AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್​ಡಿ ಕುಮಾರಸ್ವಾಮಿ ಕೈವಾಡ: ಡಿಕೆ ಸುರೇಶ್ ಗಂಭೀರ ಆರೋಪ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ವಿಡಿಯೋ ಇದ್ದ ಪೆನ್​ಡ್ರೈವ್​​ ಅನ್ನು ಹಾಸನ ಬಿಜೆಪಿ ನಾಯಕ ದೇವರಾಜೇಗೌಡಗೆ ನೀಡಿದ್ದೆ ಎಂದು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಮಂಗಳವಾರ ಹೇಳಿದ್ದರು. ಆ ನಂತರ ಅದನ್ನು ಅಲ್ಲಗಳೆದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕುಮಾರಸ್ವಾಮಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್​ಡಿ ಕುಮಾರಸ್ವಾಮಿ ಕೈವಾಡ: ಡಿಕೆ ಸುರೇಶ್ ಗಂಭೀರ ಆರೋಪ
ಡಿಕೆ ಸುರೇಶ್ & ಹೆಚ್​ಡಿ ಕುಮಾರಸ್ವಾಮಿ
ಪ್ರಸನ್ನ ಗಾಂವ್ಕರ್​
| Edited By: |

Updated on: May 01, 2024 | 11:50 AM

Share

ಬೆಂಗಳೂರು, ಮೇ 1: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಕೈವಾಡ ಇದೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಡಿಯೋ ಬಿಡುಗಡೆ ಹಿಂದೆ ಮೈತ್ರಿ ನಾಯಕರು ಹಾಗೂ ಹೆಚ್​ಡಿ ಕುಮಾರಸ್ವಾಮಿ ಕೈವಾಡ ಇದೆ. ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಗಮನ ಹರಿಸಬೇಕಿದೆ. ಈ ಕೇಸ್​ ಬಗ್ಗೆ ಹಾಸನ ಜಿಲ್ಲೆಯಲ್ಲಿ ಮೊದಲೇ ಗುಸುಗುಸು ಇತ್ತು. ಹಾಗೆಂದು ವೀಡಿಯೋ ನೋಡಿದವರು ಯಾರೂ ಇರಲಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತಂದಾಗ ಅದು ಖಚಿತ​ ಆಗಿದೆ. ಪೆನ್​ಡ್ರೈವ್ ಬಿಡುಗಡೆಯಾದಾಗ ಬಹಿರಂಗವಾಗಿ ಚರ್ಚೆ ಆಗಿದೆ. ಈ ವಿಡಿಯೋ ಹಿಂದೆ ಹಾಸನ ಜಿಲ್ಲಾ ನಾಯಕರ ಕೈವಾಡ ಇದೆ ಎಂದರು.

ಸದ್ಯ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಡಿಸಿಎಂ ಡಿಕೆಶಿವಕುಮಾರ್ ಹೆಸರು ಹೇಳದಿದ್ದರೆ ಕುಮಾರಸ್ವಾಮಿ ಕುಟುಂಬಕ್ಕೆ ಊಟ ಸೇರುವುದಿಲ್ಲ. ಬಹಳ ದೊಡ್ಡ ಕುಟುಂಬ ಅಲ್ವಾ ಅವರದ್ದು. ಅವರವರ ಉಳಿವಿಗಾಗಿ ಡಿಕೆಶಿಯವರನ್ನು ಬಳಸಿಕೊಳ್ಳುತ್ತಿದ್ದಾರೆ. ಡಿಕೆಶಿಯನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ವೀಡಿಯೋ ಬಿಡುಗಡೆ ಹಿಂದೆ ಅವರ ಮೈತ್ರಿ ನಾಯಕರು ಹಾಗೂ ಕುಮಾರಸ್ವಾಮಿ ಕೈವಾಡ ಇದೆ ಎಂದು ಸುರೇಶ್ ಹೇಳಿದರು.

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ವಿಡಿಯೋ ಮೂಲ ಹುಡುಕುವುದು ಹೇಗೆ, ಹೇಗಿರಲಿದೆ ಎಸ್​ಐಟಿ ತನಿಖೆ? ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್ ಬಳಿ ವಿಡಿಯೋ ಇದ್ದಿದ್ದರೆ ಮುಂಚೆಯೇ ಬಿಡುಗಡೆ ಮಾಡುತ್ತಿದ್ದರು. ಇದರ ಹಿಂದೆ ಹಾಸನ ನಾಯಕರ ಕೈವಾಡ ಇದೆ. ಕುಮಾರಸ್ವಾಮಿ ಕೈವಾಡ ಕೂಡ ಇದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಹಾನ್ ನಾಯಕರ ಪಾತ್ರದ ಬಗ್ಗೆ ಚರ್ಚೆಯಾಗಬೇಕು: ಹೆಚ್ ಡಿ ಕುಮಾರಸ್ವಾಮಿ

ಅಶ್ಲೀಲ ವಿಡಿಯೋ ಬಿಡುಗಡೆಯಲ್ಲಿ ಮಹಾ ನಾಯಕನ ಕೈವಾಡ ಇದೆ ಎಂದು ನೇರ ಹೆಸರು ಹೇಳದೆ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡುವ ಹುನ್ನಾರ ಈ ಪ್ರಕರಣದ ಹಿಂದಿದೆ. ಮಹಾನಾಯಕನ ಕೈವಾಡವೂ ಇದೆ ಎಂದು ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ