವೆ ಅತ್ಯಮುಲ್ಯ. ಆದರೆ ಸರ್ಕಾರ ರಕ್ಷಕರಿಗೆಯೇ ರಕ್ಷಣೆ ನೀಡ್ತಿಲ್ಲ. ಹೀಗಾಗಿ ಬೇಸತ್ತ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಕೊವಿಡ್ ವಾರಿಯರ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಳ್ಳಾರಿ ವಿಮ್ಸ್ ಆಸ್ಪತ್ರೆ ಪಿಜಿ ವಿದ್ಯಾರ್ಥಿ ಮತ್ತು ವೈದ್ಯರು ವಿಮ್ಸ್ ನಿರ್ದೇಶಕರ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದ್ರು. ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ರೋಗಿಗಳ ಜೊತೆಗೆ ಕೆಲಸ ಮಾಡೋದೇ ನಮಗೆ ಕಷ್ಟವಾಗಿದೆ ಎಂದು ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡ್ರು.

ನಿನ್ನೆ ಪಾಸಿಟಿವ್ ಬಂದಿರೋ ರೋಗಿ ಕಳೆದ ವಾರದಿಂದ ವಿಮ್ಸ್​ನಲ್ಲಿ ದಾಖಲಾಗಿದ್ರು. ಚಿಕಿತ್ಸೆ ನೀಡಿದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಎಂದು ಪಿಜಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಹಾಗೂ ದೊಡ್ಡ ದೊಡ್ಡ ಡಾಕ್ಟರ್ ಚಿಕಿತ್ಸ ನೀಡಲು ಬರೋದಿಲ್ಲ, ಕೇವಲ ಪಿಜಿ ಸ್ಟೂಡೆಂಟ್ಸ್ ಮಾತ್ರ ಕೊರೊನಾ ಸೋಂಕಿತರನ್ನು ನೋಡಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಕೊರೊನಾ ವಾರಿಯರ್ಸ್​​ಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಯಾವುದೇ ಭದ್ರತೆ ಇಲ್ಲ. ಆದ್ರು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು, ಪಿಜಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.



Published On - 1:28 pm, Mon, 18 May 20