ಬೆಂಗಳೂರು, ಅಕ್ಟೋಬರ್ 24: ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಕಿರಿಯ ವಯಸ್ಸಿನವರಲ್ಲಿ ಇದು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಇದನ್ನು ಮನಗಂಡ ಮಣಿಪಾಲ್ ಆಸ್ಪತ್ರೆಗಳು (Manipal Hospital) ಬೆಂಗಳೂರನ್ನು ಹಾರ್ಟ್-ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸುವಲ್ಲಿ ಮುಂದಾಳತ್ವ ವಹಿಸಿದೆ. ಹಾಗಾಗಿ ಸಿಪಿಆರ್ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಬೆಂಗಳೂರಿನ ಕಾಲೇಜುಗಳು ಸಹ ಸಾಥ್ ನೀಡಿವೆ.
“ಹೃದಯ ರಕ್ಷಕರು” ಎಂಬ ಪರಂಪರೆಯನ್ನು ಎತ್ತಿಹಿಡಿಯುವ ಮೂಲಕ, ಮಣಿಪಾಲ್ ಆಸ್ಪತ್ರೆಗಳು ಎಸ್‌ಎಸ್‌ಎಂಆರ್‌ಸಿ ಪದವಿ ಕಾಲೇಜು ಮತ್ತು ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸಮಗ್ರ ಸಿಪಿಆರ್ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಮಣಿಪಾಲ್ ಆಸ್ಪತ್ರೆ ಕನ್ಸಲ್ಟೆಂಟ್, ಕಾರ್ಡಿಯಾಲಜಿ ಡಾ. ಎಂ ಸುಧಾಕರ್ ರಾವ್ ಮಾತನಾಡಿ, ನಮ್ಮ ಗಾರ್ಡಿಯನ್ಸ್ ಆಫ್ ದಿ ಹಾರ್ಟ್ ಉಪಕ್ರಮದ ಮೂಲಕ, ಮಣಿಪಾಲ್ ಹಾಸ್ಪಿಟಲ್ಸ್ ಎಲ್ಲಾರಿಗೂ CPR ಅರಿವು ಮತ್ತು ತರಬೇತಿ ಮುಂದಾಗಿದೆ. ಹೃದಯಾಘಾತ ಅಥವಾ ಹೃದಯ ಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ, ತಕ್ಷಣದ ಕ್ರಮ ನಿರ್ಣಾಯಕವಾಗಿರುತ್ತದೆ. ಸಿಪಿಆರ್ ಬಗ್ಗೆ ಹೆಚ್ಚಿನ ಜನರು ತರಬೇತಿ ಪಡೆದರೆ ಸಾಕಷ್ಟು ಜೀವಗಳನ್ನು ಉಳಿಸಬಹುದು ಎಂದಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ; ಮಾನಸಿಕ ಆರೋಗ್ಯದ ಕುರಿತು ರೋಹಿಣಿ ನಿಲೇಕಣಿ ನೀಡಿರುವ ಮಾಹಿತಿ ಇಲ್ಲಿದೆ
ಇತ್ತೀಚೆಗೆ ಮಣಿಪಾಲ್ ಹಾಸ್ಪಿಟಲ್ಸ್ ಆಯೋಜಿಸಿದ್ದ ‘ಮಿಷನ್ 3ಕೆ – 3000 ಹಾರ್ಟ್ಸ್ ಒನ್ ಬೀಟ್’ ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಮಿಡ್‌ಟೌನ್ ಕ್ಲಬ್‌ನೊಂದಿಗೆ ಸಹಕಾರದೊಂದಿಗೆ ಎಸ್‌ಎಸ್‌ಎಂಆರ್‌ಸಿ ಪದವಿ ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ಮತ್ತು ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ಸಿಪಿಆರ್ ಬಗ್ಗೆ ತುರ್ತು ಸಿದ್ಧತೆಯ ಅಣಕು ಪ್ರದರ್ಶನ ನೀಡಿದರು.
ಇನ್ನು ಸಿಪಿಆರ್‌ನ ನಿರ್ಣಾಯಕ ಪ್ರಾಮುಖ್ಯತೆ ಬಗ್ಗೆ ಮಾತ್ರ ತಿಳಿಸುವುದಲ್ಲದೇ ಕೇವಲ 24 ಗಂಟೆಗಳಲ್ಲಿ 3,319 ಜನರು ಭಾಗವಹಿಸುವವರೊಂದಿಗೆ ‘ಅತಿ ಹೆಚ್ಚು ಜನರಿಂದ ಸಿಪಿಆರ್ ರಿಲೇ’ ಗಿನ್ನೆಸ್ ವಿಶ್ವ ದಾಖಲೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಮಿಡ್‌ಟೌನ್ ಕ್ಲಬ್‌ನ ಅಧ್ಯಕ್ಷ ಪಳನಿ ಅವರು ಮಣಿಪಾಲದ ಉಪಕ್ರಮವನ್ನು ಶ್ಲಾಘಿಸಿ, ಸಿಪಿಆರ್ ಬಗ್ಗೆ ಅರಿವು ಮೂಡಿಸುವುದು ಬಿಕ್ಕಟ್ಟಿನ ಸಮಯದಲ್ಲಿ ಜೀವಗಳನ್ನು ಉಳಿಸಲು ಮುಖ್ಯವಾಗಿದೆ. ಭಾರತದ ಅತಿದೊಡ್ಡ ರೋಟರಿ ಕ್ಲಬ್‌ಗಳಲ್ಲಿ ಒಬ್ಬರಾದ ನಾವು ಮಣಿಪಾಲ್ ಆಸ್ಪತ್ರೆಗಳೊಂದಿಗೆ ಕೈಜೋಡಿಸಿರುವುದಕ್ಕೆ ಹೆಮ್ಮೆಪಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Bone Donation: ಅಪಘಾತದಲ್ಲಿ ಮೂಳೆ ಮುರಿದುಕೊಂಡ ಯುವಕನಿಗೆ ಮೂಳೆ ದಾನ, ಬೋನ್ ಬ್ಯಾಂಕ್ ಬಗ್ಗೆ ತಜ್ಞರು ಹೇಳುವುದೇನು?
CPR ತರಬೇತಿಯಂತಹ ಕಾರ್ಯಕ್ರಮಗಳೊಂದಿಗೆ, ತುರ್ತು ಸನ್ನಿವೇಶಗಳಲ್ಲಿ ಜೀವ ಉಳಿಸುವ ಕೌಶಲ್ಯದೊಂದಿಗೆ ಸನ್ನದ್ಧರಾಗುವಂತೆ ಪ್ರತಿಯೊಬ್ಬ ನಾಗರಿಕರನ್ನು ಸಬಲೀಕರಣಗೊಳಿಸುವತ್ತ ಮಾರ್ಗಸೂಚಿಯಾಗಿ, ಮಣಿಪಾಲ್ ಆಸ್ಪತ್ರೆಗಳು ಹೃದಯ-ಸ್ಮಾರ್ಟ್ ಸಮುದಾಯವನ್ನು ರಚಿಸಲು ಮತ್ತು ಜೀವಗಳನ್ನು ಉಳಿಸಲು ಬದ್ಧವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Thu, 24 October 24