AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮದುವೆಯಾಗುವಂತೆ ವಿವಾಹಿತ ಮಹಿಳೆಗೆ ಟಾರ್ಚರ್, ಒಪ್ಪದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ

ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಸಾರಾಯಿಪಾಳ್ಯದಲ್ಲಿ ವಿವಾಹಿತೆಯನ್ನ ಮದುವೆ ಆಗು ಅಂತ ಪಾಗಲ್ ಪ್ರೇಮಿ ಪೀಡಿಸಿದ್ದು, ಮದುವೆ ಆಗಲ್ಲ ಅಂದಿದ್ದಕ್ಕೆ ಮನೆಗೆ ಬೆಂಕಿ ಇಟ್ಟಿರುವಂತಹ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಕ್ಕೆ ಭಾರಿ ಅನಾಹುತ ತಪ್ಪಿದೆ. ಕೇಸ್ ದಾಖಲಿಸಿಕೊಂಡು ಅರ್ಬಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು: ಮದುವೆಯಾಗುವಂತೆ ವಿವಾಹಿತ ಮಹಿಳೆಗೆ ಟಾರ್ಚರ್, ಒಪ್ಪದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ
ಅರ್ಬಾಜ್, ಬೆಂಕಿಗಾಹುತಿಯಾದ ವಸ್ತುಗಳು
TV9 Web
| Edited By: |

Updated on: May 02, 2024 | 12:53 PM

Share

ಬೆಂಗಳೂರು, ಮೇ 2: ವಿವಾಹಿತೆಯನ್ನ ಮದುವೆ ಆಗು ಅಂತ ಪಾಗಲ್ ಪ್ರೇಮಿ ಪೀಡಿಸಿದ್ದು, ಮದುವೆ ಆಗಲ್ಲ ಅಂದಿದ್ದಕ್ಕೆ ಮನೆಗೆ ಬೆಂಕಿ (fire) ಇಟ್ಟಿರುವಂತಹ ಘಟನೆ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ನಡೆದಿದೆ. ಅರ್ಬಾಜ್ ಮಹಿಳೆ ಮನೆಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ (lover). ಮಹಿಳೆಯ ದೂರದ ಸಂಬಂಧಿಯಾಗಿದ್ದ ಅರ್ಬಾಜ್, ಮದುವೆ ಆಗು ಎಂದು ಮಹಿಳೆ ಹಿಂದೆ ಬಿದ್ದಿದ್ದ. ಈ ಬಗ್ಗೆ 2 ಕುಟುಂಬದ ಹಿರಿಯರು ಬುದ್ಧಿ ಹೇಳಿದ್ದರು. ಹಿರಿಯರ ಬುದ್ಧಿಮಾತಿಗೂ ಬಗ್ಗದ ಅರ್ಬಾಜ್​, ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದಿದ್ದಕ್ಕೆ ಭಾರಿ ಅನಾಹುತ ತಪ್ಪಿದೆ. ಬೆಂಕಿ ಇಟ್ಟಿದ್ದರಿಂದ ಮನೆಯಲ್ಲಿದ್ದ ಬಟ್ಟೆಗಳು, ಟಿವಿ, ಫ್ರಿಡ್ಜ್ ವಸ್ತುಗಳು ಬೆಂಕಿಗಾಹುತಿ ಆಗಿವೆ. ಕೇಸ್ ದಾಖಲಿಸಿಕೊಂಡು ಅರ್ಬಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಾಹ ವಾರ್ಷಿಕೋತ್ಸವ ದಿನದಂದೇ ದಂಪತಿಗಳನ್ನ ಅಡ್ಡಗಟ್ಟಿ ಮಾಂಗಲ್ಯ ಸರ ಕಳವು

ಊಟ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ದಂಪತಿಗಳನ್ನ ಅಡ್ಡಗಟ್ಟಿ ಮಾಂಗಲ್ಯ ಸರ ಕಳವು ಮಾಡಿರುವಂತ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಹರ್ಷಿತಾ ಅವರ ಕೊರಳಿನಲ್ಲಿದ್ದ 50ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ವಿವಾಹ ವಾರ್ಷಿಕೋತ್ಸವ ದಿನದಂದೇ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬೀದರ್: ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿ: ಐವರ ಪೈಕಿ ಮೂವರು ದುರ್ಮರಣ

ಬಾಗಲಗುಂಟೆ ಹೋಟೆಲ್​​ನಲ್ಲಿ ಊಟ ಮುಗಿಸಿ ಮನೆ ಬಳಿ ಬಂದಾಗ ಎರಡು ಬೈಕಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ಕೊಲ್ಲುವುದಾಗಿ ಚಾಕುವಿನಿಂದ ಬೆದರಿಸಿ ಸರ ಎಗರಿಸಿದ್ದಾರೆ. ವಿವಾಹ ವಾರ್ಷಿಕೋತ್ಸವ ದಿನದಂದೇ ಮಾಂಗಲ್ಯ ಸರ ಕಳಕೊಂಡ ಮಹಿಳೆ ಮಾನಸಿಕವಾಗಿ ನೊಂದಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿತಿಮೀರಿದ ಬಿಸಿಲಿನ ತಾಪಮಾನ: ಸಾವಿರಾರು ಕೋಳಿಗಳು ಸಾವು

ಕೋಲಾರ: ಮಿತಿಮೀರಿದ ಬಿಸಿಲಿನ ತಾಪಮಾನ ಹಿನ್ನೆಲೆ ಕೋಳಿ ಫಾರಂಗಳಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಮುರುಗನ್ ಅಲಿಯಾಸ್​​ ಮುತ್ತು ಎಂಬುವರ ಕೋಳಿ ಫಾರಂನಲ್ಲಿ ಸುಮಾರು 2000 ಹೆಚ್ಚಿನ ಕೋಳಿಗಳ ಸಾವನ್ನಪ್ಪಿವೆ. ಬಿಸಿಲಿಗೆ ಸಾವನ್ನಪ್ಪಿದ ಕೋಳಿಗಳನ್ನು ಮಾಲೀಕರು ಗುಂಡಿ ತೆಗೆದು ಮುಚ್ಚಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.