ಮಸ್ಕಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಿಂದ ಗೆಲುವು, ಸಂಭ್ರಮಾಚರಣೆ ಮಾಡದಂತೆ ಕಾರ್ಯಕರ್ತರಿಗೆ ಮನವಿ ಮಾಡಿದ ಡಿಕೆಶಿ
ನಿಯಮಾವಳಿ ಉಲ್ಲಂಘಿಸಿದರೆ ದೂರು ದಾಖಲಿಸಬಹುದು. ಹಾಗಾಗಿ ಯಾವುದೇ ಸಂಭ್ರಮಾಚರಣೆ ಮಾಡ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಆಗಲಿ ರಾಜ್ಯಕ್ಕೆ ಒಳ್ಳೆ ವಾತಾವರಣ ಬಯಸ್ತಿದ್ದಾರೆ. ಮತದಾರರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.
ಬೆಂಗಳೂರು: ಮಸ್ಕಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಕಾಂಗ್ರೆಸ್ನ ಬಸನಗೌಡ ತುರವಿಹಾಳ ಗೆಲುವು ಸಾಧಿಸಿದ್ದಾರೆ. ಆದ್ರೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡದಂತೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಕೊವಿಡ್ ನಿಯಮಾವಳಿ ಉಲ್ಲಂಘಿಸದಂತೆ ಡಿಕೆಶಿ ಕೇಳಿಕೊಂಡಿದ್ದಾರೆ.
ನಿಯಮಾವಳಿ ಉಲ್ಲಂಘಿಸಿದರೆ ದೂರು ದಾಖಲಿಸಬಹುದು. ಹಾಗಾಗಿ ಯಾವುದೇ ಸಂಭ್ರಮಾಚರಣೆ ಮಾಡ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಆಗಲಿ ರಾಜ್ಯಕ್ಕೆ ಒಳ್ಳೆ ವಾತಾವರಣ ಬಯಸ್ತಿದ್ದಾರೆ. ಮತದಾರರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದೆ ಅಂತನೂ ಸಂಭ್ರಮಾಚರಣೆ ಮಾಡಬೇಡಿ. ಕೆಪಿಸಿಸಿ ಕಚೇರಿಗೂ ಯಾರು ಬರಬಾರದು. ಡಿಎಂಕೆ ಗೆದ್ದಿದೆ ಅಂತನೂ ಯಾರೂ ಸಂಭ್ರಮಿಸಬಾರದು. ರಾಜ್ಯದಲ್ಲೂ ಚುನಾವಣೆ ಮುಂದೂಡಿ ಅಂತ ನಾವು ಸಾಕಷ್ಟು ಬಾರಿ ಕೇಳಿಕೊಂಡ್ವಿ. ಆದ್ರೂ ಮಾತು ಕೇಳಲಿಲ್ಲ. ಈಗ ಅನುಭವಿಸ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳಗೆ ಡಿ.ಕೆ.ಶಿವಕುಮಾರ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೂ ಕರೆ ಮಾಡಿ ಬೆಳಗಾವಿ ಕ್ಷೇತ್ರದ ಮಾಹಿತಿ ಪಡೆದಿದ್ದಾರೆ.
ಮಸ್ಕಿ ಉಪಚುನಾವಣೆಯ 9 ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ 29, 325 ಮತಗಳಿಂದ ಮುಂದಿದ್ದಾರೆ. ಹಾಗೇ ಬಿಜೆಪಿಯ ಪ್ರತಾಪ್ಗೌಡ ಪಾಟೀಲ್ 19014 ಮತ ಪಡೆದಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಸುಮಾರು 10,311 ಮತಗಳಿಂದ ಮುಂಚೂಣಿಯಲ್ಲಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಈಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.
Considering the COVID situation, irrespective of Karnataka By-Election results, I appeal to Congress workers & leaders not to have any kind of celebrations.
Please follow COVID protocols & continue your efforts to help people. This is a time for service & not celebration.
— DK Shivakumar (@DKShivakumar) May 2, 2021
Published On - 1:57 pm, Sun, 2 May 21