ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿದ್ದಕ್ಕೆ ದಂಡ: ಅಸಲಿ ಕಾರಣ ಬಿಚ್ಚಿಟ್ಟ ಯುವಕ
ನಿನ್ನೆ ವಿಜಯನಗರದ ಮೆಟ್ರೋ ಸ್ಟೇಷನ್ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಯುತ್ತಾ ಕುಳಿತ್ತಿದ್ದಕ್ಕೆ ಪ್ರಯಾಣಿಕರೊಬ್ಬರಿಗೆ 50 ರೂ. ದಂಡ ವಿಧಿಸಲಾಗಿತ್ತು. ಅರುಣ್ ಜುಗಳಿ ಎಂಬ ಪ್ರಯಾಣಿಕರು ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಬಿಎಂಆರ್ಸಿಎಲ್ ಸಂಪೂರ್ಣ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮೇ 12: ನಿನ್ನೆ ವಿಜಯನಗರದ ಮೆಟ್ರೋ ಸ್ಟೇಷನ್ನಲ್ಲಿ (namma metro) 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಯುತ್ತಾ ಕುಳಿತ್ತಿದ್ದಕ್ಕೆ ಪ್ರಯಾಣಿಕರೊಬ್ಬರಿಗೆ 50 ರೂ. ದಂಡ ವಿಧಿಸಲಾಗಿತ್ತು. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ನ (BMRCL) ಈ ಹೊಸ ರೂಲ್ಸ್ನಿಂದ ಪ್ರಯಾಣಿಕರು ದಂಗಾಗಿದ್ದರು. ಜೊತೆಗೆ ಮೆಟ್ರೋ ಅಧಿಕಾರಿಗಳ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ದಂಡ ಕಟ್ಟಿದ್ದ ಯುವಕ ಘಟನೆ ಕುರಿತಾಗಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅರುಣ್ ಜುಗಳಿ ಎಂಬ ಪ್ರಯಾಣಿಕರು ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಆ ದಿನ ನಿಜವಾಗಿ ಏನಾಯಿತು ಅಂದರೆ, ಗುರುವಾರ ಭಾರೀ ಮಳೆ ಬರುತ್ತಿತ್ತು. ಆದ್ದರಿಂದ ವಿಜಯನಗರ ಮೆಟ್ರೋದಲ್ಲಿ ಮೆಟ್ರೋದ ನಿರ್ಗಮನ ಸ್ಥಳದ ಹೊರಗೆ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಹಾಗೆಯೇ ನನ್ನ ಫೋನ್ ಡೆಡ್ ಆಗಿತ್ತು ಮತ್ತು ನಿರ್ಗಮನ ಭಾಗದಲ್ಲಿ ಯಾವುದೇ ವಿದ್ಯುತ್ ಪ್ಲಗ್‌ಗಳು ಆನ್ ಆಗಿರಲಿಲ್ಲ, ಆದ್ದರಿಂದ ಮತ್ತೆ ಒಳಗೆ ಪ್ರವೇಶಿಸಿ ಮತ್ತು ಮಳೆ ನಿಲ್ಲುವವರೆಗೆ ನನ್ನ ಫೋನ್ ಅನ್ನು ಚಾರ್ಜ್ ಮಾಡಲು ಯೋಚಿಸಿದೆ’.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ
‘ನಾನು ಕೇವಲ 5 ನಿಮಿಷ ತಡವಾಗಿ ನಿರ್ಗಮಿಸಿದೆ, ಆದ್ದರಿಂದ ಮೆಟ್ರೋ ಸಿಬ್ಬಂದಿಗಳು ನನಗೆ ಮೆಟ್ರೋದಲ್ಲಿ ಹೆಚ್ಚು ಸಮಯ ಸ್ಟೇಷನ್ನಲ್ಲಿ ಇದದ್ದಕ್ಕಾಗಿ 50 ರೂ. ದಂಡ ವಿಧಿಸಿದ್ದಾರೆ. ನಾನು ವಿನಂತಿಸಿಕೊಂಡರೂ ನನ್ನ ಮೆಟ್ರೋ ಕಾರ್ಡ್‌ನಿಂದ ದಂಡವನ್ನು ವಿಧಿಸಿದರು’.
‘ನನ್ನ ಜೊತೆಗೆ 10 ಕ್ಕೂ ಹೆಚ್ಚು ಪ್ರಯಾಣಿಕರು ಈ ವಿಷಯದ ಬಗ್ಗೆ ಯಾರೋ ಮಾತನಾಡಲಿಲ್ಲ. ವಿಜನಗರದ ಮೆಟ್ರೊ ನಿಲ್ದಾಣದಲ್ಲಿ ಅದೇ ಮೆಟ್ರೋ ನಿಲ್ದಾಣದಲ್ಲಿ ಎಲ್ಲೆಲ್ಲಿಯೂ ಗ್ರಾಹಕರಿಂದ ವಸೂಲಿ ಮಾಡಿರುವುದನ್ನು ಬಿಎಂಎಸಿಎಲ್ ಉಲ್ಲೇಖಿಸಿಲ್ಲ. ಹೀಗಾಗಿ ನಾನು ಕರೆ ಮಾಡಿ ಹಣ ವಾಪಸ್ ಕೇಳಿದೆ’.
ಇದನ್ನೂ ಓದಿ: Bengaluru Rains: ಕೆಂಪೇಗೌಡ ವಿಮಾನ ನಿಲ್ದಾಣದ ‘ಟರ್ಮಿನಲ್ 2’ ಚಾವಣಿಯಲ್ಲಿ ಸೋರಿಕೆ, ಏರ್ಪೋರ್ಟ್ನೊಳಗೆ ನುಗ್ಗಿದ ನೀರು
‘ಈ ಘಟನೆಯ ನಂತರ ಅವರು ಅದೇ ಕಾರಣಕ್ಕಾಗಿ ಯಾವುದೇ ದಂಡವಿಲ್ಲದೆ ಸುಮಾರು 15 ಜನರನ್ನು ಕಳುಹಿಸಿದರು. ನನ್ನ ಅನುಮತಿಯ ಮೇರೆಗೆ ಇದನ್ನು ರೆಕಾರ್ಡ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ ಮಾಧ್ಯಮ ವರದಿಗಾರ ಸಹ ಅವರ ಜೊತೆಗಿದ್ದರು. ಇದು ಬಿಎಂಆರ್ಸಿಎಲ್ ಸಂಪೂರ್ಣ ವಂಚನೆ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.