ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ‌ ಕೆಲಸ ಮಾಡ್ತಿದ್ದಾರೆ, ಅವರನ್ನ ಬಿಜೆಪಿಯಿಂದ ಉಚ್ಚಾಟಿಸಬೇಕು -ರೇಣುಕಾಚಾರ್ಯ

|

Updated on: Mar 21, 2021 | 1:55 PM

ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ‌ ಕೆಲಸ ಮಾಡ್ತಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಯತ್ನಾಳ್ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಬಸನಗೌಡ ಪಾಟೀಲ್​ ಯತ್ನಾಳ್ ನೀನು ಕೂಡ ಭ್ರಷ್ಟ -ಶಾಸಕ ಎಂ.ಪಿ.ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ‌ ಕೆಲಸ ಮಾಡ್ತಿದ್ದಾರೆ, ಅವರನ್ನ ಬಿಜೆಪಿಯಿಂದ ಉಚ್ಚಾಟಿಸಬೇಕು -ರೇಣುಕಾಚಾರ್ಯ
ಶಾಸಕ ಎಂ.ಪಿ.ರೇಣುಕಾಚಾರ್ಯ
Follow us on

ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು. ಮೊನ್ನೆ ಈ ಬಗ್ಗೆ 25ಕ್ಕೂ ಹೆಚ್ಚು ಶಾಸಕರು ಚರ್ಚೆ ನಡೆಸಿದ್ದೇವೆ. ಸೋಮವಾರ ಶಾಸಕ ಯತ್ನಾಳ್​ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ‌ ಕೆಲಸ ಮಾಡ್ತಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಯತ್ನಾಳ್ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಬಸನಗೌಡ ಪಾಟೀಲ್​ ಯತ್ನಾಳ್ ನೀನು ಕೂಡ ಭ್ರಷ್ಟ. ವಿಜಯಪುರದಲ್ಲಿ ಮಗನ ಮೂಲಕ ಭ್ರಷ್ಟಾಚಾರ ಮಾಡ್ತಿರುವೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬಾ. ಆಗ ಸಿಎಂ ಆಗುವ ಬಗ್ಗೆ ಮಾತಾಡು ಎಂದು ಯತ್ನಾಳ್​ಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಸಿಎಂ BSY ವಿರುದ್ಧ ನೀಡುವ ಹೇಳಿಕೆಗಳನ್ನ ಸಹಿಸಲು ಆಗಲ್ಲ. ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಿ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ, ಯತ್ನಾಳ್​ಗೆ ಸವಾಲ್ ಎಸೆದಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿದ್ದೇನು
5 ರಾಜ್ಯಗಳ ಚುನಾವಣೆ ಬಳಿಕ ಯಾರ ಮಾತು ಮೇಲಾಗುತ್ತೆ ಅನ್ನೋದು ಗೊತ್ತಾಗುತ್ತೆ. ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ. ಈ ಸಿಎಂರನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೆ. ಈ ವಿಚಾರ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳಿಗೆ ಗೊತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲೇಬೇಕು. ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾವಣೆ ಅವಶ್ಯಕ ಎಂದು ವಿಜಯಪುರದಲ್ಲಿ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾಗಬೇಕು.. ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ -ಬಸನಗೌಡ ಪಾಟೀಲ್​ ಯತ್ನಾಳ್