ಜೀವ ಉಳಿಸಿಕೊಳ್ಳಲು ಪ್ರಾರಂಭಿಸಿದ ಪಯಣದಲ್ಲಿ ಅಜ್ಜಿಗೆ ಸೋಲು; ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತ ವೃದ್ಧೆ ಸಾವು

|

Updated on: May 15, 2021 | 3:13 PM

ಅಜ್ಜಿಯ ಮೊಮ್ಮಕ್ಕಳು ಟೌನ್ ಹಾಲ್ ಬಳಿ ನಿಲ್ಲಿಸಲಾಗಿರುವ ಆಕ್ಸಿಜನ್ ಬಸ್ ಮೊರೆಹೋಗಿದ್ದಾರೆ ಆದರೆ ಅಲ್ಲಿಯೂ ಕೂಡ ಸರಿಯಾದ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ವೆಂಟಿಲೇಟರ್ ಬೆಡ್ ಸಿಗದೆ ನಿನ್ನೆ ರಾತ್ರಿ ರಾಮಯ್ಯ ಆಸ್ಪತ್ರೆಯಲ್ಲಿ ಅಜ್ಜಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಜೀವ ಉಳಿಸಿಕೊಳ್ಳಲು ಪ್ರಾರಂಭಿಸಿದ ಪಯಣದಲ್ಲಿ ಅಜ್ಜಿಗೆ ಸೋಲು; ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತ ವೃದ್ಧೆ ಸಾವು
ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ದ ದೃಶ್ಯ
Follow us on

ಬೆಂಗಳೂರು: ವೆಂಟಿಲೇಟರ್ ಬೆಡ್​ಗಳ ಕೊರತೆ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಎಷ್ಟೇ ಹರಸಾಹಸಪಟ್ಟರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದಕ್ಕೆ ನಿದರ್ಶನ ಎನ್ನುವಂತೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್​ ಸಿಗದೆ ಅಜ್ಜಿ ಸಾವನ್ನಪ್ಪಿದ್ದಾರೆ. ಕೊವಿಡ್​ನಿಂದಾಗಿ ಸತತ 5 ದಿನದಿಂದ ಅಜ್ಜಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಹಿಗಾಗಿ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ ವೆಂಟಿಲೇಟರ್ ಬೆಡ್ ಖಾಲಿ ಇಲ್ಲ ಎಂದು ತಿಳಿಸಲಾಗಿದೆ.

ಬಳಿಕ ಅಜ್ಜಿಯ ಮೊಮ್ಮಕ್ಕಳು ಟೌನ್ ಹಾಲ್ ಬಳಿ ನಿಲ್ಲಿಸಲಾಗಿರುವ ಆಕ್ಸಿಜನ್ ಬಸ್ ಮೊರೆಹೋಗಿದ್ದಾರೆ ಆದರೆ ಅಲ್ಲಿಯೂ ಕೂಡ ಸರಿಯಾದ ವ್ಯವಸ್ಥೆ ಸಿಕ್ಕಿಲ್ಲ. ಹೀಗಾಗಿ ವೆಂಟಿಲೇಟರ್ ಬೆಡ್ ಸಿಗದೆ ನಿನ್ನೆ ರಾತ್ರಿ ರಾಮಯ್ಯ ಆಸ್ಪತ್ರೆಯಲ್ಲಿ ಅಜ್ಜಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ವೆಂಟಿಲೇಟರ್ ಬೆಡ್​ಗಾಗಿ ಮೊಮ್ಮಕ್ಕಳು ಬಿಬಿಎಂಪಿಗೆ ಕಾಲ್ ಮಾಡಿದ್ದಾರೆ. ಆದರೂ ಕೂಡ ಅಜ್ಜಿಗೆ ವೆಂಟಿಲೇಟರ್ ಇರುವ ಬೆಡ್ ಸಿಕ್ಕಿಲ್ಲ. ಕೊನೆಗೆ ನಿನ್ನೆ ಅಜ್ಜಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮೊಮ್ಮಕ್ಕಳು ದಾಖಲು ಮಾಡಿದ್ದಾರೆ.
ಈ ಆಸ್ಪತ್ರೆಯಲ್ಲಿ ಇಪ್ಪತ್ತು ಸಾವಿರ ಬಿಲ್ ಹಾಕಿ ವೆಂಟಿಲೇಟರ್ ಬೆಡ್ ಇಲ್ಲ ಎಂದು ಅಜ್ಜಿಯನ್ನು ವಾಪಸ್ ಕಳಿಸಲಾಯಿತು.

ಇದಾದ ಬಳಿಕ ಬಿಬಿಎಂಪಿಯಿಂದ ಬೆಡ್ ರಾಮಯ್ಯ ಆಸ್ಪತ್ರೆಯಲ್ಲಿ ಅಲರ್ಟ್ ಆಗಿದೆ ಎಂದು ಮೆಸೇಜ್ ಬಂದಿತ್ತು. ಅಲ್ಲಿಯೂ ನಾರ್ಮಲ್ ಆಕ್ಸಿಜನ್ ಬೆಡ್ ಅಷ್ಟೇ ನೀಡಲಾಗಿತ್ತು. ಆದರೆ ಅಜ್ಜಿಗೆ ವೆಂಟಿಲೇಟರ್ ಇರುವ ಬೆಡ್ ಬೇಕಾಗಿತ್ತು. ಇಷ್ಟೋತ್ತಿಗಾಗಲೇ ಅಜ್ಜಿಗೆ ಕೊರೊನಾದಿಂದಾಗಿ ಆಕ್ಸಿಜನ್ ಲೆವೆಲ್ ತುಂಬಾ ಕಡಿಮೆ ಆಗಿತ್ತು. ಹೀಗಾಗಿ ವೃದ್ಧೆ ನಿನ್ನೆ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದೆ ಮೃತಪಟ್ಟಿದ್ದಾರೆ.

ಒಂದು ಪಾಸಿಟಿವ್ ಪೆಶೆಂಟ್ ಬಿಯು ನಂಬರ್‌ ಹಿಡಿದು ಪರದಾಡುವ ಪರಿಸ್ಥಿತಿ ಬೆಂಗಳೂರಿನಲ್ಲಿ ಇದೆ ಎಂದರೆ ನಿಜಕ್ಕೂ ಬೇಸರದ ಸಂಗತಿ. ರಾಜಧಾನಿ ಬೆಂಗಳೂರಿನಲ್ಲಿಯೇ ಹೀಗಿದ್ದರೆ ಬೇರೆ ಬೇರೆ ಜಿಲ್ಲೆಗಳ ಕತೆ ಹೇಗಿರಬೇಕು ನೀವೆ ಯೋಚಿಸಿ ಎಂದು ಮೊಮ್ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತ ವೃದ್ಧ ಸಾವು; ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯ ವಿರುದ್ಧ ಮೊಮ್ಮಗಳಿಂದ ಗಂಭೀರ ಆರೋಪ

ಕೊರೊನಾ ದಾರುಣಗಳು: ಸಾಲು ಸಾಲು ಸಾವು.. ಬೆಳಗಾವಿಯಲ್ಲಿ ತಂದೆ-ಮಗ ಸಾವು; ಚಾಮರಾಜನಗರದಲ್ಲಿ ತಂದೆ-ತಾಯಿ ಕಳೆದುಕೊಂಡ ಮಗು