ರಾಮಮಂದಿರ ನಿರ್ಮಾಣಕ್ಕೆ 1 ಪೈಸೆಯೂ ಕೊಡಬೇಡಿ; ಅದು ರಾಮಮಂದಿರವಲ್ಲ, RSS ಮಂದಿರ -PFI ಕಾರ್ಯದರ್ಶಿ ಅನೀಸ್ ಅಹ್ಮದ್
Ayodhya Ram Mandir : ರಾಮಮಂದಿರ ನಿರ್ಮಾಣಕ್ಕೆ ಒಂದು ಪೈಸೆಯೂ ಕೊಡ್ಬೇಡಿ. ನಿಮ್ಮ ಮನೆ ಬಾಗಿಲಿಗೆ ಚಂದಾ ಸಂಗ್ರಹಕ್ಕೆ ಬಂದರೆ ಹಣ ಕೊಡಬೇಡಿ. ಅದು ರಾಮಮಂದಿರವಲ್ಲ, RSS ಮಂದಿರ ಎಂದು PFI ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.
ಮಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಒಂದು ಪೈಸೆಯೂ ಕೊಡ್ಬೇಡಿ. ನಿಮ್ಮ ಮನೆ ಬಾಗಿಲಿಗೆ ಚಂದಾ ಸಂಗ್ರಹಕ್ಕೆ ಬಂದರೆ ಹಣ ಕೊಡಬೇಡಿ. ಅದು ರಾಮಮಂದಿರವಲ್ಲ, RSS ಮಂದಿರ ಎಂದು PFI ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ. ಜೊತೆಗೆ, PFIನ ಶತ್ರು ಅಂದ್ರೆ ಅದು RSS ಮಾತ್ರ ಎಂದು ಸಹ ಹೇಳಿದ್ದಾರೆ.
ನಗರದ ಉಳ್ಳಾಲದಲ್ಲಿ ಮಾತನಾಡಿದ ಅನೀಸ್ ಅಹ್ಮದ್ ದೇಶದಲ್ಲಿರುವ RSS ಕ್ಯಾನ್ಸರ್ನಂತೆ, ಅದು ವಾಸಿ ಆಗಲ್ಲ. RSS ಆಗಾಗ ದೇಶದ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ನಮ್ಮದು ಆ್ಯಂಟಿ ಹಿಂದೂ ಸಂಘಟನೆಯಲ್ಲ. RSS ಆ್ಯಂಟಿ ಹಿಂದೂ ಸಂಘಟನೆ ಎಂದು ಕಿಡಿಕಾರಿದರು.
ದೇಶದಲ್ಲಿ ಈಗ ಹಿಂದೂ V/S ಮುಸ್ಲಿಂ ಅಲ್ಲ, ಮುಸ್ಲಿಂ V/S RSS ಪರಿಸ್ಥಿತಿ ನಿರ್ಮಾಣ ಆಗ್ತಿದೆ. PFIನ ದುಶ್ಮನ್ ಯಾರಾದ್ರು ಇದ್ರೆ ಅದು RSS ಮಾತ್ರ. ದೇಶದಲ್ಲಿ ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿಯ ಜಾಗ ಬಿಟ್ಟು ಕೊಡಿ ಎಂದಿದ್ರು. ಈಗ ಜಾಗ ಬಿಟ್ಟುಕೊಟ್ಟಾಯ್ತು, ಆದರೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಇನ್ನೂ ಕೂಡ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಹೇಳಿದರು.
‘ED ಕೇಂದ್ರ ಸರ್ಕಾರದ ಸುಪಾರಿ ಕಿಲ್ಲರ್’ ಅಷ್ಟಕ್ಕೇ ನಿಲ್ಲದೆ, IT, EDಯಿಂದ PFI ಮೇಲೆ ದಾಳಿ ನಡೆಯಿತು. ED ಸಂಸ್ಥೆ ಕೇಂದ್ರ ಸರ್ಕಾರದ ಸುಪಾರಿ ಕಿಲ್ಲರ್ ಎಂದು ಉಳ್ಳಾಲದಲ್ಲಿ ಅನೀಸ್ ಅಹ್ಮದ್ ಹೇಳಿಕೆ ಕೊಟ್ಟಿದ್ದಾರೆ.
PFIನವರು ರಾಕ್ಷಸರು -ಮುತಾಲಿಕ್ ವಾಗ್ದಾಳಿ ಇತ್ತ, PFI ನಾಯಕ ಅನೀಸ್ ಅಹ್ಮದ್ ಹೇಳಿಕೆಗೆ ಧಾರವಾಡದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. PFIನವರು ರಾಕ್ಷಸರು ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು. ಜೊತೆಗೆ, ನಿಮ್ಮ ಹೇಳಿಕೆ ಮೂರ್ಖತನದ್ದು, ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಹೇಳಿದರು.
ನೀವು ಬಾಬರ್‌ನ ವಂಶಸ್ಥರು, ಬಾಬರ್ ಪರ ನಿಂತವರು. ರಾಮನ ಬಗ್ಗೆ ಮಾತನಾಡಲು ನಿಮಗೆ ಒಂಚೂರು ಹಕ್ಕಿಲ್ಲ. ರಾಮ ಮಂದಿರ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಟ್ರಸ್ಟ್ ರಚಿಸಿ, ಮಂದಿರ ನಿರ್ಮಿಸಲು ಸುಪ್ರೀಂ ಆದೇಶಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ ಮಂದಿರ ಕಟ್ಟಲಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಇದು ರಾಕ್ಷಸರ ಬಾಯಲ್ಲಿ ಭಗವದ್ಗೀತೆ ಬಂದಂತೆ. PFIನವರು ರಾಕ್ಷಸರು. ನಿಮಗೆ ಈ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಇದುವರೆಗೂ 22 ಕೊಲೆಗಳನ್ನು ಮಾಡಿದ್ದು ನೀವು. ನೀವೇ ಅಶಾಂತಿ ಹುಟ್ಟಸುತ್ತಿದ್ದೀರಿ. ನೀವು ಹಲ್ಲೆಕೋರರು, ನಾಲಾಯಕ್. ನಿಮಗೆ RSS ಬಗ್ಗೆ ಮಾತಾಡಲು ಹಕ್ಕಿಲ್ಲ ಎಂದು PFI ವಿರುದ್ಧ ಮುತಾಲಿಕ್ ತಮ್ಮ ಆಕ್ರೋಶ ಹೊರಹಾಕಿದರು.
ಅನುಮತಿ ಇಲ್ಲದಿದ್ದರೂ ಯೂನಿಟಿ ಮಾರ್ಚ್; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಮೊಟೊ ದೂರು ದಾಖಲು ಇನ್ನು, PFI ಯೂನಿಟಿ ಮಾರ್ಚ್ ವಿಚಾರವಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸುಮೊಟೊ ದೂರು ದಾಖಲಾಗಿದೆ. 2 ದೂರಿನಲ್ಲಿ 14 ಜನರ ವಿರುದ್ಧ FIR ದಾಖಲಾಗಿದೆ.
ಫೆಬ್ರವರಿ 17ರಂದು PFI ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು. ಈ ವೇಳೆ, ಅನುಮತಿ ಇಲ್ಲದಿದ್ದರೂ ಯೂನಿಟಿ ಮಾರ್ಚ್ ನಡೆಸಲಾಗಿದೆ. ಜೊತೆಗೆ, RSS ಹಾಗೂ ರಾಮಮಂದಿರದ ವಿಚಾರದಲ್ಲಿ ವಿವಾದಿತ ಘೋಷಣೆ ಮಾಡಲಾಗಿದೆ. ಹಾಗಾಗಿ, ಶಾಂತಿಭಂಗ ಮತ್ತು ಕೋಮು ಪ್ರಚೋದನೆ ಆರೋಪದಡಿ ಪೊಲೀಸರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Siddaramaiah ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ
Published On - 5:28 pm, Fri, 19 February 21