5 ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ; ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಸಚಿವ ಕತ್ತಿಗೆ ನಿರಾಸೆ
ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ, ಡಿಸಿಎಂ ಗೋವಿಂದ ಕಾರಜೋಳರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಸಚಿವ ಉಮೇಶ್ ಕತ್ತಿಗೆ ನಿರಾಸೆಯಾಗಿದೆ.
ಬೆಂಗಳೂರು : ಐದು ಜಿಲ್ಲೆಗಳ ಉಸ್ತುವಾರಿ ಸಚಿವರ ಸ್ಥಾನವನ್ನು ಬದಲಾವಣೆ ಮಾಡಲಾಗಿದೆ. ಆ ಮೂಲಕ ಗೋವಿಂದ ಕಾರಜೋಳರನ್ನು ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದ್ದು, ಉಮೇಶ್ ಕತ್ತಿ ಬಾಗಲಕೋಟೆ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾರೆ. ಇನ್ನು ಬೀದರ್ ಜಿಲ್ಲೆಗೆ ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್ ಕೋಲಾರ ಜಿಲ್ಲೆ, ಮುರುಗೇಶ್ ನಿರಾಣಿ ಕಲಬುರಗಿ ಜಿಲ್ಲೆ, ಎಸ್.ಅಂಗಾರ ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ, ಡಿಸಿಎಂ ಗೋವಿಂದ ಕಾರಜೋಳರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಸಚಿವ ಉಮೇಶ್ ಕತ್ತಿಗೆ ನಿರಾಸೆಯಾಗಿದೆ. ಇನ್ನೊಂದು ಕಡೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಮುರುಗೇಶ್ ನಿರಾಣಿಗೂ ಕೂಡ ನಿರಾಸೆಯಾಗಿದೆ. ಒಟ್ಟಾರೆ ಯಾವ ಸಚಿವರಿಗೂ ತವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗದಂತಾಗಿದೆ.
ಇದನ್ನೂ ಓದಿ:
ಹತ್ತು ರೂಪಾಯಿ ಲಂಚ ಪಡೆದಿದ್ದು ಸಾಬೀತಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಮುರುಗೇಶ್ ನಿರಾಣಿ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯನ್ನು ಎಸ್.ಅಂಗಾರಗೆ ನೀಡಿ: ಯು.ಟಿ.ಖಾದರ್
ಏಳೆಂಟು ಸಚಿವರು ನಾಳೆ 3.50ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಾರೆ -ಸಿಎಂ ಬಿ.ಎಸ್. ಯಡಿಯೂರಪ್ಪ