ಬೆಂಗಳೂರು, ಮೇ 17: ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಜೂ.3ಕ್ಕೆ ಚುನಾವಣೆ ನಿಗದಿಯಾಗಿದೆ. ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಸ್ಕ್ರೂಟಿನಿ ವೇಳೆ ಅನಗತ್ಯವಾಗಿ ನಾಮಪತ್ರ (nomination) ತಿರಸ್ಕಾರ ಆರೋಪ ಕೇಳಿಬಂದಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೊರತುಪಡಿಸಿ ಉಳಿದ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ (Amlan Aditya Biswas) ವಿರುದ್ಧ ಆರೋಪ ಮಾಡಲಾಗಿದೆ.
ನಾಮಪತ್ರದ ಕೆಲ ಅಂಶ ಅನಗತ್ಯವಾಗಿ ಉಲ್ಲೇಖಿಸಿ ತಿರಸ್ಕಾರ ಆರೋಪ ಮಾಡಿದ್ದು, ದಾಖಲಾತಿಗಳನ್ನೂ ಕೂಡ ತೋರಿಸುತ್ತಿಲ್ಲ ಎಂದು ಕೆಲ ಅಭ್ಯರ್ಥಿಗಳ ಕಿಡಿ ಕಾರಿದ್ದಾರೆ. ಸದ್ಯ ನಾಮಪತ್ರ ತಿರಸ್ಕಾರಗೊಂಡ ಅಭ್ಯರ್ಥಿಗಳಿಂದ ಆಕ್ರೋಶ ಹೊರಹಾಕಲಾಗಿದೆ. ಹೀಗಾಗಿ ಶಾಂತಿನಗರ ಕಚೇರಿಯಲ್ಲಿ ಸ್ಕ್ರೂಟಿನಿ ವೇಳೆ ಕೆಲಕಾಲ ಗೊಂದಲ ಉಂಟಾಗಿತ್ತು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ನಾಯಕರಲ್ಲಿ ಗೊಂದಲ ವಿಚಾರ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಂದ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬಿಜೆಪಿ ಘೋಷಿತ ಅಭ್ಯರ್ಥಿ ನಿಂಗರಾಜೇಗೌಡ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮೈತ್ರಿ ಅಭ್ಯರ್ಥಿ ವಿವೇಕಾನಂದಗೆ ನಿಂಗರಾಜೇಗೌಡ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ತಂದಿದ್ದ ಗಿಫ್ಟ್ ಬಾಕ್ಸ್ಗಳು ಪತ್ತೆ ಹಚ್ಚಿದ ಬಿಜೆಪಿ ಕಾರ್ಯಕರ್ತರು
ಈ ವೇಳೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿವೇಕಾನಂದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಮರಿತಿಬ್ಬೇಗೌಡ ಕಣಕ್ಕೆ
ರಾಜ್ಯ ವಿಧಾನ ಪರಿಷತ್ಗೆ ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಗಳು ಸೇರಿ ಒಟ್ಟು 6 ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ಆರು ಸ್ಥಾನಗಳ ಪೈಕಿ ಐದು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇದೀಗ ಜೆಡಿಎಸ್ ಬೇಡಿಕೆಯಂತೆಯೇ 2ಸ್ಥಾನ ಬಿಟ್ಟು ಕೊಡೋಕೆ ಬಿಜೆಪಿ ಸಮ್ಮತಿ ನೀಡಿದೆ.
ಕುಮಾರಸ್ವಾಮಿ ಬೇಡಿಕೆಗೆ ಜೆ.ಪಿ.ನಡ್ಡಾ ಹಾಗೂ ವಿಜಯೇಂದ್ರ ಸಮ್ಮತಿ ನೀಡಿದ್ದಾರೆ. 6 ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದ್ರೆ, ಉಳಿದೆರಡು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.