ಹುಬ್ಬಳ್ಳಿ: ಬೆಳಿಗ್ಗೆ ಮದುವೆ, ರಾತ್ರಿ ಮದುಮಗ ಸಾವು

ಮನುಷ್ಯನಿಗೆ ಹಲವು ಬಯಕೆಗಳಿರುತ್ತವೆ. ಆ ಬಯಕೆಗಳ ಸಾಲಿನಲ್ಲಿ ಮುದುವೆ ಕೂಡಾ ಒಂದಾಗಿರುತ್ತದೆ. ಮದುವೆ ಆಗಿ ತನ್ನ ಪತ್ನಿ, ಪತಿ ಹಾಗು ಮಕ್ಕಳೊಂದಿಗೆ ಅರಾಮಾಗಿ ಇರಬೇಕೆಂಬ ಆಸೆಯಿರುತ್ತದೆ. ಆದರೆ ಕೆಲವರ ಬಾಳಿಗೆ ಆಸೆ ಎನ್ನುವುದು ಕೇವಲ ಆಸೆಯಾಗಿ ಉಳಿಯುತ್ತದೆ.

ಹುಬ್ಬಳ್ಳಿ: ಬೆಳಿಗ್ಗೆ ಮದುವೆ, ರಾತ್ರಿ ಮದುಮಗ ಸಾವು
ಮೃತ ವ್ಯಕ್ತಿ ಶಶಿಕುಮಾರ್ ಪಟ್ಟಣಶೆಟ್ಟಿ
Follow us
sandhya thejappa
|

Updated on: May 02, 2021 | 1:25 PM

ಹುಬ್ಬಳ್ಳಿ: ಸಾವು ಎನ್ನುವುದು ಯಾವಾಗ? ಹೇಗೆ? ಬುರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಬಾಳಿ ಬದುಕಬೇಕಾದ ಅದೆಷ್ಟೋ ಜೀವಿಗಳು ನೋಡ ನೋಡುತ್ತಿದ್ದಂತೆ ಸಾವಿಗೀಡಾಗುತ್ತವೆ. ಕನಸಿನ ಮೂಟೆಯನ್ನೆ ಹೊತ್ತ ಮನುಷ್ಯನ ಆಸೆ ಆಕಾಂಶೆಗಳನ್ನು ಸಾವು ಕ್ಷಣಾಮಾರ್ಧದಲ್ಲಿ ಕಿತ್ತುಕೊಳ್ಳುತ್ತದೆ. ಇಂತಹದೊಂದು ಘಟನೆ ಇದೀಗ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ನಡೆದಿದೆ.

ಮನುಷ್ಯನಿಗೆ ಹಲವು ಬಯಕೆಗಳಿರುತ್ತವೆ. ಆ ಬಯಕೆಗಳ ಸಾಲಿನಲ್ಲಿ ಮುದುವೆ ಕೂಡಾ ಒಂದಾಗಿರುತ್ತದೆ. ಮದುವೆ ಆಗಿ ತನ್ನ ಪತ್ನಿ, ಪತಿ ಹಾಗು ಮಕ್ಕಳೊಂದಿಗೆ ಅರಾಮಾಗಿ ಇರಬೇಕೆಂಬ ಆಸೆಯಿರುತ್ತದೆ. ಆದರೆ ಕೆಲವರ ಬಾಳಿಗೆ ಆಸೆ ಎನ್ನುವುದು ಕೇವಲ ಆಸೆಯಾಗಿ ಉಳಿಯುತ್ತದೆ.

ಮದುವೆಯಾಗಿದ್ದ ಮೊದಲ ದಿನವೇ ಮದುಮಗ ಸಾವನ್ನಪ್ಪಿದ್ದಾರೆ. ಈ ಘಟನೆ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ನಡೆದಿದೆ. ನಿನ್ನೆ ಅಷ್ಟೇ (ಮೇ 1) ಮದುವೆಯಾಗಿದ್ದ ಶಶಿಕುಮಾರ್ ಪಟ್ಟಣಶೆಟ್ಟಿ ಎಂಬಾತ ಸಾವನ್ನಪ್ಪಿದ್ದಾರೆ. ಮದುವೆಯಾಗಿ ಶಶಿಕುಮಾರ್ ಮಾವನ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಇದಕ್ಕಿದ್ದಂತೆ ಸಾವಿಗೀಡಾಗಿದ್ದರಿಂದ ಹೃದಯಾಘಾತವಾಗಿರಬೇಕೆಂದು ಹೇಳಲಾಗುತ್ತಿದೆ.

ಈ ಹಿಂದೆ ಏಪ್ರಿಲ್ 29 ರಂದು ಮದುವೆಯಾಗಬೇಕಿದ್ದ ಚಿಕ್ಕಮಗಳೂರಿನ ಪೃಥ್ವಿರಾಜ್ ಎಂಬಾತ ಆ ದಿನವೇ ಸಾವನ್ನಪ್ಪಿದ್ದರು. ಪೃಥ್ವಿರಾಜ್ ಸಾವಿನ್ನಪ್ಪಿದ 10 ದಿನಗಳ ಹಿಂದೆ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು.  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೃಥ್ವಿರಾಜ್​ ಕೊರೊನಾ ಸೋಂಕಿನ ತೀವ್ರತೆಗೆ ಸಿಕ್ಕು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸುದ್ದಿ ರಾಜ್ಯದ ಜನತೆಗೆ ನೋವನ್ನು ತಂದಿತ್ತು.

ಇದನ್ನೂ ಓದಿ

ಭಾರತದಲ್ಲಿ ಒಂದೇ ದಿನ 3,689 ಜನ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಬಲಿ

ಅಂತ್ಯಸಂಸ್ಕಾರಕ್ಕೆ ಉಚಿತ ಚಿತಾಗಾರ; ಕೊರೊನಾ ಸಂಕಷ್ಟಕ್ಕೆ ಮಿಡಿದ ದೇವಾಂಗ ಮಂಡಳಿ

(man who was married yesterday has died at hubli)