TV9 Kannada Digital Impact: ಟಿವಿ9 ವರದಿಗೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೊಸ ವೆಬ್​ಸೈಟ್​ಗೆ ಆದೇಶ

Department of Women and Child Development: ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?’ ಎಂಬ ವರದಿಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಂದಿಸಿದ್ದಾರೆ. ಅತಿ ಶೀಘ್ರದಲ್ಲೇ ವೆಬ್​ಸೈಟ್ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

TV9 Kannada Digital Impact: ಟಿವಿ9 ವರದಿಗೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೊಸ ವೆಬ್​ಸೈಟ್​ಗೆ ಆದೇಶ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Feb 19, 2021 | 3:32 PM

ಮಹಿಳಾ ದಿನಾಚರಣೆಗೆ (ಮಾರ್ಚ್​ 8) ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ ಹೇಗೆ ಸ್ಪಂದಿಸುತ್ತಿದೆ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆನ್​ಲೈನ್​ ಸೇವೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ಜನಸಾಮಾನ್ಯರ ಸಮಸ್ಯೆಯನ್ನು ಆಲಿಸಲು ಎಷ್ಟು ತ್ವರಿತಗತಿಯಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ? ಎಂದು ಪರಿಶೀಲಿಸಲು ಟಿವಿ9 ಕನ್ನಡ ಡಿಜಿಟಲ್ ರಿಯಾಲಿಟಿ ಚೆಕ್​ ನಡೆಸಿತ್ತು. ಆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್​ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಗಮನಕ್ಕೆ ಬಂದಿತ್ತು. ತಕ್ಷಣವೇ ಅದರ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಇದೀಗ ನಮ್ಮ ವರದಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಅತಿ ಶೀಘ್ರದಲ್ಲೇ ವೆಬ್​ಸೈಟ್ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಜೊಲ್ಲೆ ಅವರ ಆಪ್ತ ಕಾರ್ಯದರ್ಶಿ ಮಹೇಶ್ ಕರಜಗಿ, ಸಮಸ್ಯೆ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಇಲಾಖೆಯ ವೆಬ್​ಸೈಟ್​ ನಿರ್ವಹಣೆಯಲ್ಲಿ ಲೋಪವಿರುವ ಕುರಿತು ಮಾಹಿತಿಯನ್ನೂ ತರಿಸಿಕೊಂಡಿದ್ದಾರೆ. ಇದೀಗ ಹೊಸ ವೆಬ್​ಸೈಟ್​ ರಚಿಸಲು ಆದೇಶ ನೀಡಲಾಗಿದ್ದು, ಮುಂದಿನ ಹತ್ತು ದಿನಗಳಲ್ಲಿ ಅದು ಬಳಕೆಗೆ ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ನೂತನ ವೆಬ್​ಸೈಟ್​ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದ್ದು, ಯಾವುದೇ ರೀತಿಯ ಗೊಂದಲಕ್ಕೂ ಆಸ್ಪದವಿರುವುದಿಲ್ಲ. ಜವಾಬ್ದಾರಿಯುತ ಮಾಧ್ಯಮವಾಗಿ ಟಿವಿ9 ಕನ್ನಡ ಡಿಜಿಟಲ್​ ಈ ಕುರಿತು ವರದಿ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ವರದಿಯ ಹಿನ್ನೆಲೆ ಏನು?  ಫೆಬ್ರವರಿ 17ರ ಬುಧವಾರದಂದು ಟಿವಿ9 ಕನ್ನಡ ಡಿಜಿಟಲ್‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?’ ಎಂಬ ತಲೆಬರಹದಡಿಯಲ್ಲಿ ವರದಿ ಪ್ರಕಟಿಸಿತ್ತು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು dwcd.kar.nic.in ವಿಳಾಸದಲ್ಲಿ ವೆಬ್​ಸೈಟ್ ಹೊಂದಿದೆ. ಇಲಾಖೆ ಹೇಳುವ ಪ್ರಕಾರ ಇದರಲ್ಲಿ ಎಲ್ಲಾ ಮಾಹಿತಿಗಳೂ ಸಿಗಬೇಕು ಹಾಗೂ ತುರ್ತು ಸಂದರ್ಭದಲ್ಲಿ ಜನರು ಈ ವೆಬ್​ಸೈಟ್  ಸಹಕಾರದೊಂದಿಗೆ ಇಲಾಖೆಯನ್ನು ಸಂಪರ್ಕಿಸಬಹುದು. ಈ ವೆಬ್​ಸೈಟ್​ನ ಮುಖಪುಟದ ಕೊನೆಯಲ್ಲಿ ನಮಗೆ ಕರೆ ಮಾಡಿ, ನಮಗೆ ಇಮೇಲ್ ಮಾಡಿ, ವಿವರವಾದ ಸಂಪರ್ಕ ಪಟ್ಟಿ ವೀಕ್ಷಿಸಿ ಎಂಬೆಲ್ಲಾ ತಲೆಬರಹದೊಂದಿಗೆ ಮಾಹಿತಿ ನೀಡಿರುವುದು ಕಾಣುತ್ತದೆ. ಅವರ ಪ್ರಕಾರ ನಾವು ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಅಥವಾ ಹಾಗೆ ತಿಳಿದುಕೊಳ್ಳಬಹುದು. ಹೀಗೆ ಹೇಳಲು ಕಾರಣವೆಂದರೆ, ಆ ವೆಬ್​ಸೈಟ್​ನಲ್ಲಿ ನೀಡಲಾಗಿರುವ ಕೆಲ ಮೆನುಗಳಿಗೆ ಹೋಗಿ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಏನೂ ಸಿಗುವುದಿಲ್ಲ. ಅಲ್ಲಿ ನೀಡಲಾದ 080-22355984 ಸಂಖ್ಯೆಗೆ ಕರೆ ಮಾಡಿದರೆ ಅದು ಅಸ್ತಿತ್ವದಲ್ಲೇ ಇಲ್ಲ. ಇನ್ನು ಮೇಲ್ ಮಾಡಿದರಂತೂ ತಕ್ಷಣಕ್ಕೆ ಪ್ರತ್ಯುತ್ತರ ನಿರೀಕ್ಷಿಸುವುದು ಮೂರ್ಖತನವಾಗಿಬಿಡುತ್ತದೆ’ ಎಂದು ವರದಿಯಲ್ಲಿ ಇಲಾಖೆಯ ಬೇಜವಾಬ್ದಾರಿತನವನ್ನು ಟೀಕಿಸಲಾಗಿತ್ತು. ವರದಿ ಪ್ರಕಟವಾದ ತಕ್ಷಣವೇ ಸಚಿವರು ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಹೊಸದಾಗಿ ವೆಬ್​ಸೈಟ್​ ಅಭಿವೃದ್ಧಿಪಡಿಸಲು ಆದೇಶ ಹೊರಡಿಸಿದ್ದಾರೆ.

ಮಾರ್ಚ್​ 8ರ ಮಹಿಳಾ ದಿನಾಚರಣೆಯೊಳಗಾದರೂ ಈ ವೆಬ್​ಸೈಟ್​ ಸರಿಹೋಗಲಿದೆಯಾ? ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವಂತೆ, ಸುಲಭವಾಗಿ ಅವರಿಗೆ ಮಾಹಿತಿ ಸಿಗುವಂತೆ ರೂಪುಗೊಳ್ಳಲಿದೆಯಾ ಎಂದು ಕಾದುನೋಡಬೇಕಿದೆ.

TV9 KANNADA DIGITAL IMPACT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?

Department of Women and Child Developmentಈ ನಂಬರ್​ ಅಸ್ತಿತ್ವದಲ್ಲಿ ಇಲ್ಲ

Department of Women and Child Development

ಡೌನ್​ಲೋಡ್​ ಮಾಡಲಾಗದ ವಿವರಗಳು!

Department of Women and Child Developmentಇಲಾಖೆಗೆ ಸಂಬಂಧಿಸಿದ ಪ್ರಮುಖರು

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ, ನೀವಾದರೂ ಅಸ್ತಿತ್ವದಲ್ಲಿದ್ದೀರಾ?

Published On - 3:27 pm, Fri, 19 February 21