AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCET Hall Ticket 2022: ವಿದ್ಯಾರ್ಥಿಗಳೇ ಗಮನಿಸಿ; ಸಿಇಟಿ ಪರೀಕ್ಷೆಯ ಹಾಲ್ ​ಟಿಕೆಟ್ ಬಿಡುಗಡೆ; ಡೌನ್​ಲೋಡ್​ ಮಾಡುವ ವಿಧಾನ ಇಲ್ಲಿದೆ

KCET 2022 Admit Cards: ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲು ನಡೆಸಲ್ಪಡುವ ಸಿಇಟಿ ಪರೀಕ್ಷೆಯು ಈ ಬಾರಿ ಜೂನ್​ 16,17 ಹಾಗೂ 18ರಂದು ನಡೆಯಲಿದೆ. ಇದೀಗ ಹಾಲ್​ ಟಿಕೆಟ್ ಬಿಡುಗಡೆ ಮಾಡಲಾಗಿದ್ದು, ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ.

KCET Hall Ticket 2022: ವಿದ್ಯಾರ್ಥಿಗಳೇ ಗಮನಿಸಿ; ಸಿಇಟಿ ಪರೀಕ್ಷೆಯ ಹಾಲ್ ​ಟಿಕೆಟ್ ಬಿಡುಗಡೆ; ಡೌನ್​ಲೋಡ್​ ಮಾಡುವ ವಿಧಾನ ಇಲ್ಲಿದೆ
(ಪ್ರಾತಿನಿಧಿಕ ಚಿತ್ರ)
TV9 Web
| Updated By: shivaprasad.hs|

Updated on: Jun 03, 2022 | 9:40 AM

Share

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿಯ (Karnataka Common Entrance Test – CET) ಹಾಲ್​ ಟಿಕೆಟ್​​ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್​ 2ರ ಗುರುವಾರದಂದು ಆನ್​ಲೈನ್​ನಲ್ಲಿ ಹಾಲ್​ ಟಿಕೇಟ್​​ಗಳನ್ನು ಬಿಡುಗಡೆ ಮಾಡಿದೆ. ಅದನ್ನು ಡೌನ್​ಲೋಡ್​ ಮಾಡಿಕೊಳ್ಳಲು ನೀವು kea.kar.nic.in ವೆಬ್​ಸೈಟ್​ಗೆ ಭೆಟಿ ನೀಡಬಹುದು. ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲು ನಡೆಸಲ್ಪಡುವ ಸಿಇಟಿ ಪರೀಕ್ಷೆಯು ಈ ಬಾರಿ ಜೂನ್​ 16,17 ಹಾಗೂ 18ರಂದು ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಹಾಲ್​ ಟಿಕೇಟನ್ನು ಆನ್​ಲೈನ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಪೋಸ್ಟ್​ ಅಥವಾ ಬೇರೆ ವಿಧಾನದ ಮೂಲಕ ಹಾಲ್​ ಟಿಕೇಟ್ ತಲುಪಿಸಲಾಗುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಸಿಇಟಿ ಪರೀಕ್ಷೆಯ ಹಾಲ್​ಟಿಕೆಟ್ ಡೌನ್​ಲೋಡ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಸಿಇಟಿ ಹಾಲ್​ ಟಿಕೆಟ್ ಡೌನ್​ಲೋಡ್​ ಮಾಡುವುದು ಹೇಗೆ?

1. ಅಭ್ಯರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡಿ.

ಇದನ್ನೂ ಓದಿ
Image
BTech in IISc: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಸೈನ್ಸ್​​ನಿಂದ ಹೊಸ ಕೋರ್ಸ್; ಜೂನ್ 1ರಿಂದ ಅರ್ಜಿ ಆಹ್ವಾನ
Image
ಪಠ್ಯ ಪರಿಷ್ಕರಣೆ ಮುಂದೇನಾಗುವುದು? ಯಾವ ಪಠ್ಯ ಬೋಧಿಸಬೇಕು ಎಂಬ ಧರ್ಮ ಸಂಕಟದಲ್ಲಿ ಶಾಲೆಗಳು! -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ
Image
ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ಆರಂಭ, ವಿದ್ಯಾರ್ಥಿಗಳ ಮೇಲಿನ FIR ಹಿಂಪಡೆಯುವಂತೆ ಆಗ್ರಹ
Image
ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು

2. ಹೋಮ್​ ಪೇಜ್​ನಲ್ಲಿರುವ ‘UGCET 2022 – Admission Ticket Download link’ ಮೇಲೆ ಕ್ಲಿಕ್ ಮಾಡಿ.

3. ಅಪ್ಲಿಕೇಶನ್ ಸಂಖ್ಯೆ ಅಥವಾ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ.

4. ನಿಮ್ಮ KCET ಹಾಲ್ ಟಿಕೆಟ್ 2022 ಲಭ್ಯವಾಗುತ್ತದೆ.

5. ಅದನ್ನು ಡೌನ್​ಲೋಡ್​ ಮಾಡಿ ಮತ್ತು ಮುದ್ರಿಸಿ.

ಸಿಇಟಿ ಹಾಲ್​ಟಿಕೆಟ್​ ಪಡೆಯಲು ನೇರವಾಗಿ ಈ ತಾಣಕ್ಕೆ ಭೇಟಿ ನೀಡಬಹುದು.

ಹಾಲ್​ ಟಿಕೆಟ್ ಪಡೆಯುವ ಲಿಂಕ್: https://cetonline.karnataka.gov.in/onlineappugcethallticket2022/forms/hallticket.aspx

ಪರೀಕ್ಷೆ ಎದುರಿಸಲಿರುವ 2.11 ಲಕ್ಷ ವಿದ್ಯಾರ್ಥಿಗಳು:

ಈ ಬಾರಿ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳಿದ್ದರೆ 1.7 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣು ಇರಿಸಲು ಅಧಿಕಾರಿಗಳು ಮುಂದಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗುವುದು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ ಎಂದು ಹೇಳಲಾಗಿದೆ.

ಪ್ರವೇಶ ಪರೀಕ್ಷೆಯನ್ನು ನೀಟ್ ಮಾದರಿಯಲ್ಲಿಯೇ ಕಟ್ಟು ನಿಟ್ಟಾಗಿ ನಡೆಸಲಾಗುತ್ತಿದ್ದು, ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತಿ, ಕಿವಿಯೋಲೆ, ಸರ, ಬಳೆ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣಗಳನ್ನೂ ಪರೀಕ್ಷೆ ಬರೆಯುವಾಗ ಧರಿಸುವಂತಿಲ್ಲ. ಕೈಗಡಿಯಾರ ಮತ್ತು ಕ್ಯಾಲ್ಕುಲೇಟರ್​ಗಳಿಗೂ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲು ನಿರ್ಧರಿಸಲಾಗಿದೆ.

ಮತ್ತಷ್ಟು ಶಿಕ್ಷಣ ಕುರಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ