AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು

Students Walk To School: ಮೊನ್ನೆ ಬಾಲಕಿಯೊಬ್ಬಳು ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದಾರುಣ ದೃಶ್ಯವನ್ನು ಇಡೀ ದೇಶ ಕಂಡಿದೆ. ಈಗಿನ ಇಂಟರ್ನೆಟ್​ ಯುಗದಲ್ಲಿ ಅದನ್ನು ಇಡೀ ಜಗತ್ತೂ ನೋಡಿತು. ಬಹುಶಃ​ ಜಗತ್ತಿನಲ್ಲಿ ಇಂತಹ ದಾರುಣ ಸ್ಥಿತಿ ಯಾವುದೇ ವಿದ್ಯಾರ್ಥಿಗೆ ಬಂದಿಲ್ಲ ಅನ್ನಿಸುತ್ತದೆ. ಹಾಗಾದರೆ ನಮ್ಮ ದೇಶದಲ್ಲಷ್ಟೇ ಈ ಕರುಣಾಜನಕ ಪ್ರಸಂಗ ‘ನಡೆದಿದೆಯಾ?’ ಎಂಬ ಆತಂಕ ಮನೆ ಮಾಡುತ್ತದೆ. ಆದರೆ ಇನ್ನೂ ಆಘಾತವಾದ ಸುದ್ದಿ ಇಲ್ಲಿದೆ.

ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
ದೇಶದಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
TV9 Web
| Edited By: ಸಾಧು ಶ್ರೀನಾಥ್​|

Updated on:May 28, 2022 | 3:25 PM

Share

ಮೊನ್ನೆ ಬಾಲಕಿಯೊಬ್ಬಳು ಒಂಟಿಕಾಲಲ್ಲಿ ನಡೆದುಕೊಂಡೇ (ಜಿಗಿದುಕೊಂಡು) ಶಾಲೆಗೆ ಹೋಗುವ ದಾರುಣ ದೃಶ್ಯವನ್ನು ಇಡೀ ದೇಶ ಕಣ್ಣಾರೆ ಕಂಡಿದೆ. ಈಗಿನ ಇಂಟರ್ನೆಟ್​ ಯುಗದಲ್ಲಿ ಅದನ್ನು ಇಡೀ ಜಗತ್ತೂ ನೋಡಿತು. ಬಹುಶಃ​ ಜಗತ್ತಿನಲ್ಲಿ ಇಂತಹ ದಾರುಣ ಸ್ಥಿತಿ ಯಾವುದೇ ವಿದ್ಯಾರ್ಥಿಗೆ ಬಂದಿಲ್ಲ ಅನ್ನಿಸುತ್ತದೆ. ಹಾಗಾದರೆ ನಮ್ಮ ದೇಶದಲ್ಲಷ್ಟೇ ಈ ಕರುಣಾಜನಕ ಪ್ರಸಂಗ ‘ನಡೆದಿದೆಯಾ?’ ಎಂಬ ಆತಂಕ ಮನೆ ಮಾಡುತ್ತದೆ. ಒಂದು ನಿಮಿಷವಿರಿ. ಇನ್ನೂ ಆಘಾತವಾದ ಸುದ್ದಿಯೊಂದು ಇಲ್ಲಿದೆ. ನಮ್ಮ ದೇಶದಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳ ಪ್ರಮಾಣ ಶೇ. 48ರಷ್ಟಿದೆಯಂತೆ! ಏನು ನಮ್ಮ ಕಾಲದಲ್ಲಿ ಕಾಲಿನಲ್ಲಿ, ಅದೂ ಬರಿಗಾಲಿನಲ್ಲಿ ನಡೆದೇ ಹೋಗುತ್ತಿದ್ದೆವಲ್ಲಾ? ಆಗ ನಮ್ಮನ್ನು ಯಾರು ವಿಚಾರಿಸಿಕೊಂಡರು? ಎಂದು ಸಿಟ್ಟಾಗಬೇಡಿ. ಅಂದಿನ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ. ಈಗಲೂ ಮಕ್ಕಳು ಶಾಲೆಗೆ ನಡೆದೇ ಹೋಗುತ್ತಾರೆ ಎಂಬುದು (Students Walk To School) ನಾಚಿಕೆಯಿಂದ ತಲೆತಗ್ಗಿಸುವ ಪ್ರಸಂಗವಾಗಿದೆ. ಆದರೆ ಅಂದು ಶಾಲೆಗೆ ನಡೆದುಹೋದ ಮಕ್ಕಳು ಕಾಲಾಂತರದಲ್ಲಿ ತಮ್ಮ ಕಾಲಿನ ಮೇಲೆ ತಾವು ನಿಲ್ಲುವಷ್ಟು ಬಾಲಢ್ಯರಾದ ಮೇಲೆ ಇತರೆ ಮಕ್ಕಳ ಕಡೆಗೆ ಗಮನ ಹರಿಸಿದ್ದರೆ ಬಹುಶಃ ಈ ದಾರುಣ ಪರಿಸ್ಥಿತಿ ಬರುತ್ತಿರಲಿಲ್ಲವೇನೋ… ಇರಲಿ, ತುಸು ವಾಸ್ತವಕ್ಕೆ ಬರೋಣಾ.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಅಧೀನದಲ್ಲಿ ನ್ಯಾಷನಲ್ ಅಛೀವ್ಮೆಂಟ್ ಸರ್ವೆ ​​(National Achievement Survey -NAS) ಪ್ರಕಾರ ದೇಶದಾದ್ಯಂತ ಅರ್ಧಕ್ಕರ್ಧ ಶಾಲಾ ಮಕ್ಕಳು (ಶೇ. 48) ಇಂದಿಗೂ ನಡೆದುಕೊಂಡೇ ವಿದ್ಯಾರ್ಜನೆಗೆ ಹೋಗುತ್ತಿದ್ದಾರೆ. ಮಕ್ಕಳು ಶಾಲೆಗೆ ಕುಣಿದುಕುಪ್ಪಳಿಸುತ್ತಾ ಜಿಗಿದುಕೊಂಡು ಹೋಗಬೇಕು, ಅದುಬಿಟ್ಟು ಹೀಗೆಲ್ಲಾ ಜಿಗುದುಕೊಂಡು ಹೋಗುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತರಹುದಲ್ಲ. ಇನ್ನು ಶಾಲಾ ಮಕ್ಕಳು ಶಾಲೆವರೆಗೂ ಸಾಗುವ ವಿಧಾನದ ಬಗ್ಗೆ NAS ನಡೆಸಿರುವ ಅಧ್ಯಯನದ ಪ್ರಕಾರ ಶೇ. 9 ರಷ್ಟು ವಿದ್ಯಾರ್ಥಿ ಗಳು ಶಾಲೆಗಳ ವಾಹನಗಳಲ್ಲಿ, ಶೇ. 9ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ, ಶೇ. 8 ರಷ್ಟು ವಿದ್ಯಾರ್ಥಿ ಗಳು ಸ್ವಂತ ವಾಹನಗಳಲ್ಲಿ ಶಾಲೆಗಳಿಗೆ ತಲುಪುತ್ತಾರೆ.

ಇನ್ನು ಈ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರು ಅನುಭವಿಸುತ್ತಿರುವ ಪಡಿಪಾಟಿಲಿನ ಬಗ್ಗೆ ಈ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಅಂಶವೆನೆಂದರೆ ಶೇ. 65 ಮಂದಿ ಶಿಕ್ಷಕರು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಕಾರಾತ್ಮಕ ಸನ್ನಿವೇಶದ ಹೊರತಾಗಿಯೂ ಶೇ. 97 ಮಂದಿ ಶಿಕ್ಷಕರು ತಮ್ಮ ಸೇವೆಯ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ! ಇನ್ನು ವಿದ್ಯಾರ್ಥಿಗಳ ಹೋಮ್ ವರ್ಕ್ ಮುಂತಾದ ಶೈಕ್ಷಣಿಕ ವಿಚಾರಗಳಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಸರಿಯಾದ ಸಹಕಾರ ದೊತೆಯುತ್ತಿಲ್ಲವೆಂದು ಶೇ. 25 ರಷ್ಟು ಶಾಲಾ ಆಡಳಿತ ಮಂಡಳಿಗಳು ಅಲವತ್ತುಕೊಂಡಿವೆ.

ಇದೆಲ್ಲ ಅಪವ್ಯತಸನಗಳ ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿ (National Education Policy 2020- NEP) ಜಾರಿಗೆ ತರುತ್ತಿರುವುದರಿಂದ ಪಠ್ಯದ ಜೊತೆಗೆ ಶಿಕ್ಷಣ ಪರಿಸ್ಥಿತಿಯೂ ಸುಧಾರಿಸುತ್ತಾದಾ ಕಾದುನೋಡಬೇಕಿದೆ.

To Read in Telugu Click Here

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 28 May 22

Follow Us
Web contact
Web contact

TV9 Kannada

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ