ಶ್ರೀರಾಮ ಮಂದಿರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ PFI ನಾಯಕರ ವಿರುದ್ಧ ಕಾನೂನು ಕ್ರಮ: ಬಸವರಾಜ ಬೊಮ್ಮಾಯಿ

|

Updated on: Feb 19, 2021 | 11:03 PM

ಶ್ರೀರಾಮ ಮಂದಿರ ನಿರ್ಮಾಣ ಕುರಿತು ಆಕ್ಷೇಪಾರ್ಹ, ಅಸಂವಿಧಾನಿಕ ಹೇಳಿಕೆ ನೀಡಿರುವ ಪಿಎಫ್​ಐ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶ್ರೀರಾಮ ಮಂದಿರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ PFI ನಾಯಕರ ವಿರುದ್ಧ ಕಾನೂನು ಕ್ರಮ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಶ್ರೀರಾಮ ಮಂದಿರ ನಿರ್ಮಾಣ ಕುರಿತು ಆಕ್ಷೇಪಾರ್ಹ, ಅಸಂವಿಧಾನಿಕ ಹೇಳಿಕೆ ನೀಡಿರುವ ಪಿಎಫ್​ಐ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರಿನ ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಫ್ಐ ನಾಯಕರು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ ಬೊಮ್ಮಾಯಿ, ಇಂಥ ಹೇಳಿಕೆಗಳನ್ನು ನಮ್ಮ ಸರ್ಕಾರ ಎಂದಿಗೂ ಎಂದಿಗೂ ಸಹಿಸುವುದಿಲ್ಲ. ಪಿಎಫ್​ಐ ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಇಂಥ ಹೇಳಿಕೆ ನೀಡುವ ಮೂಲಕ ತನ್ನ ನಿಜ ಬಣ್ಣವನ್ನು ಪಿಎಫ್‌ಐ ಜಗತ್ತಿಗೆ ತೋರಿಸಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್​ ಆದೇಶದ ಪ್ರಕಾರ ರಾಮಮಂದಿರ ನಿರ್ಮಾಣವಾಗುತ್ತಿದೆ. ದೇಶಭಕ್ತಿಯ ಪ್ರತೀಕ ಎಂಬಂತೆ ಆರ್​ಎಸ್​ಎಸ್ ಕಾರ್ಯನಿರ್ವಹಿಸುತ್ತಿದೆ. ಇಂಥ ಸಂಘಟನೆಯನ್ನು ಪಿಎಫ್​ಐ ಟೀಕಿಸುವುದು ತಪ್ಪು. ದೇಶ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

ಮಂಗಳೂರಿನ ಉಳ್ಳಾಲದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ್ದ ಪಿಎಫ್​ಐ ನಾಯಕ ಅನೀಸ್ ಅದು ರಾಮಮಂದಿರವಲ್ಲ, ಆರ್​ಎಸ್ಎಸ್ ಮಂದಿರ. ಮಂದಿರ ನಿರ್ಮಾಣಕ್ಕೆ ಯಾರೂ 1 ಪೈಸೆಯನ್ನೂ ನೀಡಬೇಡಿ ಎಂದು ಹೇಳಿದ್ದರು.

ಇದನ್ನೂ ಓದಿ: ಅದು ರಾಮಮಂದಿರವಲ್ಲ, RSS​ ಮಂದಿರ -PFI ಕಾರ್ಯದರ್ಶಿ ಅನೀಸ್ ಅಹ್ಮದ್