UPSC Exam: ಯುಪಿಎಸ್​ಸಿ ಪರೀಕ್ಷೆ ಕ್ಲಿಯರ್ ಮಾಡಲು ಇಲ್ಲಿವೆ ಟಿಪ್ಸ್..

UPSC Exam: ಯುಪಿಎಸ್​ಸಿ ಪರೀಕ್ಷೆ ಕ್ಲಿಯರ್ ಮಾಡಲು ಇಲ್ಲಿವೆ ಟಿಪ್ಸ್..
ಸಾಂದರ್ಭಿಕ ಚಿತ್ರ

ಕಷ್ಟಗಳನ್ನು ಎದುರಿಸದೆ ಯಾರೂ ಕೂಡ ಇತಿಹಾಸದ ಪುಟ ಸೇರೋಕೆ ಆಗಲ್ಲ. ಕಷ್ಟ, ನೋವು ಎಲ್ಲವನ್ನೂ ಮೀರಿ ನಿಂತಾಗ ಮಾತ್ರವೇ ಸುಖ, ಸಂತೋಷವನ್ನು ನಮ್ಮದಾಗಿಸಿಕೊಳ್ಳಲು ಆಗೋದು. ನೀವೂ ಕೂಡ ಐಎಎಸ್ನಲ್ಲಿ ಸಫಲರಾಗಬೇಕಾದ್ರೆ ನೀವು ಈ 3 ಸೂತ್ರಗಳನ್ನು ನೆನಪಿನಲ್ಲಿಡಬೇಕು.

Ayesha Banu

|

Jun 15, 2021 | 7:46 AM

ನಮ್ಮ ಸುತ್ತಮುತ್ತ ಇರುವ ಕೆಲ ಜಿಲ್ಲಾಧಿಕಾರಿಗಳು ಅಥವಾ ಐಎಎಸ್ ಅಧಿಕಾರಿಗಳನ್ನು ನೋಡಿದ್ರೆ ನಮಗೂ ಅವರಂತೆ ಆಗಬೇಕು ಎಂಬ ಆಸೆ ಹುಟ್ಟೋದು ಸಹಜ. ಅದಕ್ಕಾಗಿ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂದು ಅನೇಕರು ಯೋಚಿಸ್ತಾರೆ. ಇನ್ನು ಕೆಲವರು ಇದಕ್ಕಾಗಿಯೇ ಮೊದಲಿನಿಂದಲೂ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿರುತ್ತಾರೆ. ಇನ್ನೂ ಕೆಲವರು ಆಸೆಯಿದ್ದರೂ ಈ ಪರೀಕ್ಷೆ ಪಾಸ್ ಮಾಡುವುದು ನಮ್ಮ ಹಣೆಯಲ್ಲಿಲ್ಲ ಎಂಬ ಕೀಳರಿಮೆ ಹೊಂದಿರುತ್ತಾರೆ. ಆದರೆ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಯಾವುದೇ ವಿದ್ಯಾರ್ಥಿ ಈ ಪರೀಕ್ಷೆಯನ್ನು ಕ್ಲಿಯರ್ ಮಾಡಬಹುದು.

ಯುಪಿಎಸ್ಸಿ ಎಕ್ಸಾಂಗೆ ಪ್ರಿಪೇರ್ ಆಗೋದು ಅಂದ್ರೆ ದಿನಕ್ಕೆ 18 ಗಂಟೆಗಳ ಕಾಲ ಓದಬೇಕು ಎನ್ನುವ ಮಾತಿದೆ. ಆದರೆ ಐಎಎಸ್ ಆಗಿರುವ ಕೆಲ ಅಧಿಕಾರಿಗಳು ಹೇಳ್ತಾರೆ. ದಿನಕ್ಕೆ 10 ಗಂಟೆ ಶ್ರದ್ಧೆಯಿಂದ ಓದಿದರೂ ಸಾಕು. ಯಾವುದು ಮುಖ್ಯವೋ ಅದನ್ನು ತಿಳಿದುಕೊಳ್ಳಬೇಕು. ಹಾಗಂತ ಹೇಳಿ ಐಎಎಸ್ ಆಗುವುದು ಸುಲಭದ ಮಾತೂ ಸಹ ಅಲ್ಲ. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು. ಆದ್ರೆ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಛಲ ನಮಗೆ ಇರಬೇಕು ಅಷ್ಟೇ. ಹಾಗಾದ್ರೆ ಬನ್ನಿ ನಾವು ನಿಮಗೆ ಐಪಿಎಸ್ ಆಗುವ ತಯಾರಿ ಬಗ್ಗೆ ಮಾಹಿತಿ ನೀಡ್ತೇವೆ.

ಪ್ರತಿವರ್ಷ ಐಎಎಸ್ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ ನಡೆಸುತ್ತದೆ. ಇದು ಭಾರತದ ಕಷ್ಟಕರ ಪರೀಕ್ಷೆಗಳಲ್ಲಿ ಒಂದು. ಇದಕ್ಕೆ ಸರಿಯಾದ ತಯಾರಿ ಮಾಡಿಕೊಂಡರೆ ಇದನ್ನು ಪಾಸ್ ಮಾಡುವುದು ಸುಲಭ. ಐಎಎಸ್​ಗೆ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಾರೆ. ಆದ್ರೆ ಅದರಲ್ಲಿ ತೇರ್ಗಡೆಯಾಗುವುದು ಕೆಲವೇ ಸಾವಿರ ಜನ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಕೋಚಿಂಗ್​ಗಳಿಗೂ ಹೋಗುತ್ತಾರೆ.

ಸಾಧಿಸುವ ಮನಸಿದ್ದರೆ ಕಲ್ಲು ಸಹ ಶಿಲೆಯಾಗುತ್ತದೆ. ಡಿಗ್ರಿಯಲ್ಲಿ ಕಡಿಮೆ ಅಂಕಗಳಿಸಿದ್ದವರು ಐಎಎಸ್​ ತೇರ್ಗಡೆಯಾದ ಹಲವು ಉದಾಹರಣೆಗಳಿವೆ. ಇದು ಕೇವಲ ಪರಿಶ್ರಮಕ್ಕೆ ಸಿಗುವ ಫಲ. ಹಾಗಾಗಿ ಐಎಎಸ್ ಆಗಲು ಬಯಸುವವರು ಯಾವುದೇ ಕಾರಣಕ್ಕೂ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬಾರದು. ಸತತ ಪ್ರಯತ್ನ ಏನನ್ನು ಬೇಕಾದರೂ ಗೆಲ್ಲುವ ಶಕ್ತಿ ನೀಡುತ್ತೆ. ಮೊದಲ ಪ್ರಯತ್ನದಲ್ಲಿ ಪಾಸಾಗದಿದ್ದರೆ ಇರುವ ಇನ್ನಷ್ಟು ಅವಕಾಸಗಳನ್ನು ಬಳಸಿಕೊಳ್ಳಬೇಕು. 2018ರಲ್ಲಿ 3ನೇ ರ್ಯಾಂಕ್ ಪಡೆದು ಕೀರ್ತಿ ಪತಾಕೆ ಹಾರಿಸಿದ್ದ ಜುನೈದ್ ಅಹಮ್ಮದ್ ಕೂಡ ಸತತ 5 ಬಾರಿ ಈ ಪರೀಕ್ಷೆಯನ್ನು ಬರೆದಿದ್ದಾರೆ. 5ನೇ ಅಟೆಮ್ಟ್​ನಲ್ಲಿ ಅವರ ಕನಸು ನನಸಾಯ್ತು. ಈಗ ಐಎಎಸ್ ಕನಸು ಕಾಣುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಸದ್ಯ ದೇಶ ಕೊರೊನಾ ಸಂಕಷ್ಟದಲ್ಲಿ ಸಿಲುಕಿದೆ ಲಾಕ್​ಡೌನ್ನಿಂದಾಗಿ ಕೋಚಿಂಗ್ ಸೆಂಟರ್​ಗಳಿಗೆ ಹೋಗಿ ಕೋಚಿಂಗ್ ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಸಮಸ್ಯೆಗಳು ಎದುರಾಗಿದೆ. ಇದರ ಜೊತೆಗೆ ಮನೆಯಲ್ಲೇ ಓದಲು, ಯುಪಿಎಸ್ಸಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಕೂಡ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಂಡು ಈಗಾಗಲೇ ಅನೇಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಅಕ್ಟೋಬರ್ 10ರಿಂದ ಪ್ರಿಲಿಮಿನರಿ ಪರೀಕ್ಷೆ ನಡೆಯಲಿದೆ.

ಕಷ್ಟಗಳನ್ನು ಎದುರಿಸದೆ ಯಾರೂ ಸಾಧನೆ ಮಾಡಲು ಆಗುವುದಿಲ್ಲ. ಕಷ್ಟ, ನೋವು ಎಲ್ಲವನ್ನೂ ಮೀರಿ ನಿಂತಾಗ ಮಾತ್ರವೇ ಸುಖ, ಸಂತೋಷವನ್ನು ನಮ್ಮದಾಗಿಸಿಕೊಳ್ಳಲು ಆಗೋದು. ನೀವೂ ಕೂಡ ಐಎಎಸ್​ನಲ್ಲಿ ಸಫಲರಾಗಬೇಕಾದರೆ ಈ 3 ಸೂತ್ರಗಳನ್ನು ನೆನಪಿನಲ್ಲಿಡಬೇಕು. 1. ಕಠಿಣ ಪರಿಶ್ರಮ 2. ಧೈರ್ಯ 3. ಛಲ

ಪಾಲಿಸಬೇಕಾದ ಐದು ಅಂಶಗಳು 1.ಪರೀಕ್ಷೆಗೆ ಸಿದ್ಧರಾಗಲು ಬೇಕು ಬಲವಾದ ಕಾರಣ: ನೀವು ಯಾವುದಾದರೂ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನಿಮಗೆ ಬಲವಾದ ಕಾರಣ ಬೇಕು. ಆ ಕಾರಣವಿದ್ದಾಗಲೇ ಮನಸ್ಸು ಕುಗ್ಗಿದರೂ ಮತ್ತೆ ಎದುನಿಲ್ಲಲು ಉತ್ಪಾಹ ಮೂಡುತ್ತದೆ. ನಮಗೆ ಎಷ್ಟೇ ಬಾರಿ ಸೋಲು ಕಣ್ಣ ಮುಂದೆ ಬಂದರೂ ಆ ಒಂದು ಬಲವಾದ ಕಾರಣ ನಾವು ಮತ್ತೆಮತ್ತೆ ಗೆಲುವಿನತ್ತ ಓಡುವ ಅನಿವಾರ್ಯತೆಯನ್ನು ನಮ್ಮ ಮುಂದಿಡುತ್ತದೆ. ಯಾಕೆ ನಾವು ಈ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎಂಬುವುದನ್ನು ಮೊದಲು ಕಂಡುಕೊಳ್ಳಿ.

2. ಸೋಲೊಪ್ಪಿಕೊಳ್ಳಬೇಡಿ ಮೊದಲ ಬಾರಿಯ ಪ್ರಯತ್ನದಲ್ಲೇ ಗೆಲುವು ಸಿಗುವುದಿಲ್ಲ. ಹೀಗಾಗಿ ಆತ್ಮಸೈರ್ಯ ಕಳೆದುಕೊಳ್ಳಬಾರದು. ಸೋಲು ಒಪ್ಪಿಕೊಳ್ಳಬಾರದು. ಸತತ ಪ್ರಯತ್ನ ಮಾಡುತ್ತಲೇ ಇರಬೇಕು. ಗೆಲುವು ತಮ್ಮದಾಗುವವರೆಗೂ ಎಲ್ಲಾ ಸೋಲುಗಳನ್ನು ಅದರ ಅನುಭವವನ್ನು ಅರ್ಥೈಸಿಕೊಂಡು ಮುಂದೆ ನುಗ್ಗ ಬೇಕು.

3. ಓವರ್ ಕಾನ್ಫಿಡೆನ್ಸ್​ ಬೇಡ ಕೆಲವೊಮ್ಮೆ ನಾವು ಓವರ್ ಕಾನ್ಫಿಡೆನ್ಸ್​ ಆಗಿರುತ್ತೇ. ನಮ್ಮ ಕೈಲಿ ಎಲ್ಲವೂ ಆಗುತ್ತೆ. ನಾನು ಅತಿ ಬುದ್ದಿವಂತ ಎಂಬ ಮನೋಭಾವವನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ಸಿಂಪಲ್ ಮಾಡಿಕೊಳ್ಳಬೇಕು.

4. ಅನಾವಶ್ಯಕವಾದ ಒತ್ತಡ ಬೇಡ ಐಎಎಸ್ ಅಭ್ಯರ್ಥಿಗೆ ಹೆಚ್ಚು ಓದುವ ಅವಶ್ಯಕತೆ ಇದೆ. ಹಾಗಾಗಿ ಅವರು ತಮ್ಮದೇ ಆದ ಕಾರ್ಯತಂತ್ರ ರೂಪಿಸಿಕೊಂಡಿರುತ್ತಾರೆ. ಅದರಂತೆ ಮೊದಲು ಸಿಲಬಸ್ ಓದಿ ಮುಗಿಸಬೇಕು. ನಂತರ ಅದರ ರಿವಿಷನ್ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಅದುಬಿಟ್ಟು ತನ್ನ ಸ್ನೇಹಿತ ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಬೇರೆಯವರು ಯಾವ ರೀತಿ ಓದುತ್ತಿದ್ದಾರೆ ಎಂಬ ಬಗ್ಗೆ ಒತ್ತಡ ಹಾಕಿಕೊಳ್ಳಬಾರದು.

5. ಧೈರ್ಯ ಕಳೆದುಕೊಳ್ಳಬೇಡಿ ಪರೀಕ್ಷೆ ತಯಾರಿ ವೇಳೆ ಕೆಲವೊಮ್ಮೆ ಮನೆಯ ಸಮಸ್ಯೆ, ಹಣ, ಸಮಯ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗೆಂದು ಎಂದೂ ಧೈರ್ಯ ಕಳೆದುಕೊಳ್ಳುಬೇಡಿ. ನೀವು ಈಗ ಅನುಭವಿಸುತ್ತಿರುವ ಕಷ್ಟಗಳಿಂದ ನಾಳೆ ಒಳ್ಳೆಯದಾಗುತ್ತದೆ ಎಂದು ಧೈರ್ಯ ಕಾಪಾಡಿಕೊಳ್ಳಿ.

ಯುಪಿಎಸ್ಸಿ ಕ್ಲಿಯರ್ ಮಾಡಲು ಕೆಲವು ಸಲಹೆಗಳು 1.ವಿಷಯ ಆಯ್ಕೆಯಲ್ಲಿ ಎಚ್ಚರ ಪದವಿ ಹಾಗೂ ಸ್ನಾತಕೋತ್ತರ ಪದವಿ ನಂತರ ಐಎಎಸ್ ಪರೀಕ್ಷೆ ಬರೆಯುವವರಿಗೆ ಸಮಾಜಶಾಸ್ತ್ರ, ಇತಿಹಾಸ ಸೇರಿದಂತೆ ಕೆಲವು ಆಯ್ಕೆಗಳಿರುತ್ತವೆ. ನೀವು ಅದರ ಬಗ್ಗೆ ಗಮನ ಹರಿಸಬೇಕು. ನಿಮಗೆ ಸುಲಭ ಹಾಗೂ ನೀವು ಈ ಹಿಂದೆ ಓದಿದ, ನಿಮಗೆ ಇಷ್ಟವಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು.

2.ಸಮಯ ಹೊಂದಾಣಿಕೆ ದಿನ ಪೂರ್ತಿ ಓದುತ್ತಾ ಕೂತರೆ ಓದು ತಲೆಗೆ ಹತ್ತುವುದು ಕಷ್ಟ. ಸಾಮಾನ್ಯ ವಿಷಯಕ್ಕೆ ಹೆಚ್ಚು ಸಮಯ ಕೊಡುವ ಬದಲು ಮೊದಲು ಯಾವ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡಬೇಕು ಎಂದು ಒಂದು ಟೈಮ್ ಟೇಬಲ್ ಸಿದ್ಧ ಮಾಡಿಕೊಂಡು ನಿಮಗೆ ಸುಲಭವಾದ ವಿಷಯಕ್ಕೆ ಕಡಿಮೆ ಸಮಯ ನೀಡಿ ಕಷ್ಟ ಎನಿಸುವ ವಿಷಯಕ್ಕೆ ಹೆಚ್ಚಿನ ಸಮಯ ನೀಡಿ ಎಲ್ಲವನ್ನೂ ಸಮವಾಗಿ ನಿಭಾಯಿಸಿ.

3.ಪುನರಾವರ್ತನೆ ಇದು ಪ್ರತಿಯೊಬ್ಬರೂ ಮಾಡಬೇಕಾದ ಅತಿ ಮುಖ್ಯವಾದ ಅಂಶ. ಮೊದಲು ಪ್ರಿಲಿಮಿನರಿ ಪರೀಕ್ಷೆ ಬರುತ್ತೆ. ಬಳಿಕ ಮೇನ್ಸ್ ಎಕ್ಸಾಂ ಬರುತ್ತದೆ. ನಾವು ಒಂದು ಗಂಟೆ ಓದಿದರೂ ಅದನ್ನು ಪುನರಾವರ್ತಿಸಬೇಕು. ಇಂದು ಓದಿದನ್ನೋ ನಾಳೆಯೂ ಪುನರಾವರ್ತನೆ ಮಾಡುವುದರಿಂದ ಆ ವಿಷಯಗಳು ಬೇಗ ಮರೆಯುವುದಿಲ್ಲ. ನೆನಪಿನಲ್ಲಿರುತ್ತದೆ. ಓದಿದ್ದನ್ನು ಬರೆಯುವ ಅಭ್ಯಾಸ ಉತ್ತಮ. ಇದರಿಂದ ನಿಮ್ಮ ಬರವಣಿಗೆ ಸ್ಕಿಲ್ ಕೂಡ ಉತ್ತಮವಾಗುತ್ತದೆ. ಇದು ಪರೀಕ್ಷೆಯ ದೃಷ್ಟಿಯಲ್ಲೂ ಸಹ ಉತ್ತಮ ಅಭ್ಯಾಸ.

4. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿರಲಿ ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆಗಳು ಪರೀಕ್ಷೆಗೆ ಬರಲಿದ್ದು ದಿನನಿತ್ಯದ ಘಟನೆಗಳ ಬಗ್ಗೆ ಅರಿವಿರಲಿ. ದಿನನಿತ್ಯ ಪತ್ರಿಕೆಗಳನ್ನು ತಪ್ಪದೆ ಓದಬೇಕು. ಸರ್ಕಾರದ ನೀತಿ, ಕಾನೂನು, ಯೋಜನೆಗಳು, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ, ಪ್ರಪಂಚದ ರಾಜಕೀಯ ಆಗುಹೋಗುಗಳು ತಿಳಿದಿರಬೇಕು.

5.ಹಿಂದಿನ ವರ್ಷಗಳ ಯುಪಿಎಸ್ಸಿ ಪ್ರಶ್ನೆ ಪತ್ರಿಕೆಗಳನ್ನು ಸಾಲ್ವ್ ಮಾಡಿ ಯುಪಿಎಸ್ಸಿಯ ಪ್ರಾಥಮಿಕ ಪರೀಕ್ಷೆಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಗೆಹರಿಸುವ ಮೂಲಕ ನಿಮ್ಮ ಪರೀಕ್ಷೆ ತಯಾರಿ ಹೇಗಿದೆ ಎಂಬ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ. ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಮಗೆ ನಾವೇ ಟೆಸ್ಟ್ ಮಾಡಿಕೊಂಡಂತೆ ಆಗುತ್ತದೆ. ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ನಮ್ಮ ಸಿದ್ಧತೆ ಹೇಗಿರಬೇಕು ಎಂಬ ಉಪಾಯ ತಿಳಿಯುತ್ತದೆ.

ಇದನ್ನೂ ಓದಿ: UPSC Prelims Exam 2021 Postponed: ಜೂನ್ 27ರ ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ

ಇದನ್ನೂ ಓದಿ: ಕೊರೊನಾದಿಂದ ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ನಮ್ಮದು: ಆದಿಚುಂಚನಗಿರಿ ಮಠ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada