ಮಸ್ಕಿ ಕ್ಷೇತ್ರದಲ್ಲಿ ಒಗ್ಗಟ್ಟಿನ ಹೋರಾಟದಿಂದ ಗೆದ್ದಿದ್ದೇವೆ; ಬಸನಗೌಡ ತುರವಿಹಾಳ್

ನಾನು ನೆಪ ಮಾತ್ರದ ಅಭ್ಯರ್ಥಿ. ಇಡೀ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಋಣಿ. ಎಷ್ಟು ದಿನವಾದರೂ ಅವರ ಋಣ ತೀರಿಸಲಾಗಲ್ಲ ಎಂದು ಮಾತನಾಡಿದ ಬಸನಗೌಡ ತುರವಿಹಾಳ್, ಇವತ್ತು ಮತದಾರ ಪ್ರಭುಗಳ ಪಾದಗಳಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮಸ್ಕಿ ಕ್ಷೇತ್ರದಲ್ಲಿ ಒಗ್ಗಟ್ಟಿನ ಹೋರಾಟದಿಂದ ಗೆದ್ದಿದ್ದೇವೆ; ಬಸನಗೌಡ ತುರವಿಹಾಳ್
ಬಸನಗೌಡ ತುರವಿಹಾಳ್
Follow us
sandhya thejappa
|

Updated on:May 02, 2021 | 2:52 PM

ಬೆಂಗಳೂರು: ಮಸ್ಕಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಸನಗೌಡ ತುರವಿಹಾಳ್, 30,600 ಕ್ಕೂ ಅಧಿಕ ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ. ಮಸ್ಕಿ ಕ್ಷೇತ್ರದಲ್ಲಿ ಒಗ್ಗಟ್ಟಿನ ಹೋರಾಟದಿಂದ ಗೆದ್ದಿದ್ದೇವೆ. ಮಸ್ಕಿ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಗೆಲುವು ಇಡೀ ಮಸ್ಕಿ ಕ್ಷೇತ್ರದ ಜನರ ಗೆಲುವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ನೆಪ ಮಾತ್ರದ ಅಭ್ಯರ್ಥಿ. ಇಡೀ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಋಣಿ. ಎಷ್ಟು ದಿನವಾದರೂ ಅವರ ಋಣ ತೀರಿಸಲಾಗಲ್ಲ ಎಂದು ಮಾತನಾಡಿದ ಬಸನಗೌಡ ತುರವಿಹಾಳ್, ಇವತ್ತು ಮತದಾರ ಪ್ರಭುಗಳ ಪಾದಗಳಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತ್ತೇನೆ. ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಷ್ಟಗಿ ಕೈ ಶಾಸಕ ಅಮರೇಗೌಡ ಬಯ್ಯಾಪೂರ ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಜಿಲ್ಲೆಯ ಎಲ್ಲ ನಾಯಕರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ನನಗೆ 85 ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಪ್ರತಿಸ್ಪರ್ಧಿ ಪ್ರತಾಪಗೌಡರಿಗೆ 50 ಸಾವಿರಕ್ಕೂ ಅಧಿಕೃತ ಮತಗಳ ಬಂದಿವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಲ್ಲಿ ಬೆಳವಣಿಗೆ ಕಾಣುತ್ತಿದೆ. ಮತದಾರರ ಆಶೀರ್ವಾದವನ್ನು ತೀರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೀನಿ. ಮನೆಯ ಸೇವಕನಾಗಿ ನಾನು ಕೆಲಸ ಮಾಡುತ್ತೀನಿ. ಜನ ನಂಗೆ ದೇಣಿಗೆ ಕೊಟ್ಟು ಗೆಲ್ಲಿಸಿದ್ದಾರೆ. ಯಾವುದೇ ಹಳ್ಳಿಗೆ ಹೋದರೂ ಜನ ನನಗೆ ದೇಣಿಗೆ ಕೊಟ್ಟಿದ್ದಾರೆ. ಬಸನಗೌಡ ಅಭ್ಯರ್ಥಿ ಅಲ್ಲ, ನಾವೇ ಅಭ್ಯರ್ಥಿ ಎಂದು ಗೆಲ್ಲಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ

ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ಅವಕಾಶವಿತ್ತು, ರಾಜಕೀಯ ಕುತಂತ್ರದಿಂದ ಹಿನ್ನಡೆಯಾಗಿದೆ; ಯತೀಂದ್ರ ಸಿದ್ದರಾಮಯ್ಯ ಟ್ವೀಟ್

ಮಸ್ಕಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಿಂದ ಗೆಲುವು, ಸಂಭ್ರಮಾಚರಣೆ ಮಾಡದಂತೆ ಕಾರ್ಯಕರ್ತರಿಗೆ ಮನವಿ ಮಾಡಿದ ಡಿಕೆಶಿ

(basanagouda turvihal says we have won in Muski with solidarity)

Published On - 2:49 pm, Sun, 2 May 21