ಸೆಲ್ಫಿ ಪ್ರಿಯರಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೋದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ
ನಮ್ಮ ಮೆಟ್ರೋ ಬೆಂಗಳೂರು ನಗರದ ಅತ್ಯಂತ ವೇಗದ ಸಾರ್ವಜನಿಕ ಸಂಪರ್ಕ ಸಾರಿಗೆಯಾಗಿದೆ. ಪ್ರತಿದಿನ ಲಕ್ಷಾಂತರ ಜನರು ಮೆಟ್ರೋದಲ್ಲಿ ಸಂಚರಿಸುತ್ತಾರೆ. ಇದೀಗ ಮೆಟ್ರೋ ಸೆಲ್ಫಿ ಪ್ರಿಯ ಪ್ರಯಾಣಿಕರಿಗಾಗಿ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್ಗಳನ್ನು ನಿರ್ಮಾಣ ಮಾಡಿದೆ.
ಬೆಂಗಳೂರು, ಫೆಬ್ರವರಿ 20: ನಗರದಲ್ಲಿ ವೇಗ ಮತ್ತು ಸುಗಮ ಸಂಚಾರಕ್ಕೆ ನಮ್ಮ ಮೆಟ್ರೋ (Namma Metro) ಬಹಳಷ್ಟು ಅನುಕೂಲಕರವಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಲವು ಉಪಕ್ರಮಗಳನ್ನು ಜಾರಿಗೆ ತರತ್ತಲೇ ಇದೆ. ಇದೀಗ ನಮ್ಮ ಮೆಟ್ರೋ ಸೆಲ್ಫಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಅದು ನಮ್ಮ ಮೆಟ್ರೋ ಹಸಿರು ಮಾರ್ಗದ ಬನಶಂಕರಿ (Banashankari) ಮತ್ತು ಕೋಣನಕುಂಟೆ (Konanakunte) ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್ಗಳನ್ನು (Selfie Point) ನಿರ್ಮಿಸಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೆಲ್ಫಿ ಪಾಯಿಂಟ್ಗಳನ್ನು ನಿರ್ಮಾಣ ಮಾಡಿದೆ.
ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆ ಹಾಕಿ, ಅದರ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೆಲ್ಫಿ ಪಾಯಿಂಟ್ಗಾಗಿ ಹೆಚ್ಚು ಸ್ಥಳ ಮೀಸಲು ಇಡಲಾಗಿದೆ. ಲೈಟಿಂಗ್ನಿಂದ ಕಂಗೊಳಿಸುತ್ತಿರುವ ಸೆಲ್ಫಿ ಪಾಯಿಂಟ್ ಅನ್ನು ನೋಡಿ ಪ್ರಯಾಣಿಕರು ಖುಷ್ ಆಗಿದ್ದಾರೆ.
Good to see Metro station beautification work. This is in Banashankari Metro station. Spot the selfie point signage extreme right. @ChristinMP_ @WF_Watcher pic.twitter.com/1tVgptZZfO
— Shashikanth Hogtapur (@skhogtapur) February 17, 2024
ಕ್ಯೂಆರ್ ಕೋಡ್, ವಾಟ್ಸಪ್ ಪೇಮೆಂಟ್ ಸೌಲಭ್ಯಕ್ಕೆ ಪ್ರಯಾಣಿಕರು ಫಿದಾ
ನಮ್ಮ ಮೆಟ್ರೋ ಸಹ ಡಿಜಿಟಲ್ ಪೇಮೆಂಟ್ ಸೌಲಭ್ಯವನ್ನು ಅಳವಡಿಸಿಕೊಂಡಿದೆ, ಪ್ರಯಾಣಿಕರು ಅದರ ಗರಿಷ್ಠ ಪ್ರಯೋಜನ ಪಡೆಯುತ್ತಿದ್ದಾರೆ. ಈ ಮೂಲಕ ತಾವು ಸಿಲಿಕಾನ್ ಸಿಟಿ ಜನ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಮೆಟ್ರೋದಲ್ಲಿ ಒಂದು ದಿನಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ. ಹೀಗಾಗಿ ಟೋಕನ್ ಟಿಕೆಟ್ ಕಿರಿಕಿರಿ ತಪ್ಪಿಸಲು ನಮ್ಮ ಮೆಟ್ರೋ NCMC ಕಾರ್ಡ್ ಟಿಕೆಟ್, ಫೀಡರ್ ಬಸ್ ಸಿಟಿ ಮಂದಿಯ ಅಚ್ಚು ಮೆಚ್ಚಾಗಿದೆ. ಇದರ ಜೊತೆಗೆ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಪಡೆಯುವುದನ್ನೂ ಪರಿಚಯಿಸಿದೆ.
ಇದನ್ನೂ ಓದಿ: ತಾಂತ್ರಿಕ ದೋಷ, ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ
BMRCLನ QR ಕೋಡ್ ಟಿಕೆಟ್ ಅನ್ನು ಪ್ರಯಾಣಿಕರು WhatsApp, Namma Metro ಮೊಬೈಲ್ ಅಪ್ಲಿಕೇಶನ್ ಹಾಗೂ Paytm ಮತ್ತು Amazon ಮೂಲಕ ಪಡೆಯಬಹುದು. ಜೊತೆಗೆ ಗ್ರೂಪ್ ಕ್ಯೂ ಆರ್ ಟಿಕೆಟ್ ಪಡೆಯಲು ಅವಕಾಶವಿದೆ.
ಬಿಎಂಆರ್ಸಿಎಲ್ ನವೆಂಬರ್ 2022ರಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಆರಂಭ ಮಾಡಿತು. ಶುರುವಿನಲ್ಲಿ 2.13 ಲಕ್ಷ ಜನ ಕ್ಯೂಆರ್ ಟಿಕೆಟ್ ಬಳಸುತ್ತಿದ್ದರು. ಬಳಿಕ ಆ ಸಂಖ್ಯೆ ನಿಧಾನಕ್ಕೆ ಏರಿಕೆ ಆಗುತ್ತಾ ಬಂತು. 2023ರ ಜನವರಿಯಲ್ಲಿ ತಿಂಗಳ ಬಳಕೆದಾರ ಸಂಖ್ಯೆ 5 ಲಕ್ಷ ಗಡಿ ಮುಟ್ಟಿತ್ತು. ಜೂನ್ 2023ರಲ್ಲಿ 10 ಲಕ್ಷ ಆಗುವ ಮೂಲಕ ಹೊಸ ದಾಖಲೆಗೆ ಕಾರಣವಾಗಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ 25.9 ಲಕ್ಷಕ್ಕೆ ಏರಿಕೆಯಾಗಿ ಎಲ್ಲಾ ರೆಕಾರ್ಟ್ ಬ್ರೇಕ್ ಆಗಿದೆ.
ಕ್ಯೂರ್ ಟಿಕೆಟ್ ಪಡೆಯುವುದು ಹೇಗೆ, ಅನುಕೂಲತೆಗಳೇನು?
- ನಿಮ್ಮ ಮೊಬೈಲ್ ಅಪ್ಲಿಕೇಶನ್ ನಮ್ಮ ಮೆಟ್ರೋ, ಪೇಟಿಯಂ, ವಾಟ್ಸಾಪ್ ಮತ್ತು ಯಾತ್ರಾ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಪಡೆಯಬಹುದು.
- ಒಂದು ಬಾರಿ ಆರು ಜನರ ಗುಂಪು ಟಿಕೆಟ್ ಪಡೆದರೆ ಟೋಕನ್ ದರಕ್ಕಿಂತ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು.
- ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಪ್ರಯಾಣಿಕರ ಸಂಖ್ಯೆ, ಎನ್‌ಕ್ರಿಪ್ಟ್ ಮಾಡಿದ ಒಂದು ಕ್ಯೂಆರ್ ಟಿಕೆಟ್ ಅನ್ನು ಸ್ವೀಕರಿಸುತ್ತಾರೆ.
- ನಂತರ ಬಳಕೆಗಾಗಿ, ಈ ಕ್ಯೂಆರ್ ಟಿಕೆಟ್ ಅನ್ನು ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ಕಟ್ಟಿ ಎಫ್ ಸಿ ಗೇಟ್ ಗಳಲ್ಲಿ ಸ್ಕ್ಯಾನ್ ಮಾಡಬೇಕು.
- ಇದರಿಂದಾಗಿ ಟಿಕೆಟ್ ಕೌಂಟರ್ ಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.
- ಪ್ರಯಾಣಿಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಮನೆ ಕಚೇರಿಯಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Tue, 20 February 24