ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 11, 2024 | 7:09 PM

ನಮ್ಮ ಮೆಟ್ರೋ ನಿಯಗಳಿಗೆ ಪ್ರಯಾಣಿಕರು ಕಂಗಾಲಾಗಿ ಹೋಗಿದ್ದಾರೆ. ತುಂಬಾ ರಶ್ ಇದೆ ಎಂದು ಮುಂದಿನ ಮೆಟ್ರೋ ಹತ್ತೋಣ ಅಂತ 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿ ಕಾಯುತ್ತಾ ಕುಳಿತರೆ ದಂಡ ಗ್ಯಾರಂಟಿ. ಇದೀಗಾ 5 ನಿಮಿಷ ಹೆಚ್ಚಿಗೆ ಮೆಟ್ರೋ ಸ್ಟೇಷಸ್​​ನಲ್ಲಿ ಇದ್ದಿದ್ದಕ್ಕೆ ಪ್ರಯಾಣಿಕರೊಬ್ಬರು ದಂಡ ಕಟ್ಟಿರುವಂತಹ ಘಟನೆ ನಡೆದಿದೆ.

ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ
ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ
Follow us on

ಬೆಂಗಳೂರು, ಮೇ 11: ನಮ್ಮ ಮೆಟ್ರೋ (Namma Metro) ನಿಯಗಳಿಗೆ ಪ್ರಯಾಣಿಕರು ಕಂಗಾಲಾಗಿ ಹೋಗಿದ್ದಾರೆ. ತುಂಬಾ ರಶ್ ಇದೆ ಎಂದು ಮುಂದಿನ ಮೆಟ್ರೋ ಹತ್ತೋಣ ಅಂತ 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿ ಕಾಯುತ್ತಾ ಕುಳಿತರೆ ದಂಡ ಗ್ಯಾರಂಟಿ. ಇದೀಗಾ 5 ನಿಮಿಷ ಹೆಚ್ಚಿಗೆ ಮೆಟ್ರೋ ಸ್ಟೇಷಸ್​​ನಲ್ಲಿ ಇದ್ದಿದ್ದಕ್ಕೆ ಪ್ರಯಾಣಿಕರೊಬ್ಬರು ದಂಡ ಕಟ್ಟಿರುವಂತಹ ಘಟನೆ ಇತ್ತೀಚೆಗೆ ರಾತ್ರಿ 9:55 ಕ್ಕೆ ವಿಜಯನಗರ ಮೆಟ್ರೋ ಸ್ಟೇಷನ್​ನಲ್ಲಿ ನಡೆದಿದೆ. ಹೀಗಾಗಿ ಬಿಎಂಆರ್​ಸಿಎಲ್​​ನ (BMRCL) ಈ ರೂಲ್ಸ್​ನಿಂದ ಪ್ರಯಾಣಿಕರು ದಂಗಾಗಿದ್ದಾರೆ.

ಮೊಬೈಲ್​​ನಲ್ಲಿ ಚಾರ್ಜ್ ಇಲ್ಲದ ಕಾರಣ ಮೆಟ್ರೋ ಸ್ಟೇಷನ್​​ನಲ್ಲಿ ಪ್ರಯಾಣಿಕ‌ರೊಬ್ಬರು ಚಾರ್ಜ್ ಹಾಕಿಕೊಂಡಿದ್ದಾರೆ. 5 ನಿಮಿಷ ಚಾರ್ಜ್ ಬಳಿಕ ಪ್ರಯಾಣಕ್ಕೆ ಮುಂದಾದಾಗ ದಂಡ ಕಟ್ಟುವಂತೆ ಮೆಟ್ರೋ ಸಿಬ್ಬಂದಿಗಳಿಂದ ಕಿರಿಕ್ ಮಾಡಲಾಗಿದೆ. 5 ನಿಮಿಷ ಹೆಚ್ಚಿಗೆ ಇದ್ದೀಯಾ ದಂಡ ಕಟ್ಟು ಎಂದಿದ್ದಾರೆ.

ಇದನ್ನೂ ಓದಿ: ಸೆಲ್ಫಿ ಪ್ರಿಯರಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ

ಮಳೆ ಇದೆ, ಚಾರ್ಜ್ ಇರಲಿಲ್ಲ ಹೀಗಾಗಿ ಲೇಟ್ ಆಯ್ತು ಅಂದರೂ ಮೆಟ್ರೋ ಸಿಬ್ಬಂದಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಸ್ಟೇಷನ್​​ನಲ್ಲಿ ಕೇವಲ 20 ನಿಮಿಷವಷ್ಟೇ ಇರಲು ಅನುಮತಿ. ಕೇವಲ 1 ನಿಮಿಷ ಹೆಚ್ಚಾದರೂ ದಂಡ ಪಾವತಿ ಮಾಡಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸುಸೈಡ್ ಹಾಟ್ ಸ್ಪಾಟ್ ಆಗ್ತಿದ್ಯಾ ನಮ್ಮ ಮೆಟ್ರೋ? ಮೂರು ತಿಂಗಳಲ್ಲಿ ಐದು ಘಟನೆ

ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೂಲ್ಸ್ ಮೆಟ್ರೋ ಆರಂಭವಾದಗಿನಿಂದಲೂ ಇದೆ. ಈಗ ಹೊಸದಾಗಿ ಮಾಡಿದ ರೂಲ್ಸ್ ಅಲ್ಲ ಇದು. ಟೋಕನ್ ತೆಗೆದುಕೊಂಡು ಮೆಟ್ರೋ ಸ್ಟೇಷನ್​​ನಲ್ಲಿ ಗಂಟೆಗಟ್ಟಲೇ ಟೈಮ್ ಪಾಸ್ ಮಾಡಬಾರದು, ಸಹ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಈ ರೂಲ್ಸ್ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:46 pm, Sat, 11 May 24