ಮಾಲ್, ಥಿಯೇಟರ್ ಬಿಟ್ಟು ರಾಜ್ಯದಲ್ಲಿ ಏನೆಲ್ಲಾ ಇರುತ್ತೆ -CM ಯಡಿಯೂರಪ್ಪ ಮಾಹಿತಿ
ಬೆಂಗಳೂರು: 4ನೇ ಹಂತದ ಲಾಕ್‌ಡೌನ್‌ಗೆ ಕೇಂದ್ರದ ಮಾರ್ಗಸೂಚಿ ಸಂಬಂಧ ಸಚಿವರು, ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿ ಮೇ 31ರವರೆಗೆ ಲಾಕ್‌ಡೌನ್ ಮುಂದುವರಿಯುತ್ತದೆ. ಕಂಟೇನ್ಮೆಂಟ್ ಜೋನ್‌ಗಳಲ್ಲಿ ಇನ್ನಷ್ಟು ಬಿಗಿ ಭದ್ರತೆ ಮಾಡುತ್ತೇವೆ. ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಬಸ್‌ಗಳ ಓಡಾಟಕ್ಕೆ ಅವಕಾಶ: ರೆಡ್‌ಜೋನ್, ಕಂಟೇನ್‌ಮೆಂಟ್ ಜೋನ್ ಬಿಟ್ಟು ಉಳಿದ ಕಡೆ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅವಕಾಶವಿದೆ. ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶ. […]
ಬೆಂಗಳೂರು: 4ನೇ ಹಂತದ ಲಾಕ್‌ಡೌನ್‌ಗೆ ಕೇಂದ್ರದ ಮಾರ್ಗಸೂಚಿ ಸಂಬಂಧ ಸಚಿವರು, ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿ ಮೇ 31ರವರೆಗೆ ಲಾಕ್‌ಡೌನ್ ಮುಂದುವರಿಯುತ್ತದೆ. ಕಂಟೇನ್ಮೆಂಟ್ ಜೋನ್‌ಗಳಲ್ಲಿ ಇನ್ನಷ್ಟು ಬಿಗಿ ಭದ್ರತೆ ಮಾಡುತ್ತೇವೆ. ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಸ್‌ಗಳ ಓಡಾಟಕ್ಕೆ ಅವಕಾಶ: ರೆಡ್‌ಜೋನ್, ಕಂಟೇನ್‌ಮೆಂಟ್ ಜೋನ್ ಬಿಟ್ಟು ಉಳಿದ ಕಡೆ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅವಕಾಶವಿದೆ. ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ ಪಾಲಿಸಲೇಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸದಿದ್ದರೆ ಅಧಿಕಾರಿಗಳು ದಂಡ ವಿಧಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್: ಅನಿವಾರ್ಯವಿದ್ದರೆ ಮಾತ್ರ ಹೊರ ರಾಜ್ಯದಿಂದ ಬರಬೇಕು. ಹೊರ ರಾಜ್ಯದಿಂದ ಬರುವವರನ್ನ ಕ್ವಾರಂಟೈನ್ ಮಾಡುತ್ತೇವೆ. ಚಾಲಕ ಸೇರಿ ಮೂವರು ಮಾತ್ರ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬಹುದು.
ಪ್ರತೀ ಭಾನುವಾರ ಕಂಪ್ಲೀಟ್ ಲಾಕ್‌ಡೌನ್: ನಾಳೆಯಿಂದ ಮಾಲ್, ಚಿತ್ರಮಂದಿರ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ಓಪನ್ ಮಾಡಬಹುದು. ಆದ್ರೆ ಪ್ರತೀ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ರಾಜ್ಯದಲ್ಲಿ ರೈಲು ಸಂಚಾರಕ್ಕೆ ಅವಕಾಶವಿದೆ.
ಪಾರ್ಕ್‌ಗಳಲ್ಲಿ ಜಾಗಿಂಗ್ ಮಾಡಲು ಅವಕಾಶ: ಪಾರ್ಕ್‌ಗಳಲ್ಲಿ ಜಾಗಿಂಗ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7ರಿಂದ 9 ಗಂಟೆ ಹಾಗೂ ಸಂಜೆ 5ರಿಂದ ರಿಂದ 7ರವರೆಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಸಲೂನ್‌ಗಳನ್ನು ತರೆೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಮೇ 31ರವರೆಗೆ ಈ ನಿಯಮಗಳ ಬಗ್ಗೆ ಜನರು ಹೇಗೆ ಸಹಕರಿಸುತ್ತಾರೆಂದು ನೋಡುತ್ತೇವೆ. ಒಂದು ವೇಳೆ ಜನ ಸಹಕಾರ ನೀಡದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.
ಜಿಮ್ ತೆರೆಯುವುದಕ್ಕೆ ಅವಕಾಶವಿಲ್ಲ: ಸದ್ಯಕ್ಕೆ ಬಸ್ ಪ್ರಯಾಣ ದರದಲ್ಲಿ ಏರಿಕೆ ಇಲ್ಲ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮೇ 31ರವರೆಗೆ ರಾಜ್ಯದಲ್ಲಿ ಜಿಮ್‌ಗಳನ್ನು ತೆರೆಯುವುದಕ್ಕೆ ಅವಕಾಶವಿಲ್ಲ.
ಮೆಟ್ರೋ ಸಂಚಾರ ಇಲ್ಲ: ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ. ಸ್ಪೋರ್ಟ್ಸ್ ಕ್ಲಬ್ಗಳಿಗೆ ಅವಕಾಶ ನೀಡಲಾಗಿದೆ, ಆದ್ರೆ ಸ್ಪರ್ಧಿಗಳು ಮಾತ್ರ ಭಾಗವಹಿಸಬೇಕು.
Published On - 12:55 pm, Mon, 18 May 20