PM Modi Interview: ಟಿವಿ9 ಗ್ರೂಪ್ ಸಂಪಾದಕರಿಂದ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಇಂದು ರಾತ್ರಿ 8 ಗಂಟೆಗೆ

ಪ್ರಧಾನಿ ಮೋದಿ ಸಂದರ್ಶನ: ಟಿವಿ9 ನೆಟ್ವರ್ಕ್ ನ ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆ ಚ್ಯಾನೆಲ್ ಗಳ ಸಂಪಾದಕರು ಪ್ರಧಾನಿ ಮೋದಿಯವರ ಸಂದರ್ಶನ ನಡೆಸಿದ್ದು ಇದನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ವೀಕ್ಷಿಸಬಹದು,

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:May 02, 2024 | 4:50 PM

ಬೆಂಗಳೂರು: ದುಂಡು ಮೇಜಿನ ಪರಿಷತ್ ಬಗ್ಗೆ ನೀವು ಕೇಳಿರುತ್ತೀರಿ, ಅದು ಭಾರತಕ್ಕೆ ಸ್ವಾಂತಂತ್ರ್ಯ ಸಿಗುವ ಮೊದಲು ನಡೆದಿತ್ತು. ನಿಖರವಾಗಿ ಹೇಳುವುದಾದರೆ 1930 ರಿಂದ 1932 ರ ಅವಧಿಯಲ್ಲಿ ಆಗಿನ ಬ್ರಿಟಿಷ್ ಸರ್ಕಾರ ಮತ್ತು ಭಾರತದ ರಾಜಕೀಯ ನಾಯಕರ ನಡುವೆ ಸಂವಿಧಾನ ಸುಧಾರಣೆಗೆ ಸಂಬಂಧಿಸಿದಂತೆ ಮೂರು ಸುತ್ತಿನ ಮಾತುಕತೆ ನಡೆದಿತ್ತು ಮತ್ತು ಅದು ದುಂಡು ಮೇಜಿನ ಪರಿಷತ್ ಅಂತ ಇತಿಹಾಸದಲ್ಲಿ ದಾಖಲಾಗಿದೆ. ಅದು ಸರಿ, ದುಂಡು ಮೇಜಿನ ಸಂದರ್ಶನದ ಬಗ್ಗೆ ನೀವು ಕೇಳಿದ್ದೀರಾ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ಟಿವಿ9 ನೆಟ್ವರ್ಕ್ ನ (Tv9 Network) ಬೇರೆ ಬೇರೆ ಭಾಷೆಗಳ ಸಂಪಾದಕರು (editors) ನಡೆಸುವ ದುಂಡು ಮೇಜಿನ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿಯವರ ದುಂಡು ಮೇಜಿನ ಸಂದರ್ಶನ ಯಾವತ್ತು ಮತ್ತು ಯಾವ ಸಮಯಕ್ಕೆ?

ಟಿವಿ9 ಗ್ರೂಪ್ ಸಂಪಾದಕರು ಪ್ರಧಾನಿ ಮೋದಿಯವರೊಂದಿಗೆ ನಡೆಸುವ ದುಂಡು ಮೇಜಿನ ಸಂದರ್ಶನವನ್ನು ಇವತ್ತು ಅಂದರೆ ಮೇ 2, ಸಾಯಂಕಾಲ 8 ಗಂಟೆಯಿಂದ 10 ಗಂಟೆಯವರೆಗೆ ವೀಕ್ಷಿಸಬಹುದು.

ಪ್ರಧಾನಿ ಮೋದಿಯವರ ದುಂಡು ಮೇಜಿನ ಸಂದರ್ಶನ ಎಲ್ಲಿ ವೀಕ್ಷಿಸಬಹುದು?

ಪ್ರಧಾನಿ ಮೋದಿ ಜೊತೆ ಟಿವಿ9 ನೆಟ್ವರ್ಕ್ ಸಂಪಾದಕರು ನಡೆಸುವ ಸಂದರ್ಶನವನ್ನು ಟಿವಿ9 ಕನ್ನಡ ವಾಹಿನಿ, ಟಿವಿ9 ವೆಬ್ಸೈಟ್ ಮತ್ತು ಟಿವಿ9 ಯೂಟ್ಯೂಬ್ ಚ್ಯಾನೆಲ್ ನಲ್ಲಿ ವೀಕ್ಷಿಸಬಹುದು.

ಯಾವ್ಯಾವ ಭಾಷೆಯ ಸಂಪಾದಕರು ಪ್ರಧಾನಿ ಮೋದಿಯವರ ಸಂದರ್ಶನ ಮಾಡಿದ್ದಾರೆ?

ಟಿವಿ9 ನೆಟ್ವರ್ಕ್ ನ ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆ ಚ್ಯಾನೆಲ್ ಗಳ ಸಂಪಾದಕರು ಪ್ರಧಾನಿ ಮೋದಿಯವರ ಸಂದರ್ಶನ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಶಿರಸಿಯಲ್ಲಿ ಹಣ್ಣು ಮಾರುವ ಮೋಹಿನಿ ಗೌಡರನ್ನು ಭೇಟಿಯಾದ ಪ್ರಧಾನಿ ಮೋದಿ; ಈ ಮಹಿಳೆಯ ಸಾಧನೆ ಏನು?

Published On - 12:19 pm, Thu, 2 May 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ