AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠ್ಯ ಪರಿಷ್ಕರಣೆ ವಿವಾದ: ತಪ್ಪು ಮಾಹಿತಿಗಳನ್ನು ಪಟ್ಟಿ ಮಾಡಿದ ಬರಗೂರು ರಾಮಚಂದ್ರಪ್ಪ

ಪಠ್ಯ ಪರಿಷ್ಕರಣೆಯಲ್ಲಿ ಆದ ಕೆಲವೊಂದು ತಪ್ಪುಗಳ ಪಟ್ಟಿಯನ್ನು ಸಿದ್ಧಪಡಿಸಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ಪರಿಷ್ಕರಣೆ ವಿರೋಧಿಸುತ್ತಿರುವವರನ್ನ ಕರೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಪಠ್ಯ ಪರಿಷ್ಕರಣೆ ವಿವಾದ: ತಪ್ಪು ಮಾಹಿತಿಗಳನ್ನು ಪಟ್ಟಿ ಮಾಡಿದ ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
TV9 Web
| Updated By: Rakesh Nayak Manchi|

Updated on:Jun 04, 2022 | 6:03 PM

Share

ಬೆಂಗಳೂರು: ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ(Rohith Chakrathirtha) ಅವರ ಅಧ್ಯಕ್ಷತೆಯ ಸಮಿತಿ ನಡೆಸಿದ ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರಣವಾಗಿದ್ದು, ಒಂದಷ್ಟು ತಪ್ಪುಗಳು ಆಗಿವೆ ಎಂಬ ಟೀಕೆಗಳು ಕೇಳಿಬಂದಿವೆ. ಈ ನಡುವೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಪಠ್ಯ ಪರಿಷ್ಕರಣೆಯಲ್ಲಿ ಆದ ಕೆಲವೊಂದು ತಪ್ಪುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು! 3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ

ಪಠ್ಯ ಪರಿಷ್ಕರಣೆ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಹೇಳಿಕೆಯಲ್ಲಿರುವ ತಪ್ಪು ಮಾಹಿತಿಗಳ ಬಗ್ಗೆ ಪಟ್ಟಿ ಮಾಡಿದ್ದೇನೆ. ಬಸವಣ್ಣ, ಕುವೆಂಪು ತತ್ವಗಳಿಗೆ ವಿರುದ್ಧವಾಗಿ ಪಠ್ಯಪರಿಷ್ಕರಣೆ ಮಾಡಲಾಗಿದೆ. ಪರಿಷ್ಕರಣೆ ವಿರೋಧಿಸುತ್ತಿರುವವರನ್ನ ಕರೆದು ಚರ್ಚಿಸಬೇಕು. ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ: ರೋಹಿತ್ ಚಕ್ರತೀರ್ಥ

2021-22 ನೆಯ ಸಾಲಿನಲ್ಲಿ ಜಾರಿಯಲ್ಲಿದ್ದ ಗದ್ಯ ಮತ್ತು ಪದ್ಯಗಳು- ಬರಗೂರು ರಾಮಚಂದ್ರಪ್ಪ ಸಮಿತಿ

1ನೇ ತರಗತಿ-ನೆಹರು ಜನ್ಮದಿನ-ಸಮಿತಿ ರಚನೆ

5ನೇ ತರಗತಿ ಸುಳ್ಳು ಹೇಳಬಾರದು ( ಗದ್ಯ)- ಬೋಳುವಾರು ಮಹಮ್ಮದ್ ಕುಂಞ

5ನೇ ತರಗತಿ ನನ್ನ ಕವಿತೆ ( ಪೂರಕ ಗದ್ಯ)- ಮೂಡ್ನಾಕೂಡು ಚಿನ್ನಸ್ವಾಮಿ

6ನೇ ತರಗತಿ ನೀ ಹೋದ ಮರುದಿನ ( ಪದ್ಯ)- ಚನ್ನಣ್ಣ ವಾಲಿಕಾರ

6ನೇ ತರಗತಿ ಮಗು ಮತ್ತು ಹಣ್ಣುಗಳು ( ಪದ್ಯ)- ಹೆಚ್.ಎಸ್. ಶಿವಪ್ರಕಾಶ್

7ನೇ ತರಗತಿ ಅನ್ನದ ಹಂಗು, ಅನ್ಯರ ಸ್ವತ್ತು ( ಗದ್ಯ)- ಜೋಗಿ

7ನೇ ತರಗತಿ ಈ ಭೂಮಿ ಬಣ್ಣದ ಬುಗುರಿ ( ಪೂರಕ ಪದ್ಯ)- ಹಂಸಲೇಖ

7ನೇ ತರಗತಿ ಸಾವಿತ್ರಬಾಯಿ ಪುಲೆ ( ಪೂರಕ ಗದ್ಯ)- ಎಚ್. ಎಸ್ ಅನುಪಮ

7ನೇ ತರಗತಿ ನನ್ನ ಅಯ್ಯ ( ಪೂರಕ ಗದ್ಯ)- ದು. ಸರಸ್ವತಿ

8ನೇ ತರಗತಿ ಭರವಸೆ ( ಪದ್ಯ) -ಬಿ.ಟಿ. ಲಲಿತಾ ನಾಯಕ್

9ನೇ ತರಗತಿ ಕನ್ನಡ ಮೌಲ್ವಿ ( ಗದ್ಯ)- ಗೂರೂ ರಾಮಸ್ವಾಮಿ ಅಯ್ಯಂಗಾರ್

9ನೇ ತರಗತಿ ಧರ್ಮಸಮದೃಷ್ಟಿ (ವಿಜಯನಗರ ಶಾಸನ)- ಶಾಸನ ಸಾಹಿತ್ಯ-

9ನೇ ತರಗತಿ ಮರಳಿ ಮನೆಗೆ (ಪದ್ಯ)-ಅರವಿಂದ ಮಾಲಗತ್ತಿ

9ನೇ ತರಗತಿ ರಂಜಾನ್ ಸುರಕುಂಭಾ (ಪೂರಕ ಪದ್ಯ)- ಕೆ.ನೀಲಾ

10ನೇ ತರಗತಿ ಯುದ್ದ ( ಗದ್ಯ)-ಸಾರಾ ಅಬೂಬಕರ್

10 ನೇ ತರಗತಿ ವ್ಯಾಘ್ರಗೀತೆ ( ಗದ್ಯ)-ಎ.ಎನ್. ಮೂರ್ತಿರಾವ್

10ನೇ ತರಗತಿ ಸುಕುಮಾರಸ್ವಾಮಿಯ ಕಥೆ (ಹಳಗನ್ನಡ ಗದ್ಯ)-ಶಿವಕೋಟ್ಯಾಚಾರ್ಯ

10ನೇ ತರಗತಿ ಜನಪದ ಒಗಟುಗಳು (ಪೂರಕ ಗದ್ದೆ)- ಜನಪದ ಸಾಹಿತ್ಯ-

10ನೇ ತರಗತಿ ಮೃಗ ಮತ್ತು ಸುಂದರಿ (ಪೂರಕ ಗದ್ದೆ)- ಪಿ ಲಂಕೇಶ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2022-23-ನೆಯ ಸಾಲಿಗೆ ಶಿಫಾರಸ್ಸು ಮಾಡಿದ ಗದ್ಯ ಮತ್ತು ಪದ್ಯಗಳು, ಹೊಸ ಸೇರ್ಪಡೆ ಮಾಡಿರುವುದು- ರೋಹಿತ್ ಚಕ್ರವರ್ತಿ ಸಮಿತಿ

ವಿವೇಕಾನಂದ ಜನುಮದಿನ- ಸಮಿತಿ ರಚನೆ

ಜೀವನದ ಮೌಲ್ಯ (ಗದ್ಯ)- ಕಾನ್ಸ್ಟನ್ಸ್ ಜೆ ಫಾಸ್ಟರ್

ಹಿನ್ನುಡಿ (ಪೂರಕ ಗದ್ಯ- ದಿನಕರ ದೇಸಾಯಿ

ನಮ್ಮದೇನಿದೆ (ಪದ್ಯ) – ನಿರ್ಮಲಾ ಸೂರತ್ಕಲ್

ಕಂಬಳಿಹುಳು ಮತ್ತು ಚಿಟ್ಟೆ (ಪದ್ಯ)- ಎನ್‌ ಶ್ರೀನಿವಾಸ ಉಡುಪ

ಹಿಲ್ಟನ್ ಹೆಡ್ ಚಳವಳಿ- ಶಶಿಧರ ಉಡುಪ

ಗೊಂಬೆ ಕಲಿಸುವ ನೀತಿ- ಆರ್. ಎನ್. ಜಯಗೋಪಾಲ್

ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ (ಪೂರಕ ಗದ್ಯ) -ರಮಾನಂದ ಆಚಾರ್ಯ

ನನ್ನ ಬಾಲ್ಯ (ಪೂರಕ ಗದ್ಯ) -ಏಣಗಿ ಬಾಳಪ್ಪ

ಬಹುಮಾನ (ಗದ್ಯ) -ಕುವೆಂಪು

ರಾಮರಾಜ್ಯ(ಗದ್ಯ) -ಎನ್. ರಂಗನಾಥ ಶರ್ಮ

ನಾ ಕಂಡಂತೆ ಬಿ.ಜಿ.ಎಲ್. ಸ್ವಾಮಿ (ಗದ್ಯ)- ಎಸ್. ಎಲ್. ಭೈರಪ್ಪ

ಹೇಮಂತ (ಪದ್ಯ) -ಎಸ್. ವಿ. ಪರಮೇಶ್ವರ ಭಟ್ಟ

ಹೊಳೆಬಾಗಿಲು (ಪೂರಕ ಗದ್ಯ) -ಸುಶ್ರುತ ದೊಡ್ಡೇರಿ

ಶ್ರೇಷ್ಠ ಭಾರತೀಯ ಚಿಂತನೆಗಳು (ಗದ್ಯ) -ಆರ್. ಗಣೇಶ್

ಶುಕನಾಸನ ಉಪದೇಶ- ಬನ್ನಂಜೆ ಗೋವಿಂದಾಚಾರ್ಯ

ನಿಜವಾದ ಆದರ್ಶ ಪುರುಷ ಯಾರಾಗಬೇಕು..?- ಕೇಶವ ಬಲಿರಾಮ ಹೆಡಗೇವಾರ್

ಸ್ವದೇಶಿ ಸೂತ್ರದ ಸರಳ ಹಬ್ಬ(ಪೂರಕ ಗದ್ಯ)- ಶಿವಾನಂದ ಕಳವೆ

ನಾನು ಪ್ರಾಸ ಬಿಟ್ಟ ಕಥೆ (ಪೂರಕ ಗದ್ಯ) -ಎಂ. ಗೋವಿಂದ ಪೈ

ತಾಯಿ ಭಾರತೀಯ ವರಪುತ್ರರು (ಪೂರಕ ಗದ್ಯ) -ಚಕ್ರವರ್ತಿ ಸೂಲಿಬೆಲೆ ಹೊಸ ಸೇರ್ಪಡೆ)

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Sat, 4 June 22

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ