ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳ ತಾಯಿ ಸಾವಿಗೆ ಕಾರಣವಾಯ್ತಾ ಖಾಸಗಿ ಆಸ್ಪತ್ರೆ

|

Updated on: May 22, 2024 | 7:54 PM

ಹೆರಿಗೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಮಣಿಪಾಲ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬಾಣಂತಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ರೂ. ಬಿಲ್‌ ಮಾಡಿರುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಕುಟುಂಬಸ್ಥರು ಜಮಾಯಿಸಿದ್ದಾರೆ.

ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳ ತಾಯಿ ಸಾವಿಗೆ ಕಾರಣವಾಯ್ತಾ ಖಾಸಗಿ ಆಸ್ಪತ್ರೆ
ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳ ತಾಯಿ ಸಾವಿಗೆ ಕಾರಣವಾಯ್ತಾ ಖಾಸಗಿ ಆಸ್ಪತ್ರೆ
Follow us on

ಬೆಂಗಳೂರು, ಮೇ 22: ಹೆರಿಗೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಮಣಿಪಾಲ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜನನಿ (33) ಮೃತ ಬಾಣಂತಿ (pregnant). ಕ್ಲೌಡ್‌ ನೈನ್‌ ಆಸ್ಪತ್ರೆಯಲ್ಲಿ ಐವ್ಹಿಎಫ್​​ (IVF) ಮೂಲಕ ಜನನಿ ಹಾಗೂ ಕೇಶವ್ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು. ಬಳಿಕ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದು, ಇಂದು ಮೃತಪಟ್ಟಿದ್ದಾರೆ.  ಆದರೆ ಕ್ಲೌಡ್‌ನೈನ್‌ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಜನನಿ ಸಾವು ಎಂದು ಆರೋಪ ಮಾಡಲಾಗಿದೆ.

ಮೇ 2ರಂದು ಪ್ರಸವ ಪೂರ್ವ ಹೆರಿಗೆ ಆಗಿತ್ತು. ಬಳಿಕ ಜನನಿಗೆ ಜಾಂಡೀಸ್, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ಬಾಣಂತಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ರೂ. ಬಿಲ್‌ ಮಾಡಿರುವ ಆರೋಪ ಕೇಳಿಬಂದಿದ್ದು, ಬಿಲ್‌ ಪಾವತಿಸಿ ಶವ ತೆಗೆದುಕೊಂಡು ಹೋಗಿ ಅಂತಿರುವ ವೈದ್ಯರು. ಆದರೆ ಕ್ಲೌಡ್‌ನೈನ್‌ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಜನನಿ ಸಾವು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹೊಯ್ಸಳ ವಾಹನದಲ್ಲಿ ಕಲೆಕ್ಷನ್ ಮಾಡುತ್ತಿದ್ದ ಆರೋಪ; ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಸದ್ಯ ಕ್ಲೌಡ್‌ನೈನ್‌ ಆಸ್ಪತ್ರೆಯ ಬಳಿ ಜಮಾಯಿಸಿರುವ ಮೃತ ಜನನಿ ಕುಟುಂಬಸ್ಥರು, ಮಣಿಪಾಲ್ ಆಸ್ಪತ್ರೆ ಬಿಲ್‌ನ್ನು ಕ್ಲೌಡ್‌ನೈನ್‌ ಆಸ್ಪತ್ರೆಯವರೇ ಪಾವತಿಸುವಂತೆ ಪಟ್ಟು ಹಿಡಿದಿದ್ದಾರೆ. ಇನ್ನು ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲೂ 25 ಲಕ್ಷ ರೂ. ಬಿಲ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಜೆ.ಬಿ.ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಮೃತ ಜನನಿ ಪತಿ ಕೇಶವ್ ಪ್ರತಿಕ್ರಿಯಿಸಿದ್ದು, ಏ. 25 ರಂದು ಟೆಸ್ಟ್ ಮಾಡಿಸಲು ಕ್ಲೌಡ್‌ನೈನ್‌ ಆಸ್ಪತ್ರೆಗೆ ಬಂದಿದ್ದೇವು. ಅವತ್ತು ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ನಂತರ ನನ್ನ ಹೆಂಡತಿಗೆ ಕಾಲು ಊತ ಸೇರಿದಂತೆ ಕೆಲವು ಸಮಸ್ಯೆ ಕಂಡುಬಂತು. ಮೇ 2 ರಂದು ಬೆಳಿಗ್ಗೆ ಚಿಕಿತ್ಸೆಗೆ ಬಂದಿದ್ವಿ. ಅವತ್ತು ಎರಡು ಮಗು ಡೆಲಿವರಿ ಆಯ್ತು. ಅವತ್ತು ಬೆಳಿಗ್ಗೆ 11 ಗಂಟೆಗೆ ನನ್ನ ಹೆಂಡತಿಯನ್ನ ಮಾತಾಡಿಸಿದೆ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ನನ್ನ ಹೆಂಡತಿಗೆ ಸಿರಿಯಸ್ ಆಗಿದೆ ಅಂದರು. ನಂತರ ಮಣಿಪಾಲ್ ಆಸ್ಪತ್ರೆಗೆ ಕಳಿಸಿದರು.

ಇದನ್ನೂ ಓದಿ: West Nile Fever: ಕ್ಯೂಲೆಕ್ಸ್ ಸೊಳ್ಳೆಗಳಿಂದ ಬೆಂಗಳೂರಿಗೂ ವೆಸ್ಟ್ ನೈಲ್ ಜ್ವರದ ಆತಂಕ

ಈಗ ಪೇಮೆಂಟ್ ಮಾಡಿದರೆ ಮಾತ್ರ ನನ್ನ ಹೆಂಡತಿ ಮೃತದೇಹ ಸಿಗುತ್ತೆ ಎನ್ನುತ್ತಿದ್ದಾರೆ. 11 ಲಕ್ಷ ರೂ. ಮೆಡಿಸಿನ್ ತಂದಿದ್ದೆ, 30 ಲಕ್ಷ ರೂ. ಬಿಲ್ ಆಗಿದೆ. ಇವರು ಮಾಡಿದ ತಪ್ಪಿನಿಂದ ನಮಗೆ ಸಮಸ್ಯೆ ಆಗಿದೆ. ಹೆರಿಗೆಗೆ 1 ಲಕ್ಷ 30 ಸಾವಿರ ರೂ. ಪ್ಯಾಕೇಜ್ ಇತ್ತು. ಎರಡು ಗಂಡು ಮಗು ಆಗಿದೆ. ಇಲ್ಲು 25 ಲಕ್ಷ ರೂ. ಅಲ್ಲೂ 30 ಲಕ್ಷ ರೂ. ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಇದು ನೀವು ಮಾಡಿರುವ ತಪ್ಪು, ನೀವೆ ಪರಿಹಾರ ಮಾಡಿ ಎಂದು ಕೇಳಿದ್ದೇವೆ ಎಂದು ಹೇಳಿದ್ದಾರೆ.

ವರದಿ: ಪ್ರದೀಪ್​ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.