ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತುಪಡಿಸಲು ಶಿಫಾರಸು

|

Updated on: Feb 26, 2021 | 6:02 PM

ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್​​ಗೆ ವಿಚಾರಣಾ ವರದಿ ಸಲ್ಲಿಕೆಯಾಗಿದೆ. ವರದಿಯಲ್ಲಿ ವಕೀಲೆ ವಿರುದ್ಧ ದುರ್ನಡತೆಯ ಆರೋಪ ಉಲ್ಲೇಖಿಸಲಾಗಿದೆ.

ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತುಪಡಿಸಲು ಶಿಫಾರಸು
K.S.ಭಗವಾನ್ (ಎಡ); ವಕೀಲೆ ಮೀರಾ (ಬಲ)
Follow us on

ಬೆಂಗಳೂರು: ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್​​ಗೆ ವಿಚಾರಣಾ ವರದಿ ಸಲ್ಲಿಕೆಯಾಗಿದೆ. ವರದಿಯಲ್ಲಿ ವಕೀಲೆ ವಿರುದ್ಧ ದುರ್ನಡತೆಯ ಆರೋಪ ಉಲ್ಲೇಖಿಸಲಾಗಿದೆ. ಜೊತೆಗೆ, ಮೀರಾ ರಾಘವೇಂದ್ರ ಅವರ ವಕೀಲಿಕೆಯ ಸನ್ನದು ಅಮಾನತುಪಡಿಸಲು ಶಿಫಾರಸು ಮಾಡಲಾಗಿದೆ. ಬಾರ್ ಕೌನ್ಸಿಲ್ ಉಪಸಮಿತಿಯಿಂದ ಶಿಫಾರಸು ಮಾಡಲಾಗಿದೆ.

ಬಾರ್​ ಕೌನ್ಸಿಲ್​ ಸದಸ್ಯರಾದ ಎನ್.ಶಿವಕುಮಾರ್, ಎಂ.ದೇವರಾಜ ಹಾಗೂ M.N.ಮಧುಸೂದನ್​ರೊಳಗೊಂಡ ಉಪಸಮಿತಿ ವಿಚಾರಣೆ ನಡೆಸಲಿದೆ. ಹಾಗಾಗಿ, ಶಿಸ್ತು ವಿಚಾರಣೆ ಮುಗಿಯುವವರೆಗೆ ಮೀರಾ ರಾಘವೇಂದ್ರ ಅವರ ವಕೀಲಿಕೆಯ ಸನ್ನದು ಅಮಾನತಿಗೆ ಶಿಫಾರಸು ಮಾಡಲಾಗಿದೆ.

ಏನಿದು ಪ್ರಕರಣ?
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಾಹಿತಿ ಭಗವಾನ್‌ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಮಸಿ ಬಳಿದಿದ್ದರು. ಇಷ್ಟು ವಯಸ್ಸಾಗಿದೆ. ಇನ್ನೂ  ನಾಚಿಕೆಯಾಗಲ್ವಾ? ರಾಮನ ಬಗ್ಗೆ ಧರ್ಮದ ಬಗ್ಗೆ ಮಾತಾನಾಡ್ತೀರಾ ಎಂದು ವಕೀಲೆ ಮೀರಾ, ಭಗವಾನ್ ಅವರಿಗೆ ಆವಾಜ್ ಹಾಕಿ ಮುಖಕ್ಕೆ ಮಸಿ ಬಳಿದಿದ್ದರು.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್​.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ಇಬ್ಬರ ವಿರುದ್ಧ ಕೇಸ್‌ ದಾಖಲಾಗಿತ್ತು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.

ಭಗವಾನ್​ ಮುಖಕ್ಕೆ ಮಸಿ ಬಳಿಸಿದ್ದ ವಕೀಲೆ ಮೀರಾ ಮತ್ತು ಅವರ ಪತಿ ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಕೋರ್ಟ್‌ ಆವರಣದಲ್ಲೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ಮೈಸೂರಿಗೆ ಹೋಗುವಷ್ಟರಲ್ಲಿ ನಮ್ಮ ಹುಡುಗರು ನಿನ್ನನ್ನು ಕೊಲ್ಲಲಿದ್ದಾರೆ. ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ ಎಂದು ವಕೀಲೆ ಪ್ರೊ.ಕೆ.ಎಸ್. ಭಗವಾನ್‌ಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಗೌರಿ ಲಂಕೇಶ್, M.M.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ -ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ವಿರುದ್ಧ ಕೇಸ್‌ ದಾಖಲು

ಇದನ್ನೂ ಓದಿ: ಭಗವಾನ್ ಮೇಲೆ ವಕೀಲೆ ಮೀರಾ ಮಸಿ ಬಳಿದಿದ್ದು ಸರಿ ಅಲ್ಲ, ಆದರೆ.. -ಸಚಿವ ಸುರೇಶ್ ಕುಮಾರ್

Published On - 6:00 pm, Fri, 26 February 21