ಪ್ರಜ್ವಲ್ ರೇವಣ್ಣ ಪ್ರಕರಣ; ವಿದೇಶಕ್ಕೆ ಹೋದವರು ರಿಟರ್ನ್ ಟಿಕೆಟ್ ಜೊತೆಯೇ ಹೋಗಿರುತ್ತಾರೆ: ಡಿಕೆ ಸುರೇಶ್

ಪ್ರಜ್ವಲ್ ರೇವಣ್ಣ ಪ್ರಕರಣ; ವಿದೇಶಕ್ಕೆ ಹೋದವರು ರಿಟರ್ನ್ ಟಿಕೆಟ್ ಜೊತೆಯೇ ಹೋಗಿರುತ್ತಾರೆ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2024 | 12:56 PM

ಅವರಿಗೆ ಕುಟುಂಬಗಳಿರುತ್ತವೆ ಮತ್ತು ಇದೇ ಸಮಾಜದಲ್ಲಿ ಅವರು ಬದುಕಬೇಕಾಗುತ್ತದೆ. ಅವರು ಯಾವ ಆಮಿಶಕ್ಕೆ ಬಲಿಯಾದರು, ಅವರ ಮೇಲೆ ಯಾವ ಒತ್ತಡ ಇತ್ತು, ಅವರಲ್ಲಿ ಬಡವರು ಇರಬಹುದು, ಮಧ್ಯಮ ವರ್ಗಗಳ ಕುಟುಂಬದವರಿರಬಹುದು, ಅವರು ಯಾರೇ ಆಗಿರಲಿ, ಮಹಿಳೆಯರು ಅನ್ನೋದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಸುರೇಶ್ ಹೇಳಿದರು.

ಬೆಂಗಳೂರು: ನಗರದಲ್ಲಿದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಸಂಸದ ಡಿಕೆ ಸುರೇಶ್ (DK Suresh), ವಿದೇಶಕ್ಕೆ ಯಾರೇ ಹೊದರೂ ರಿಟರ್ನ್ ಟಿಕೆಟ್ (return ticket) ಜೊತೆ ಹೋಗಬೇಕಾಗುತ್ತೆ, ಹಾಗಾಗಿ ಪ್ರಜ್ವಲ್ ರೇವಣ್ಣ (Prajwal Revanna) ಸಹ ರಿಟರ್ನ್ ಟಿಕೆಟ್ ಇಟ್ಟುಕೊಂಡೇ ಬೇರೆ ದೇಶಕ್ಕೆ ಹೋಗಿರುತ್ತಾರೆ, ಅವರು ಯಾವಾಗ ವಾಪಸ್ಸು ಬರಲಿದ್ದಾರೆ? ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದನ್ನು ಮಾಧ್ಯಮದವರೇ ಪತ್ತೆ ಹಚ್ಚಬೇಕು ಎಂದು ಹೇಳಿದರು. ತನಿಖೆ ಹೇಗೆ ನಡೆಯುತ್ತಿದೆ, ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದನ್ನು ಮಾಧ್ಯಮಗಳಿಂದ ತಿಳೀದುಕೊಳ್ಳುತ್ತಿದ್ದೇನೆಯೇ ವೈಯಕ್ತಿಕವಾಗಿ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ಅವರು ಹೇಳಿದರು. ಆದರೆ ಈ ಪ್ರಕರಣದಲ್ಲಿ ಯಾರೂ ಸಂತ್ರಸ್ತೆಯರ ಬಗ್ಗೆ ಮಾತಾಡುತ್ತಿಲ್ಲ, ಅವರ ಸಂಖ್ಯೆ ಒಂದೆರಡಲ್ಲ, ಅವರ ಭವಿಷ್ಯವೇನು? ಅವರಿಗೆ ಕುಟುಂಬಗಳಿರುತ್ತವೆ ಮತ್ತು ಇದೇ ಸಮಾಜದಲ್ಲಿ ಅವರು ಬದುಕಬೇಕಾಗುತ್ತದೆ. ಅವರು ಯಾವ ಆಮಿಶಕ್ಕೆ ಬಲಿಯಾದರು, ಅವರ ಮೇಲೆ ಯಾವ ಒತ್ತಡ ಇತ್ತು, ಅವರಲ್ಲ್ಲಿ ಬಡವರು ಇರಬಹುದು, ಮಧ್ಯಮ ವರ್ಗಗಳ ಕುಟುಂಬದವರಿರಬಹುದು, ಅವರು ಯಾರೇ ಆಗಿರಲಿ, ಮಹಿಳೆಯರು ಅನ್ನೋದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇವೇಗೌಡ ಕುಟುಂಬದ ಆಸ್ತಿ ಪೆನ್​ಡ್ರೈವ್, ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ: ಡಿಕೆ ಸುರೇಶ್ ತಿರುಗೇಟು