ಗಾಂಜಾ ಮತ್ತಲ್ಲಿ ಆರ್ಮಿ ಆಫೀಸರ್ ಮಗನನ್ನೇ ಕಿಡ್ನ್ಯಾಪ್ ಮಾಡಿದ ಫ್ರೆಂಡ್ಸ್​: ಮುಂದೇನಾಯ್ತು?

| Updated By: ಗಂಗಾಧರ​ ಬ. ಸಾಬೋಜಿ

Updated on: May 03, 2024 | 8:38 PM

ಹಣಕ್ಕಾಗಿ ಗಾಂಜಾ ಮತ್ತಲ್ಲಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದವರು ಬಂಧನವಾಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ. ಪಿಜಿಯಲ್ಲಿದ್ದ ಸ್ನೇಹಿತನನ್ನು ಕಿಡ್ನಾಪ್​ ಮಾಡಿ ಶೆಡ್​ನಲ್ಲಿ ಕೂಡಿಹಾಕಿ ಹಲ್ಲೆ ಮಾಡಲಾಗಿದೆ. ಸಾಹೀಲ್ ಆರ್ಮಿ ಆಫೀಸರ್‌ ಮಗ. ಆತನ ಬಳಿ ಸಿಕ್ಕಾಪಟ್ಟೆ ಹಣ ಇರುತ್ತೆ ಎಂದು ಕಿಡ್ನ್ಯಾಪ್‌ ಪ್ಲಾನ್ ಮಾಡಿದ್ದಾರೆ.

ಗಾಂಜಾ ಮತ್ತಲ್ಲಿ ಆರ್ಮಿ ಆಫೀಸರ್ ಮಗನನ್ನೇ ಕಿಡ್ನ್ಯಾಪ್ ಮಾಡಿದ ಫ್ರೆಂಡ್ಸ್​: ಮುಂದೇನಾಯ್ತು?
ಗಾಂಜಾ ಮತ್ತಲ್ಲಿ ಆರ್ಮಿ ಆಫೀಸರ್ ಮಗನನ್ನೇ ಕಿಡ್ನ್ಯಾಪ್ ಮಾಡಿದ ಫ್ರೆಂಡ್ಸ್​, ಮುಂದೇನಾಯ್ತು?
Follow us on

ಬೆಂಗಳೂರು, ಮೇ 03: ಹಣಕ್ಕಾಗಿ ಯುವಕನೊಬ್ಬ ತನ್ನ ಸಹಚರರೊಂದಿಗೆ ಸೇರಿ ಗೆಳೆಯನನ್ನೇ (Friends) ಕಿಡ್ನ್ಯಾಪ್‌ ಮಾಡಿ (Kidnap Case) ಜೈಲುಪಾಲಾಗಿದ್ದಾನೆ. ಕೇರಳ ಮೂಲದ ಸಾಹೀಲ್ ಸಲೀಂ ಕಿಡ್ನ್ಯಾಪ್‌ ಆದವನು. ಪ್ರಮುಖ ಆರೋಪಿ ಮುಬಾರಕ್‌ ಎಂಬಾತ ತನ್ನ ಸ್ನೇಹಿತ ಸುಂದರ್‌ ಜತೆಗೆ ಮತ್ತೊಂದಿಷ್ಟು ಜನರೊಟ್ಟಿಗೆ ಪ್ಲ್ಯಾನ್‌ ಮಾಡಿ ಸಾಹೀಲ್‌ನನ್ನು ಕಿಡ್ನ್ಯಾಪ್‌ ಮಾಡಿದ್ದರು. ಪದವಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್‌ ಬೆಂಗಳೂರಿನ ಸಂಪಿಗೆಹಳ್ಳಿಯ ಪಿಜಿವೊಂದರಲ್ಲಿ ವಾಸವಿದ್ದ. ಮುಬಾರಕ್ ಹಾಗೂ ಸಾಹೀಲ್ ಇಬ್ಬರು ಪಿಯುಸಿಯಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದರು.

ಸಾಹೀಲ್ ಆರ್ಮಿ ಆಫೀಸರ್‌ ಮಗ. ಆತನ ಬಳಿ ಸಿಕ್ಕಾಪಟ್ಟೆ ಹಣ ಇರುತ್ತೆ ಎಂದು ಕಿಡ್ನ್ಯಾಪ್‌ ಪ್ಲಾನ್ ಮಾಡಿದ್ದ. ಪಿಜಿಯಲ್ಲಿದ್ದ ಸಾಹೀಲ್‌ನನ್ನು ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಈ ವೇಳೆ ಸಾಹೀಲ್‌ನಿಂದ 25 ಸಾವಿರ ರೂ. ಹಣ ಪಡೆದು ಬಿಟ್ಟು ಕಳಿಸಿದ್ದರು. ಇದರಿಂದ ಹೆದರಿದ ಸಾಹೀಲ್‌ ಕೇರಳ ಸೇರಿದ್ದ.

ಇದನ್ನೂ ಓದಿ: ಗಂಡ-ಹೆಂಡತಿ ಜಗಳ: ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯ ಭೀಕರ ಕೊಲೆ

ಮಗ ಪಿಜಿ ತೊರೆದು ಮನೆ ಸೇರಿದ್ದು ಪೋಷಕರಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ವಿಚಾರಿಸಿದಾಗ ಸಾಹಿಲ್‌ ತನ್ನ ತಂದೆ ಬಳಿ ನಡೆದಿದ್ದನ್ನು ತಿಳಿಸಿದ್ದ. ಸದ್ಯ ಸಾಹೀಲ್ ತಂದೆ ನೀಡಿದ ದೂರಿನನ್ವಯ ಸಂಪಿಗೆಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

ಡ್ರಾಪ್ ನೆಪದಲ್ಲಿ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿ ಕಿಡ್ನಾಪ್​: ಹಲ್ಲೆ

ಶಿವಮೊಗ್ಗ: ಶಾಲೆಯಿಂದ ಮನೆಗೆ ಹೊರಟಿದ್ದ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಮಾರ್ಚ್​​ 20 ರಂದು ಸಂಜೆ ಶಾಲೆಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗದ ರಾಜೇಂದ್ರ ನಗರ 100 ಅಡಿ ರಸ್ತೆಯ ಬಳಿ ಘಟನೆ ನಡೆದಿತ್ತು. ಬೊಮ್ಮಕಟ್ಟೆಗೆ ಡ್ರಾಪ್ ಕೊಡುವುದಾಗಿ ಇಬ್ಬರು ಯುವಕರು ಬೈಕ್ ಮೇಲೆ ಹತ್ತಿಸಿಕೊಂಡಿದ್ದರು. ಬಳಿಕ ಯುವಕನನ್ನು ಬಲವಂತವಾಗಿ ಕಲ್ಲುಗಂಗೂರು ಬಳಿಯ ನೀಲಗಿರಿ ತೋಪಿನ ನಿರ್ಜಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಆತನ ಬಟ್ಟೆ ಬಚ್ಚಿಸಿ ನಂತರ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಹೊಡೆದಿದ್ದರು.

ಇದನ್ನೂ ಓದಿ: ಬೆಂಗಳೂರು: ಮದುವೆಯಾಗುವಂತೆ ವಿವಾಹಿತ ಮಹಿಳೆಗೆ ಟಾರ್ಚರ್, ಒಪ್ಪದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ

ಗಾಂಜಾ ಅಮಲಿನಲ್ಲಿ ವಿದ್ಯಾರ್ಥಿಯ ಕಿವಿ ಕೂಡ ಕಚ್ಚಿದ್ದರು. ಮನಸ್ಸಿಗೆ ಬಂದ ಹೊಡೆದು ಬಳಿಕ ಆತನನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದರು. ಬಳಿಕ ಇದೇ ಮಾರ್ಗದಲ್ಲಿ ಹೊರಟಿದ್ದ ವ್ಯಕ್ತಿಯೊಬ್ಬರು ವಿದ್ಯಾರ್ಥಿಯ ಸಹಾಯಕ್ಕೆ ಬಂದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮಾ. 25 ರಿಂದ ಪರೀಕ್ಷೆ ಶುರುವಾಗಿದೆ. ಆದರೆ ಈ ಘಟನೆಯಿಂದ ವಿದ್ಯಾರ್ಥಿಯು ಮಾನಸಿಕವಾಗಿ ನೊಂದುಕೊಂಡಿದ್ದ. ಇದರಿಂದ ಆತನ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಚೆನ್ನಾಗಿ ಆಗಿಲ್ಲವಂತೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.