ಹೊಯ್ಸಳ ವಾಹನದಲ್ಲಿ ಕಲೆಕ್ಷನ್ ಮಾಡುತ್ತಿದ್ದ ಆರೋಪ; ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಹೊಯ್ಸಳ ವಾಹನದಲ್ಲಿದ್ದ ಪೊಲೀಸರು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇವರು ಅಸಲಿ ಅಲ್ಲ ನಕಲಿ ಪೊಲೀಸರು ಎಂದು ಆರೋಪಿಸಿ ಸಾರ್ವಜನಿಕರು ಅಟ್ಟಿಸಿಕೊಂಡು ಹೋದ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಮೇ.22: ಹೊಯ್ಸಳ ವಾಹನದಲ್ಲಿ ಕಲೆಕ್ಷನ್ ಮಾಡುತ್ತಿದ್ದ ಪೊಲೀಸರನ್ನು ಕಳ್ಳ ಕಳ್ಳ ಎಂದು ಜನರು ಅಟ್ಟಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಘಟನೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ (Police Suspended) ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಆದೇಶ ಹೊರಡಿಸಿದ್ದಾರೆ. ರಾಜಗೋಪಾಲನಗರ ಠಾಣೆಯ ಎಎಸ್ಐ ರಾಮಲಿಂಗಯ್ಯ, ಹೆಡ್ ಕಾನ್ಸ್ಟೇಬಲ್ ಪ್ರಸನ್ನ ಕುಮಾರ್ ಎಂಬುವವರನ್ನು ಸಸ್ಪೆಂಡ್ ಮಾಡಲಾಗಿದೆ.
ರಾಮಲಿಂಗಯ್ಯ ಮತ್ತು ಪ್ರಸನ್ನ ಕುಮಾರ್ ಅವರು ಹೊಯ್ಸಳ ವಾಹನದಲ್ಲಿ ಬಂದು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿದ್ದು ಬಳಿಕ ಪೊಲೀಸ್ ಕಳ್ಳ ಎಂದು ಅಟ್ಟಿಸಿಕೊಂಡು ಹೋಗಿದ್ದರು. ಈ ಘಟನೆ ಪೊಲೀಸ್ ಇಲಾಖೆಗೆ ಬಹಳ ಮುಜುಗರ ತಂದಿತ್ತು. ಹೀಗಾಗಿ ಪೊಲೀಸ್ ಕಮಿಷನರ್ ತನಿಖೆಗೆ ಆದೇಶ ನೀಡಿದ್ದರು. ಸದ್ಯ ಈಗ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕಳ್ಳ ಅಂತ ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಜನರು
ಒಂದೇ ದಿನ ಏಳು ಮಕ್ಕಳ ಮೇಲೆ ಬೀದಿ ನಾಯಿ ಅಟ್ಯಾಕ್, ಓರ್ವ ಬಾಲಕಿ ಸಾವು
ರಾಯಚೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. 15 ದಿನಗಳ ಹಿಂದಷ್ಟೇ ಕೊರವಿಹಾಳದಲ್ಲಿ ಒಂದೇ ನಾಯಿ ಐದಾರು ಕಡೆ ದಾಳಿ ಮಾಡಿತ್ತು. ಮನೆ ಮುಂದೆ ಆಟವಾಡ್ತಿದ್ದ ಏಳು ಮಕ್ಕಳಿಗೆ ಕಚ್ಚಿತ್ತು. ಇದೀಗ ನಾಯಿ ಕಡಿತದಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಲಾವಣ್ಯ ಸಾವನ್ನಪ್ಪಿದ್ದಾಳೆ.
ಲಾವಣ್ಯ ಕತ್ತಿನ ಹಿಂಭಾಗದಲ್ಲಿ ನಾಯಿ ಬಲವಾಗಿ ಕಚ್ಚಿತ್ತು. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ರಿಮ್ಸ್ನಲ್ಲಿ ಹೆಚ್ಚುವರಿ ಟ್ರೀಟ್ಮೆಂಟ್ ಕೊಡಿಸಿದ್ರು. ಕೆಲ ದಿನಗಳ ಹಿಂದಷ್ಟೇ ಮನೆ ಸೇರಿದ್ದ ಲಾವಣ್ಯ, ಏಕಾಏಕಿ ಪ್ರಾಣಬಿಟ್ಟಿದ್ದಾಳೆ. ಇದೀಗ ಗಾಯಗೊಂಡಿರುವ ಇತರೆ ಮಕ್ಕಳು ಪೋಷಕರು ಕೂಡ ಕಂಗಾಲಾಗಿದ್ದಾರೆ.
ಘಟನೆ ನಡೆದು 15 ದಿನವಾದ್ರು ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಗಾಯಾಳು ಮಕ್ಕಳ ಪರಿಸ್ಥಿತಿ ವಿಚಾರಿಸಿಲ್ಲ. ಇದೀಗ ಮೃತಳ ಕುಟುಂಬಕ್ಕೆ ಡಿಸಿ ಪರಿಹಾರದ ಭರವಸೆ ನೀಡಿದ್ದು, ನಾಯಿ ಕಡಿತಕ್ಕೆ ನಿಯಂತ್ರಣ ಹೇರುತ್ತಿವಿ ಅಂತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ