UPSC Results 2021 Topper : ದೇಶಕ್ಕೆ ಪ್ರಥಮ ಸ್ಥಾನ ಪಡೆದ ಶ್ರುತಿ ಶರ್ಮಾ ಕುರಿತು ಇಲ್ಲಿದೆ ಮಾಹಿತಿ
ಸೋಮವಾರ (ಮೇ 30) ಯುಪಿಎಸ್ಸಿ ಫಲಿತಾಶ ಪ್ರಕಟಗೊಂಡಿದ್ದು, ದೆಹಲಿಯ ಶ್ರುತಿ ಶರ್ಮಾ ಅವರು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನವದೆಹಲಿ: ಸೋಮವಾರ (ಮೇ 30) ಯುಪಿಎಸ್ಸಿ (UPSC) ಫಲಿತಾಶ ಪ್ರಕಟಗೊಂಡಿದ್ದು, ದೆಹಲಿಯ ಶ್ರುತಿ ಶರ್ಮಾ (shruti sharma upsc) ಅವರು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು UPSC ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ವಿಶ್ವಾಸವಿದೆ ಆದರೆ ಮೆರಿಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ. ಶರ್ಮಾ ಅವರು ಭಾರತೀಯ ಆಡಳಿತ ಸೇವೆಗಳಿಗೆ (IAS) ಸೇರುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ.
ಇದನ್ನು ಓದಿ: ಯುಪಿಎಸ್ಸಿ ಫಲಿತಾಂಶ ಪ್ರಕಟ; ಕರ್ನಾಟಕದ 24 ಅಭ್ಯರ್ಥಿಗಳು ಉತ್ತೀರ್ಣ
ಶ್ರುತಿ ಶರ್ಮಾ(shruti sharma ias) ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದರು. ಸ್ನಾತಕೋತ್ತರ ಪದವಿಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಸೇರಿದರು. ಆದರೆ ಅಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ದಾಖಲಾತಿ ಪಡೆದರು ಅಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು. ಅಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ (ಆರ್‌ಸಿಎ) ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಮುಂದೆ UPSC ಪರೀಕ್ಷೆ ಬರೆದು ದೇಶಕ್ಕೆ ಪ್ರಥಮ ಬಮದರು. ಶೃತಿ ಶರ್ಮಾ ಸೇರಿದಂತೆ ಒಟ್ಟು 23 ಅಭ್ಯರ್ಥಿಗಳು ಜಾಮಿಯಾ ಆರ್‌ಸಿಎಯಿಂದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.
Rank-1- 2021 IAS Topper Shruti Sharma1st Reaction #UPSC #shrutisharma Congratulations???? pic.twitter.com/0jRdg3kVeG
— Bakchod Kutta (@kutta_bakchod) May 30, 2022
ಈ ಬಾರಿಯ ಯುಪಿಎಸ್ಸಿ ಫಲಿತಾಂಶದಲ್ಲಿ ಟಾಪ್ 4 ಹೆಣ್ಣುಮಕ್ಕಳ ಪಾಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
- ಶೃತಿ ಶರ್ಮಾ
- ಅಂಕಿತಾ ಅಗರ್ವಾಲ್
- ಗಮಿನಿ ಸಿಂಘಾಲ್
- ಐಶ್ವರ್ಯ ವೆರ್ಮಾ
Rank 1 – Shruti Sharma 2 – Ankita Agarwal 3 – Gamini Singla4 – Aishwarya Verma
Great to see that top 4 ranks are achieved by girls in UPSC #CivilServicesExam this year. Well done ? pic.twitter.com/1txRpT8IHk
— Pankaj Nain IPS (@ipspankajnain) May 30, 2022
ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ ನನಗೆ ನಂಬಲು ಅಸಾಧ್ಯವಾಗಿದೆ ನಾನು ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದು, ಸಂತೋಷ ತಂದಿದೆ. ಭವಿಷ್ಯದ ದಿನಗಳಲ್ಲಿ UPSC ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಳ್ಳಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಭ್ಯರ್ಥಿಗಳು ತಮ್ಮ ಸಂಬಂಧಿತ UPSC ನಾಗರಿಕ ಸೇವಾ ಅಂತಿಮ ಫಲಿತಾಂಶ 2021 ಅನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ನೇರ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.
UPSC CSE ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಯಿತು. ಸಂದರ್ಶನ ಪರೀಕ್ಷೆಯು ಏಪ್ರಿಲ್ 5 ರಿಂದ ಮೇ 26, 2022 ರವರೆಗೆ ನಡೆಸಲಾದ ಪರೀಕ್ಷೆಯ ಕೊನೆಯ ಸುತ್ತಾಗಿತ್ತು. ತಮ್ಮ ಪರೀಕ್ಷೆ/ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣದ ಸಂದರ್ಭದಲ್ಲಿ, ಅಭ್ಯರ್ಥಿಗಳು ಸಂಪರ್ಕಿಸಬಹುದು. 23385271 / 23381125 / 23098543 ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು ಮೇ 30 ರಂದು UPSC ನಾಗರಿಕ ಸೇವೆಗಳ ಅಂತಿಮ ಫಲಿತಾಂಶ 2021 ಅನ್ನು ಬಿಡುಗಡೆ ಮಾಡಿದೆ. ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಹಾಜರಾಗಿರುವ ಅಭ್ಯರ್ಥಿಗಳು, ಅಂದರೆ, ಸಂದರ್ಶನದಲ್ಲಿ ತಮ್ಮ UPSC IAS ಅಂತಿಮ ಫಲಿತಾಂಶ 2021 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. – upsc.gov.in ಆಕಾಂಕ್ಷಿಗಳು ತಮ್ಮ UPSC CSE ಅಂತಿಮ ಫಲಿತಾಂಶ 2021 ಅನ್ನು ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯೊಂದಿಗೆ ಪರಿಶೀಲಿಸಬಹುದು.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Mon, 30 May 22