ಬಳ್ಳಾರಿ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇದೆ: ಬಳ್ಳಾರಿ ಡಿಸಿ ಪವನ್‌ ಕುಮಾರ್ ಮಾಲಿಪಾಟಿ

ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿನಿತ್ಯ 1 ಸಾವಿರ ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಬಳ್ಳಾರಿ ಜಿಲ್ಲೆಗೆ ಬೇಕಾಗುವ 27 ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಕರ್ನಾಟಕ ಸೇರಿ ನೆರೆಯ ರಾಜ್ಯಗಳಿಗೆ ನಿತ್ಯ 800 ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಡಿಸಿ ಪವನ್‌ ಕುಮಾರ್ ಮಾಲಿಪಾಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇದೆ: ಬಳ್ಳಾರಿ ಡಿಸಿ ಪವನ್‌ ಕುಮಾರ್ ಮಾಲಿಪಾಟಿ
ಸಾಂದರ್ಭಿಕ ಚಿತ್ರ
Follow us
preethi shettigar
|

Updated on:May 02, 2021 | 3:02 PM

ಬಳ್ಳಾರಿ: ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸೋಂಕಿತರ ಪ್ರಮಾಣದ ಜೊತೆಗೆ ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಮಾತು ಕೂಡ ಕೇಳೆ ಬಂದಿದೆ. ಹೀಗಿರುವಾಗಲೇ ಬಳ್ಳಾರಿ ಜಿಲ್ಲೆಯ ಡಿಸಿ ಪವನ್‌ ಕುಮಾರ್ ಮಾಲಿಪಾಟಿ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇದೆ ಎಂದು ತಿಳಿಸಿದ್ದಾರೆ.

ಸದ್ಯ 60 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 50 ವೆಂಟಿಲೇಟರ್‌ಗಳು ವಾರದೊಳಗೆ ಬರಲಿವೆ ಈ ಬಗ್ಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಜತೆ ಚರ್ಚೆ ಮಾಡಿದ್ದೇನೆ. ಜಿಂದಾಲ್ ಕಂಪನಿಯಲ್ಲಿ ಶೀಘ್ರದಲ್ಲಿ ಬೆಡ್‌ಗಳ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಸೋಂಕಿತರಿಗೆ 1 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡುತ್ತೇವೆ. ಜಿಲ್ಲೆಯಲ್ಲಿ ಈಗಾಗಲೇ 1,200 ಆಕ್ಸಿಜನ್ ಬೆಡ್‌ಗಳಿವೆ ಎಂದು ಬಳ್ಳಾರಿಯಲ್ಲಿ ಡಿಸಿ ಪವನ್‌ ಕುಮಾರ್ ಮಾಲಿಪಾಟಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಆರ್​ಟಿಪಿಸಿಆರ್‌ ಟೆಸ್ಟಿಂಗ್ ರಿಪೋರ್ಟ್ ವಿಳಂಬ ಹಿನ್ನಲೆ, ಜಿಲ್ಲಾಸ್ಪತ್ರೆಯಲ್ಲಿ ಶೀಘ್ರದಲ್ಲಿ ಮತ್ತೊಂದು ಟೆಸ್ಟಿಂಗ್ ಲ್ಯಾಬ್ ಆರಂಭ ಮಾಡಲಾಗುವುದು. ಪ್ರತಿ ದಿನ ಕೂಡ ಆಕ್ಸಿಜನ್ ಬೆಡ್​ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿನಿತ್ಯ 1 ಸಾವಿರ ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಬಳ್ಳಾರಿ ಜಿಲ್ಲೆಗೆ ಬೇಕಾಗುವ 27 ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಕರ್ನಾಟಕ ಸೇರಿ ನೆರೆಯ ರಾಜ್ಯಗಳಿಗೆ ನಿತ್ಯ 800 ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಡಿಸಿ ಪವನ್‌ ಕುಮಾರ್ ಮಾಲಿಪಾಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಆಕ್ಸಿಜನ್​ ಸಂಕಷ್ಟದಲ್ಲಿರುವ ಭಾರತದ ನೆರವಿಗೆ ಹಲವು ದೇಶಗಳು; ಯುಕೆಯಿಂದ ಬಂದವು ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್​ಗಳು..

ಕಲಬುರಗಿ: ಅಪಘಾತದಲ್ಲಿ ಗಾಯಗೊಂಡಿದ್ದ 6 ವರ್ಷದ ಬಾಲಕ ವೆಂಟಿಲೇಟರ್ ಸಿಗದೆ ಸಾವು

Published On - 2:17 pm, Sun, 2 May 21