UPSC Exam: ಮೆಟ್ರೋ ಸಂಚಾರದಲ್ಲಿ ಬದಲಾವಣೆ, ಯಾವಾಗ ಆರಂಭವಾಗುತ್ತೆ ಗೊತ್ತಾ?
ನಾಳೆ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ನಡೆಯುವ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದಲೇ ಮೆಟ್ರೋ ಸೇವೆಗಳು ಆರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು: ನಾಳೆ ಯುಪಿಎಸ್ಸಿ (UPSC) ಪ್ರಿಲಿಮಿನರಿ ಪರೀಕ್ಷೆ (Preliminary Examination) ನಡೆಯುವ ಹಿನ್ನೆಲೆ ಒಂದು ಗಂಟೆ ಮುಂಚಿತವಾಗಿ ಮೆಟ್ರೋ ಸೇವೆಗಳು ಆರಂಭಗೊಳ್ಳಲಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎಂದಿನಂತೆ ಭಾನುವಾರ 7 ಗಂಟೆಗೆ ಆರಂಭವಾಗುತ್ತಿದ್ದ ಮೆಟ್ರೊ ಸಂಚಾರಗಳು ಬೆಳಗ್ಗೆ 6 ಗಂಟೆಗೆ ಆರಂಭಗೊಳ್ಳಲಿದೆ. ಈ ಬಗ್ಗೆ ಬಿಎಂಆರ್ಸಿಎಲ್ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ಭಾನುವಾರ (ಜೂ.5)ರಂದು ನೇರಳೆ ಮತ್ತು ಹಸಿರು ಮೆಟ್ರೋ ಮಾರ್ಗದಲ್ಲಿ ಬೆಳಗ್ಗೆ 6 ಗಂಟೆಗೆ ಮೆಟ್ರೋ ರೈಲುಗಳ ಸಂಚಾರ ಆರಂಭಗೊಳ್ಳಲಿದೆ. ಯುಪಿಎಸ್ಸಿ ಅಭ್ಯರ್ಥಿಗಳಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: UPSC Results 2021 Topper : ದೇಶಕ್ಕೆ ಪ್ರಥಮ ಸ್ಥಾನ ಪಡೆದ ಶ್ರುತಿ ಶರ್ಮಾ ಕುರಿತು ಇಲ್ಲಿದೆ ಮಾಹಿತಿ
2022ನೇ ಸಾಲಿನ ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು ಮತ್ತು ಫೆ.22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೀಗ ಪೂರ್ವಭಾವಿ ಪರೀಕ್ಷೆ ಜೂ.5ರಂದು ನಡೆಯಲಿದ್ದು, ಮುಖ್ಯ ಪರೀಕ್ಷೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ನೇಮಕಾತಿಯು ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆದು ನಂತರ ಮುಖ್ಯ ಪರೀಕ್ಷೆ ನಡೆಯಲಿದೆ. ಬಳಿಕ ಸಂದರ್ಶನ ನಡೆಯಲಿದೆ.
ಇದನ್ನೂ ಓದಿ: UPSC Exam: ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡಲು ಇಲ್ಲಿವೆ ಟಿಪ್ಸ್..
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Sat, 4 June 22